ಚಿತ್ರದುರ್ಗ |ಎಸ್.ಜೆ.ಎಂ.ಐ.ಟಿ. ಇಂಜನಿಯರಿಂಗ್ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ.

ಚಿತ್ರದುರ್ಗ ಸೆ. 19 :

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಪದವಿಯನ್ನು ಪಡೆದ ನಂತರ ಸರ್ಕಾರಿ ನೌಕರಿಯನ್ನು ಪಡೆಯಬೇಕೆಂಬ ಉದ್ಧೇಶವನ್ನು ಹೊಂದದೆ ನಿಮ್ಮ ಸ್ವಂತ ಉದ್ಯಮವನ್ನು ಸ್ಥಾಪನೆ ಮಾಡುವುದರ ಮೂಲಕ ಬೇರೆಯವರಿಗೆ ಕೆಲಸವನ್ನು ಕೂಡುವಂತ ಕಾರ್ಯಕ್ಕೆ ಮುಂದಾಗುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಆನಂದ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೆ.ಯು.ಟಿ.ಸಿ. ಬೆಂಗಳೂರು, ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್.ಎ.ಎಂ.ಪಿ.) ಯೋಜನೆಯಡಿಯಲ್ಲಿ ನಗರದ ಎಸ್.ಜೆ.ಎಂ.ಐ.ಟಿ. ಇಂಜನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಓದನ್ನು ಅವರು ಪೋಷಕರು ನಿರ್ಣಯ ಮಾಡುತ್ತಾರೆ ಅವರು ಏನು ಓದಬೇಕು ಎನ್ನುವುದನ್ನು ಮಕ್ಕಳ ಮೇಲೆ ಹೇರುತ್ತಾರೆ. ಮಕ್ಕಳು ತಮಗೆ ಇಷ್ಠಇಲ್ಲದಿದ್ದರೂ ಅದನ್ನೇ ಓದುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಮೇಲೆ ಒತ್ತಡವನ್ನು ಹೇರುವುದರಿಂದ ಅವರು ಅತ್ಮಹತ್ಯೆಯಂತ ಕಾರ್ಯಕ್ಕೆ ಮುಂದಾಗುತ್ತಾರೆ ಎಂದರು.


ರಾಜ್ಯದಲ್ಲಿ ಪ್ರತಿ ವರ್ಷ ಹತ್ತು ಲಕ್ಷ ವಿದ್ಯಾರ್ಥಿಗಳು ವಿವಿಧ ರೀತಿಯ ಪದವಿಯನ್ನು ಪಡೆದು ಹೊರ ಬರುತ್ತಿದ್ದಾರೆ. ಈ ರೀತಿಯಾಗಿ ಹೋರಗೆ ಬಂದವರಿಗೆಲ್ಲಾ ಸರ್ಕಾರ ಉದ್ಯೋಗವನ್ನು ನೀಡುತ್ತದೆ ಎಂದು ಭರವಸೆಯನ್ನು ನೀಡಿಲ್ಲ ಅಲ್ಲದೆ ವಿದ್ಯಾರ್ಥಿಗಳು ಸಹಾ ನಮಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆಯನ್ನು ಸಹಾ ಇಟ್ಟುಕೊಳ್ಳಬಾರದು, ಇದನ್ನು ಬಿಟ್ಟು ನೀವು ಕಲಿತ ವಿದ್ಯೆಗೆ ಅನುಗುಣವಾಗಿ ಸ್ವಯಂ ಉದ್ಯೋಗವನ್ನು ಆರಂಭ ಮಾಡುವತ್ತ ಮುಂದಾಗಬೇಕಿದೆ ಎಂದ ಅವರು ಈಗ ದೊಡ್ಡ ದೊಡ್ಡ ಉದ್ಯಮಿಗಳಾದ ಆದಾನಿ, ಅಂಬಾನಿ, ಟಾಟಾರವರು ಸಹಾ ಎಲ್ಲರಂತೆ ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯಮೆಯನ್ನು ಪ್ರಾರಂಭ ಮಾಡಿ ನಂತರ ಬೃಹತ್ ಉದ್ಯಮಿಗಳಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು.
ಇಂದಿನ ದಿನಮಾನದಲ್ಲಿ ಬಹುತೇಕ ಯುವ ಜನತೆ ವೈಟ್ ಕಾಲರ್ ಕೆಲಸವನ್ನು ಹುಡುಕುತ್ತಾರೆ ನಮಗೆ ಯಾವುದೇ ಜವಾಬ್ದಾರಿ ಬೇಡ ಬೆಳಿಗ್ಗೆ 10ಕ್ಕೆ ಹೋಗಿ ಸಂಜೆ 5ಕ್ಕೆ ಮನೆಗೆ ಬರುವಂತ ಕೆಲಸವನ್ನು ಹುಡುಕುತ್ತಾರೆ ಯಾರಿಗೂ ಸಹಾ ಒತ್ತಡದ ಕೆಲಸ ಬೇಡ, ಸುಲಭವಾದ ಕೆಲಸಕ್ಕೆ ಮುಗಿ ಬೀಳುತ್ತಾರೆ, ಸರ್ಕಾರದಲ್ಲಿ ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಹಲವಾರು ವಿವಿಧ ರೀತಿಯ ಯೋಜನೆಗಳು ಇವೆ ಇದರ ಮೂಲಕ ಸ್ವಂತವಾದ ಕೈಗಾರಿಕೆಯನ್ನು ಕಡಿಮೆ ಬಂಡವಾಳದಲ್ಲಿ ಪ್ರಾರಂಭ ಮಾಡುವುದರ ಮೂಲಕ ಉದ್ಯಮಿಗಳಾಗಿ ಇದರಿಂದ ನಿಮಗೂ ಸಹಾಯವಾಗುವುದ್ದಲ್ಲದೆ ಬೇರೆಯವರಿಗೂ ಸಹಾ ಉದ್ಯೋಗವನ್ನು ನೀಡಿದಂತೆ ಆಗುತ್ತದೆ ಎಂದು ಆನಂದ ಕುಮಾರ್ ಕಿವಿ ಮಾತು ಹೇಳಿದರು.


ಎಸ್,ಜೆ.ಎಂ.ಐ.ಟಿ. ಕಾಲೇಜಿನ ಪ್ರಾಂಶುಪಾಲರಾದ ಡಾ.ಭರತ್ ಮಾತನಾಡಿ, ಪದವಿಯನ್ನು ಪಡೆದವರೆಲ್ಲಾ ಸರ್ಕಾರಿ
ಉದ್ಯೋಗವನ್ನು ಪಡೆಯಲು ಸಾಧ್ಯವಿಲ್ಲ, ಈ ಹಿನ್ನಲೆಯಲ್ಲಿ ತಾವು ಕಲಿತ ಮೇಲೆ ಸ್ವಾವಲಂಭಿ ಯಾಗಿ ಇರುವುದನ್ನು ಕಲಿಯಬೇಕಿದೆ, ತಮ್ಮ ಕಲಿಗೆ ಅನುಗುಣವಾಗಿ ಸ್ವಂತವಾದ ಉದ್ಯಮವನ್ನು ಪ್ರಾರಂಭ ಮಾಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಬೇಕಿದೆ. ಇಂದಿನ ದಿನಮಾನದಲ್ಲಿ ಎಲ್ಲವೂ ಸಹಾ ಡಿಜಿಟಲಿಕರಣವಾಗುತ್ತಿದೆ ಇದರ ಪ್ರಯೋಜವನ್ನು ಪಡೆಯಬೇಕಿದೆ.
ತಂತ್ರಜ್ಞಾನವನ್ನು ಬಳಕೆ ಮಾಡುವುದರ ಮೂಲಕ ಪ್ರಗತಿಯನ್ನು ಸಾಧಿಸಬೇಕಿದೆ ನಾನು ಏನ್ನನಾದರೂ ಸಾಧನೆಯನ್ನು ಮಾಡುತ್ತೇನೆ ಎಂಬ ಛಲವನ್ನು ಹೊಂದಬೇಕಿದೆ ಇದರಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ತಿಮ್ಮಯ್ಯ, ಕಂಪ್ಯೂಟರ್ ಸೈನ್ಸ್‍ನ ಮುಖ್ಯಸ್ಥರಾದ ಕೃಷ್ಣಾರೆಡ್ಡಿ, ಮಂಜುನಾಥ್, ಕುಮರ್ ಭಗವಹಿಸಿದ್ದರು.

Views: 7

Leave a Reply

Your email address will not be published. Required fields are marked *