ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಸಿದ್ಧ, ಕರಣ : ಗರಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:11 – 13:42, ಗುಳಿಕ ಕಾಲ 10:41 – 12:11, ಯಮಗಂಡ ಕಾಲ 07:40 – 09:11
ಮೂರನೇ ದಿನದ ದೇವಿ ಚಂದ್ರಘಂಟಾ. ಘಂಟೆಯ ಆಕಾರದಲ್ಲಿ ಶಿರವಿದ್ದು, ಅದರ ಮೇಲೆ ಚಂದ್ರನನ್ನು ಧರಿಸಿದವಳು. ಅಂದರೆ ಕೌಮಾರಾವಸ್ಥೆಯಲ್ಲಿ ಶೋಭಿಸುವವಳು. ಕೆಂಪು ಬಣ್ಣದ ದೇಹ, ಯುದ್ಧಕ್ಕೆ ಸಿದ್ಧಳಾದಂತೆ, ಹತ್ತು ಕೈಗಳಲ್ಲಿ ನಾನಾ ಆಯುಧ ಧಾರಿಯಾಗಿರುವವಳು. ದೇವಿಯ ವಾಹನ ಸಿಂಹವಾಗಿದೆ. ಇಂತಹ ದೇವಿ ಆತ್ಮವಿಶ್ವಾಸ, ಶಾಂತಿಯನ್ನು ಕರುಣಿಸುವವಳು.
ಮೇಷ ರಾಶಿ :
ಕೆಲಸದ ಗಯಣಮಟ್ಟವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ. ಮಕ್ಕಳಿಗೆ ಸಿಗುವ ಗೌರವದಿಂದ ನಿಮಗೆ ಹೆಮ್ಮೆ. ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಕಾನೂನಿಗೆ ವಿರುದ್ಧವಾದ ವ್ಯವಹಾರವು ನಿಮಗೆ ತೊಡಕನ್ನು ಉಂಟುಮಾಡುವುದು. ನಿದ್ರಾಯಲ್ಲಿ ನಿಮಗೆ ಸಮಾಧಾನವಿರದು. ಆಪ್ತರು ನಿಮ್ಮಿಂದ ದೂರವಾಗಲಿದ್ದು ಆ ವೇದನೆಯನ್ನು ನೀವು ಸಹಿಸಲಾರಿರಿ. ಮನೋವೇಗದ ನಿಯಂತ್ರಣ ಅಲ್ಪಮಟ್ಟಿಗೆ ಸಾಧ್ಯ. ವಿದ್ಯಾರ್ಥಿಗಳು ಅಡ್ಡದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಮಾರ್ಗದರ್ಶನದ ಅವಶ್ಯಕತೆ ಹೆಚ್ಚು ಇರಲಿದೆ. ಸ್ವಾವಂಬಿಯಾಗಲು ನೀವು ಬಹುವಾಗಿ ಇಚ್ಛಿಸುವಿರಿ. ಸ್ಥಾನಮಾನಗಳೂ ನಿಮ್ಮನ್ನು ಹುಡುಕಿಕೊಂಡು ಬಂದಾವು. ಹಿರಿಯರು ಯಾರಾದರೂ ನಿಮ್ಮ ಕೆಟ್ಟ ಸ್ವಭಾವದ ಬಗ್ಗೆ ಹೇಳಿದರೆ ಅದನ್ನು ಬಿಡುವ ಬಗ್ಗೆ ಯೋಚಿಸಿ. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಬಾರದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುವಿರಿ.
ವೃಷಭ ರಾಶಿ :
ಹೃದಯ ದುರ್ಬಲವಾದಂತೆ ಹೊರಗಿನ ಲಕ್ಷಣದಿಂದ ಗೊತ್ತಾಗುವುದು. ಯಾವುದನ್ನಾದರೂ ಆಗಾಗ ಹೊಸತನ್ನಾಗಿಸಬೇಕು. ಸಂಸಾರದ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಅನಾರೋಗ್ಯದ ಕಾರಣದಿಂದ ನೀವು ಪ್ರಯಾಣವನ್ನು ಬದಲಾಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮಗೆ ಸಮಯ ಸಾಲದೆಂಬ ಆತಂಕವಿರುವುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವನ್ನು ದೂರ ಮಾಡಿಕೊಳ್ಳುವಿರಿ. ಕಲಿಕೆಯಲ್ಲಿ ಹೊಸತನವನ್ನು ತಂದುಕೊಳ್ಳುವಿರಿ. ಮಕ್ಕಳ ಕಾರಣದಿಂದ ನಿಮಗೆ ವಿದೇಶ ಪ್ರವಾಸ ಆಗಬಹುದು. ಪ್ರಾಮಾಣಿಕ ಪ್ರಯತ್ನವನ್ನು ನೀವು ಮಾಡಲಿದ್ದೀರಿ. ತೀರ್ಥಕ್ಷೇತ್ರಗಳ ಕಡೆಗೆ ಹೋಗಬೇಕೆನಿಸುವುದು. ಮಾತಿನಲ್ಲಿ ಸಿಕ್ಕಿಕೊಳ್ಳಬಹುದು. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು.
ಮಿಥುನ ರಾಶಿ :
ಕೆಲಸದ ಕಾರಣಕ್ಕೆ ಮೇಲಿನವರ ಜೊತೆ ಕಲಹವಾಗಲಿದೆ. ಅಕಾರಣವಾದ ಪ್ರೀತಿಯು ಅಕಾರಣವಾಗಿಯೇ ಮುಕ್ತಾಯವಾಗುವುದು. ಇಂದು ಹೆಚ್ಚು ಆದಾಯದ ಯೋಜನೆಗಳು ನಿಮ್ಮ ಪಾಲಿಗೆ ಸಿಗಲಿದೆ. ದುಂದುವೆಚ್ಚವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮವರ ಪ್ರೀತಿಯು ನಿಮ್ಮ ಮೇಲೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಲಾಭಗಳಿಸುವ ಯೋಜನೆಯನ್ನು ಕಂಡುಕೊಳ್ಳುವಿರಿ. ನಿವೃತ್ತಿಯಾದರೂ ನಿಮ್ಮ ಸೇವೆ ಮುಂದುವರಿಯುವುದು. ಸಂಗಾತಿಯಿಂದ ನೀವು ಹೆಚ್ಚಿನ ಆದಾಯವನ್ನು ನಿರೀಕ್ಷಿಸುವಿರಿ. ಸಹೋದರರ ನಡುವಿನ ಬಾಂಧವ್ಯವು ಸಡಿಲಾಗಬಹುದು. ಆಗಾಗ ಮಾತನಾಡುತ್ತ ಸಂಬಂಧವನ್ನು ಗಟ್ಟಿಮಾಡಿಕೊಳ್ಳಿ. ಕೆಲಸವನ್ನು ಸಮಯದ ಮಿತಿಯಲ್ಲಿ ಮಾಡುವುದು ಕಷ್ಟವಾದೀತು. ಮನಸ್ಸಿನ ಹತ್ತಾರು ಭಾವನೆಗಳು ನಿಮ್ಮನ್ನು ಕಾಡಿಸಬಹುದು. ಮಾನಸಿಕ ಅಸಮತೋಲನವು ನಿಮ್ಮ ಏಕಾಗ್ರತೆಯನ್ನು ಭಂಗ ಮಾಡೀತು. ಯಾರನ್ನೋ ಮುಖಭಂಗ ಮಾಡಿ, ಅನಂತರ ಪಶ್ಚಾತ್ತಾಪಪಡುವಿರಿ.
ಕರ್ಕಾಟಕ ರಾಶಿ :
ಬೆಳೆಯುವ ಆಸೆ ಇದ್ದವರು ಅವಕಾಶವನ್ನು ಹುಡುಕುವರು. ಬೇಕೆಂದಾಗ ಬೇಕಾದ ವಸ್ತುವನ್ನು ಪಡೆಯುವ ಅನುಕೂಲವಿದ್ದರೂ ಅದನ್ನು ಬಳಸಿಕೊಳ್ಳಬೇಕೆ ಎನ್ನುವ ಬಗ್ಗೆ ವಿವೇಚನೆ ಇರಲಿ. ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ಅನಾರೋಗ್ಯದ ಕಾರಣ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಆಡಿಕೊಂಡಾರು. ನಿಮ್ಮ ಶ್ರಮವು ಯುಕ್ತಿಯಿಂದ ಇರಲಿ. ಹತ್ತಿರವರೂ ನಿಮ್ಮ ವರ್ತನೆಯಿಂದ ದೂರಾಗಬಹುದು. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳುವಿರಿ. ನಿದ್ರೆಯನ್ನು ಮಾಡಲಾಗದೇ ಕಷ್ಟಪಡುವಿರಿ. ಮಕ್ಕಳ ಪ್ರಗತಿಯನ್ನು ಪೂರ್ಣವಾಗಿ ಒಪ್ಪಲಾರಿರಿ. ಕಳೆದುಕೊಂಡದ್ದು ನಿಮಗೆ ಬಹಳ ಬೇಸರವನ್ನು ತರಿಸಬಹುದು. ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ಕಾರಣವನ್ನು ಕೇಳುವುದು ಬೇಡ. ಗೊಂದಲವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ.
ಸಿಂಹ ರಾಶಿ :
ಅಪರಿಚಿತ ಕರೆಗೆ ಭಯಗೊಳ್ಳುವಿರಿ. ಆದರೆ ಧೈರ್ಯದಿಂದ ತೋರುವ ಆತ್ಮವಿಶ್ವಾಸವು ನಿಮ್ಮ ಹಲವು ಮುಖಗಳನ್ನು ತೋರಿಸುವುದು. ನಿಮ್ಮ ಮಾತಿನಿಂದ ಕೆಲವರು ಪ್ರಭಾವಿತರಾಗಬಹುದು. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಉದ್ಯೋಗದಲ್ಲಿ ಬಡ್ತಿಯು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ನೀವು ನೆಚ್ಚಿದವರ ಜೊತೆಗೆ ಇಂದು ಕೆಲವು ಸಮಯ ಇರುವಿರಿ. ಭಾಷೆಯಲ್ಲಿ ನಿಮಗೆ ತೊಂದರೆ ಕಾಣಿಸುವುದು. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಮಾರಡದ ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡಬೇಕಾಗುವುದು. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಶೋಭೆ ತರದು. ಸಮಾರಂಭಗಳಲ್ಲಿ ಅನಿರೀಕ್ಷಿತವಾಗಿ ಆಪ್ತರ ಭೇಟಿಯಾಗಲಿದೆ. ಹಿರಿಯರ ಕಿವಿಮಾತಿನ ಮೇಲೆ ಲಕ್ಷ್ಯವಿರಲಿ. ನಿಮ್ಮ ವಸ್ತುಗಳ ಮೇಲೆ ಅಧಿಕ ಮೋಹವು ಉಂಟಾಗಬಹುದು. ಸಮಯಕ್ಕೆ ಆಗಬೇಕಾದುದು ಆಗುವುದು. ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ಹೊಂದಿಕೊಳ್ಳುವುದು ಗೊತ್ತಿದ್ದರೂ ಅದು ನಿಮಗೆ ಕೀಳರಿಮೆಯನ್ನು ತರಬಹುದು.
ಕನ್ಯಾ ರಾಶಿ :
ನಿಮ್ಮನ್ನು ನೋಡುವ ದೃಷ್ಟಿಯನ್ನು ನೀವಾಗಿಯೇ ಬದಲಿಸಿಕೊಳ್ಳುವಿರಿ. ನಿಮ್ಮ ಅನಗತ್ಯ ಮೊಂಡುತನ ನಿಮ್ಮನ್ನೇ ಕುರುಡುಮಾಡಬಹುದು. ಗೌರವಕ್ಕಾಗಿ ಕಾರ್ಯವನ್ನು ಮಾಡದೇ ಕರ್ತವ್ಯದ ದೃಷ್ಟಿಯಿಂದ ಮಾಡಿ. ಪ್ರಶಂಸೆಯು ಸಹಜವಾಗಿ ಸಿಗುವುದು. ಮಕ್ಕಳಿಗೆ ಆಸ್ತಿ ಮಾಡುವ ಯೋಚನೆ ಬರುವುದು. ಖರೀದಿಸಿದ ವಸ್ತು ನಿಮ್ಮನ್ನು ಸೇರದೇ ತಪ್ಪಿಹೋಗುವುದು. ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ನಿಮ್ಮ ಚಿಂತನೆಗಳು ಬರಬಹುದು. ಕುಟುಂಬದಲ್ಲಿ ಆಗುವ ಕಲಹವನ್ನು ನೀವು ನಿಭಾಯಿಸಬೇಕಾದೀತು. ಸಂಗಾತಿಯ ಬಗ್ಗೆ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ದೃಶ್ಯಮಾಧ್ಯಮದವರು ಹೆಚ್ಚಿನ ಆದಾಯ ಬರುವಲ್ಲಿಗೆ ಹೋಗುವ ಯೋಚನೆ ಮಾಡುವರು. ಮಕ್ಕಳು ನಿಮ್ಮ ಮಾತಿಗೆ ಅನಾದರ ತೋರಿಸಬಹುದು. ಬಹಳ ಕೋಪ ಬರಬಹುದು, ಅದನ್ನು ನಿಮ್ಮೊಳಗೆ ಇಟ್ಟುಕೊಳ್ಳುವಿರಿ. ನಿಮ್ಮ ಚಿಂತನೆಯನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ.
ತುಲಾ ರಾಶಿ :
ನಿಮಗೆ ಕಲಾತ್ಮಕವಾಗಿ ಮಾಡುವ ಕೆಲಸವು ಗೊತ್ತಿದ್ದರೆ ಅದೇ ನಿಮಗೆ ಲಾಭ. ನಿಮ್ಮ ಚರಾಸ್ತಿಯನ್ನು ಯಾರಾದರೂ ಬಳಸಿಯಾರು. ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಇಂದು ನೀವು ದೈಹಿಕವಾಗಿ ಬರುವ ನೋವನ್ನು ಸಹಿಸುವ ಶಕ್ತಿಯನ್ನು ತಂದುಕೊಳ್ಳುವಿರಿ. ಮಕ್ಕಳಿಗೆ ಹಿರಿಯರ ಒಡನಾಟವಿರಲಿದೆ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ಬರಬಹುದು. ಮನೆಯವರ ಆರೋಗ್ಯವನ್ನೂ ನೋಡುಕೊಳ್ಳುವ ಜವಾಬ್ದಾರಿ ಇರಲಿದೆ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗುವಿರಿ. ಅದು ನಿಮಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಬಿಟ್ಟುಕೊಡುವ ಮೊದಲು ಯೋಚಿಸಿ. ಸಂತೋಷಕ್ಕಾಗಿ ಕಾರಣಗಳು ಹಲವು ಇರಬಹುದು. ಆದರೆ ಅದನ್ನು ಪಡೆಯುವ ಆಸಕ್ತಿ ಇರದು. ಸಾಧ್ಯವಾದಷ್ಟು ಇಂದು ನಿಮ್ಮ ಸಮಯವು ವ್ಯರ್ಥವಾಗದಂತೆ ನೋಡಿಕೊಳ್ಳಿ. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ.
ವೃಶ್ಚಿಕ ರಾಶಿ :
ಇಷ್ಟದ ಕಾರ್ಯಕ್ಷೇತ್ರವನ್ನು ಗುರುತಿಸಿಕೊಳ್ಳುವುದು ಕಷ್ಟ. ಇಂದು ಯಾರ ಬಳಿಯೂ ಏನ್ನೂ ಹೇಳಿಸಿಕೊಳ್ಳದೇ ಕೆಲಸವನ್ನು ಮಾಡುವಿರಿ. ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಏಕಾಂತವು ನಿಮಗೆ ಇಂದು ಬಹಳ ಪ್ರಿಯವಾಗುವುದು. ಆರ್ಥಿಕ ಅಭಿವೃದ್ಧಿಯಿಂದ ನಿಮಗೆ ಸಂತೋಷವಾಗುವುದು. ಆದಾಯವನ್ನು ಸರಿಯಾದಕಡೆಗೆ ವಿನಿಯೋಗ ಮಾಡುವಿರಿ. ದಾಂಪತ್ಯ ಜೀವನವನ್ನು ಆನಂದಿಸುವಿರಿ. ಸ್ನೇಹಿತ ಜೊತೆ ಆಪ್ತವಾಗಿ ಕಾಲವನ್ನು ಕಳೆಯಲಿದಗದೀರಿ. ನಿಮ್ಮದೇ ಆದ ಕೆಲವು ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಗೌರವಕ್ಕೆ ಚ್ಯುತಿ ಬರುವ ಕೆಲಸಗಳತ್ತ ನಿಮ್ಮ ಗಮನ ಕಡಿಮೆ ಇರಲಿ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮನ್ನು ಬಿಟ್ಟು ಇನ್ನೊಬ್ಬರಿಂದ ಸಹಾಯವನ್ನು ನಿಮ್ಮವರು ಕೇಳುವರು. ಇನ್ನೊಬ್ಬರ ಟೀಕೆಯನ್ನು ಸಮಾನ ಮನಃಸ್ಥಿತಿಯಿಂದ ಪಡೆಯುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ.
ಧನು ರಾಶಿ :
ಸಣ್ಣ ಆದಾಯವನ್ನೂ ಬಿಡದ ಲೋಭವು ಅತಿಯಾಗುವುದು. ಯಾರನ್ನೂ ಕೇಳದೇ ಮಾಡಿದ ಕಾರ್ಯದಿಂದ ನಷ್ಟವನ್ನು ನೀವೊಬ್ಬರೇ ಅನುಭವಿಸುವಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು ಮಾಡಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಮನೋಬಲವನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ತಿಳಿಯುವುದು ಒಳ್ಳೆಯದು. ಸುಮ್ಮನೇ ಮಾತನಾಡುವುದು ವ್ಯರ್ಥ ಎಂದು ನಿಮಗೆ ಅನ್ನಿಸಬಹುದು. ನಿಮಗೆ ಬೇಡದ ವಸ್ತುವಿನ ಮೇಲೆ ನಿಮಗೆ ಆಸೆ ಬರುವುದು. ಸುರಕ್ಷತೆಯ ಪರಿಧಿಯನ್ನು ದಾಟುವುದು ಉಚಿತ. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ಪ್ರತಿಭೆಗೆ ಅವಕಾಶಗಳು ಕಡಿಮೆ ಸಿಗಬಹುದು. ವೃತ್ತಿಯಲ್ಲಿ ನೀವು ಸ್ವಸ್ಥಾನವನ್ನು ಭದ್ರವಾಗಿರಿಸಿಕೊಳ್ಳಲು ಪ್ರಯತ್ನಿಸಿ. ಇನ್ನೊಬ್ಬರನ್ನು ನೋಡಿ ಖುಷಿಯಿಂದ ಇರುವುದನ್ನು ಕಲಿಯುವ ಅವಶ್ಯಕತೆ ಇದೆ. ಯಾವುದಾದರೂ ಕಳ್ಳತನದ ಅಪವಾದ ನಿಮಗೆ ಅಂಟುವುದು. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು.
ಮಕರ ರಾಶಿ :
ಯಾವುದೂ ವೈಯಕ್ತಿಕವಾಗಿ ನಿಮ್ಮನ್ನು ಬಾಧಿಸದು. ಇಂದು ವ್ಯವಹಾರದಲ್ಲಿ ಸ್ಥೈರ್ಯವು ಬೇಕಾಗುವುದು. ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಹಣಕಾಸಿನ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹವುಂಟಾಗಿ ಕೊನೆಗೆ ಮೌನದಲ್ಲಿ ಮುಕ್ತಾಯವಾಗಬಹುದು. ವ್ಯಾಪಾರದ ಲಾಭದಿಂದ ನಿಮ್ಮಲ್ಲಿ ಹೆಚ್ಚು ಉತ್ಸಾಹವಿರುವುದು. ಕುಟುಂದ ಜೊತೆ ಸಮಯವನ್ನು ಕೊಡುವುದು ಇಂದು ಕಷ್ಟವಾದೀತು. ನಿಮ್ಮ ಸಿಟ್ಟನ್ನು ಎಲ್ಲ ಕಡೆಗಳಲ್ಲಿ ತೋರಿಸುವುದು ಬೇಡ. ಸುಮ್ಮನೇ ವ್ಯರ್ಥವಾದೀತು. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳುವುದು ಉತ್ತಮ. ಮನವೊಲಿಸುವ ಕ್ರಮವನ್ನು ತಿಳಿಯಿರಿ. ಕೃಷಿಕರು ಸಿಗುವ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವರು. ಇಂದು ನಿಮಗೆ ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ನಿಮಗೆ ಇಷ್ಟವಾಗದು. ಆಸ್ತಿ ಖರೀದಿಯ ಬಗ್ಗೆ ನಿಮಗೆ ಸ್ಪಷ್ಟತೆ ಸಾಕಾಗದು. ಮಾಧ್ಯಮದಲ್ಲಿ ಇರುವವರು ಹೆಚ್ಚು ಪ್ರಚಾರವನ್ನು ಪಡೆಯುವರು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಪ್ರಯಾಣವನ್ನು ಆನಂದಿಸುವಿರಿ.
ಕುಂಭ ರಾಶಿ :
ಕೃತಜ್ಞತೆಯನ್ನು ಯಾವುದಾದರೂ ರೀತಿ ತೀರಿಸುವ ಪ್ರಯತ್ನ ಮಾಡುವಿರಿ. ಜೊತೆಗಾರರನ್ನು ನೀವು ವಿರೋಧ ಮಾಡಿಕೊಳ್ಳದೇ ಇರಬೇಕು. ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ಕರ್ತವ್ಯದಲ್ಲಿ ನಿರಾಸಕ್ತಿ ಬರಬಹುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರಲ ಬಯಸುವಿರಿ. ನಿಮ್ಮದಲ್ಲದ ವಿಚಾರಕ್ಕೆ ಹೆಚ್ಚು ಓಡಾಟ ಮಾಡುವಿರಿ. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ಹೆಚ್ಚಾಗಲಿದೆ. ಪ್ರವಾಸವನ್ನು ಹೆಚ್ಚು ಮಾಡುವ ಆಸಕ್ತಿಯನ್ನು ಹೊಂದಿರುವಿರಿ. ರೋಗದ ಮತ್ತೊಂದು ಸಮಸ್ಯೆ ಉದ್ಭವಿಸುವುದು. ನಿಮ್ಮ ವರ್ತನೆಯು ಅಹಂಕಾರದಂತೆ ತೋರಲಿದೆ. ಹಣವನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳಿ. ಉದ್ಯೋಗದ ಕಾರಣದಿಂದ ಮನೆಯನ್ನು ಬದಲಿಸಬೇಕಾಗುವುದು. ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಲಿದೆ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಯಾವುದಾದರೂ ಸರಳ ವೃತ್ತಿಯಲ್ಲಿ ಕೆಲಸ ಮಾಡುವಿರಿ.
ಮೀನ ರಾಶಿ :
ವೃತ್ತಿಪರತೆಯಲ್ಲಿ ಬೇರೆ ಎಲ್ಲವೂ ನಿರ್ಲಕ್ಷ್ಯವಾಗಲಿದೆ. ಇಂದು ವಿದ್ಯಾಭ್ಯಾಸದಲ್ಲಿ ಬುದ್ಧಿಪೂರ್ವಕವಾಗಿ ಪ್ರಯತ್ನವನ್ನು ಮಾಡಬೇಕು. ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಉಪಾಯದಿಂದ ನಿಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿಯು ನಿಮಗೆ ಹೆಚ್ಚಾಗಲಿದೆ. ಇನ್ನೊಬ್ಬರ ಬಗ್ಗೆ ಸದ್ಭಾವನೆ ಇರಲಿ. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಮಿತ್ರರು ನಿಮಗೆ ಏನಾದರೂ ತೊಂದರೆ ಕೊಡಬಹುದು. ಇಷ್ಟವಾದುದನ್ನು ಬಿಟ್ಟುಕೊಡಬೇಕಾದೀತು. ಎಲ್ಲದಕ್ಕೂ ಇನ್ನೊಬ್ಬರನ್ನು ದೂರುವಿರಿ. ನಿಮಗೆ ಖರ್ಚಿನ ಮೇಲೆ ಹಿಡಿತವಿರಲಿ. ಆದಾಯದ ಸ್ಥಿತಿಯನ್ನು ಸರಿಯಾಗಿ ಪರಿವರ್ತಿಸುವಿರಿ. ವ್ಯಕ್ತಿತ್ವವನ್ನು ನೀವು ಸುಧಾರಿಸಿಕೊಳ್ಳುವತ್ತ ಗಮನ ಇರಲಿ. ನಿಮ್ಮ ಬಗ್ಗೆ ಆಡಿಕೊಳ್ಳುವವರಿಗೆ ಉತ್ತರಿಸಲು ಹೋಗುವುದು ಬೇಡ. ಸರ್ಕಾರಿ ಕೆಲಸದ ವೇಗವನ್ನು ನೀವು ಹೆಚ್ಚಿಸಿ ಆಗಬೇಕಾದುದನ್ನು ಮಾಡಿಸಿಕೊಳ್ಳಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು.
Views: 61