ಬೆಳಗಿನ ಉಪಹಾರ ತಡವಾದರೆ ಆಗುವ ಅಪಾಯಗಳು

ಸಾಮಾನ್ಯವಾಗಿ ಬೆಳಗಿನ ಉಪಹಾರವನ್ನು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಆದರೆ ಕೆಲಸದ ಒತ್ತಡ, ಸಮಯದ ಕೊರತೆ ಅಥವಾ ಅಭ್ಯಾಸದ ಕಾರಣಗಳಿಂದ ನಾವು ಉಪಹಾರ ಸೇವನೆಯನ್ನು ತಡ ಮಾಡುತ್ತೇವೆ. ಇದರಿಂದ ದೇಹಕ್ಕೆ ಹಲವಾರು ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.

ಮುಖ್ಯ ಪರಿಣಾಮಗಳು:

  1. ಮಧುಮೇಹದ ಅಪಾಯ
    ಉಪಹಾರ ತಡವಾದರೆ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಹೆಚ್ಚುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿ ಮುಂದೆ Type 2 Diabetes ಬರುವ ಸಾಧ್ಯತೆ ಹೆಚ್ಚಾಗುತ್ತದೆ.
  2. ತೂಕ ಹೆಚ್ಚಳ
    ಉಪಹಾರ ತಡವಾದರೆ ಮಧ್ಯಾಹ್ನ ಹೆಚ್ಚು ಹಸಿವಾಗಿ ಹೆಚ್ಚಿನ ಆಹಾರ ಸೇವಿಸುತ್ತೇವೆ. ತಡವಾಗಿ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ.
  3. ಜೀರ್ಣಕ್ರಿಯೆ ಸಮಸ್ಯೆಗಳು
    ತಡವಾಗಿ ಉಪಹಾರ ಸೇವಿಸಿದರೆ ಹೊಟ್ಟೆ ಉಬ್ಬರ, ಎದೆಯುರಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  4. ಶಕ್ತಿಯ ಕೊರತೆ
    ಉಪಹಾರ ತಡವಾದರೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗಿ ದಿನವಿಡೀ ಆಲಸ್ಯ, ನಿತ್ರಾಣ ಉಂಟಾಗುತ್ತದೆ.
  5. ಹಾರ್ಮೋನುಗಳ ಅಸಮತೋಲನ
    ತಡವಾಗಿ ಉಪಹಾರ ಸೇವಿಸುವುದರಿಂದ ದೇಹದ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಏರುತ್ತದೆ. ಇದು ಒತ್ತಡ ಹೆಚ್ಚಲು ಕಾರಣವಾಗುತ್ತದೆ.

ತಜ್ಞರ ಸಲಹೆ:

👉 ಆರೋಗ್ಯವಾಗಿರಲು ಬೆಳಿಗ್ಗೆ ಸರಿಯಾದ ಸಮಯಕ್ಕೆ ಸಮತೋಲಿತ ಮತ್ತು ಪೌಷ್ಟಿಕಾಂಶಯುಕ್ತ ಉಪಹಾರ ಸೇವಿಸಬೇಕು.

Views: 17

Leave a Reply

Your email address will not be published. Required fields are marked *