‘ರಾಷ್ಟ್ರೀಯ ಪ್ರಶಸ್ತಿ ವೇದಿಕೆಯ ಮೇಲೆ ಕಂಗೊಳಿಸಿದ ಆರೂ ವರ್ಷದ ತ್ರಿಶಾ ತೋಸರ್’

ಸೆಪ್ಟೆಂಬರ್ 24, ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿಜೇತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶಾರುಖ್ ಖಾನ್, ರಾಣಿ ಮುಖರ್ಜಿ, ವಿಕ್ರಾಂತ್ ಮೆಸ್ಸಿ ಮುಂತಾದ ನಟರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು.

ದಕ್ಷಿಣದ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಐವರು ಬಾಲ ಕಲಾವಿದರು ಸಹ ವಿಶೇಷ ಗಮನ ಸೆಳೆದರು. ಬಾಲ ಕಲಾವಿದರಾದ ತ್ರಿಶಾ ಥೋಸರ್, ಶ್ರೀನಿವಾಸ್ ಪೋಕಲೆ, ಭಾರ್ಗವ ಜಗ್ತಾಪ್, ಕಬೀರ್ ಖಂಡರೆ ಮತ್ತು ಸುಕೃತಿ ವೇಣಿ ಬಂಡ್ರೆಡ್ಡಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. ಅವರಲ್ಲಿ, ‘ನಾಲ್ 2’ ಚಿತ್ರದಲ್ಲಿ ಚಿಮಿ ಪಾತ್ರವನ್ನು ನಿರ್ವಹಿಸಿದ ತ್ರಿಶಾ ಥೋಸರ್ ವೇದಿಕೆಯ ಮೇಲೆ ಬರುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಬೆರಗಾಗಿದ್ದರು. ಕೇವಲ ಆರನೇ ವಯಸ್ಸಿನಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದು, ಇಡೀ ರಾಷ್ಟ್ರವನ್ನೇ ಆಕೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ವಿಶೇಷ ಕ್ಷಣದ ಕುರಿತು ತ್ರಿಶಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಕೂಡ ಹಂಚಿಕೊಂಡಿದ್ದಾರೆ.

https://www.instagram.com/reel/DO-af6YDEXI/?igsh=eTRiZWk1dnl0Ynpu

ತ್ರಿಶಾ ತೋಸರ್ ಅವರ ಪೋಸ್ಟ್
“ನಿನ್ನೆ ನನ್ನ ಜೀವನದಲ್ಲಿ ಬಹಳ ದೊಡ್ಡ, ವಿಶೇಷ ಮತ್ತು ಮರೆಯಲಾಗದ ದಿನ. ‘ನಾಲ್ 2’ ಚಿತ್ರದಲ್ಲಿನ ಚಿಮಿ ಪಾತ್ರಕ್ಕಾಗಿ ನನಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಕೇವಲ ಆರನೇ ವಯಸ್ಸಿನಲ್ಲಿ ನಾನು ಇಷ್ಟು ದೊಡ್ಡ ಗೌರವವನ್ನು ಸ್ವೀಕರಿಸಿದಾಗ ಇಡೀ ಸಭಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ನನ್ನ ಹೆತ್ತವರು ಮತ್ತು ಅಜ್ಜಿಯರು ಪರಸ್ಪರ ಅಪ್ಪಿಕೊಂಡು ಅಳುತ್ತಿದ್ದರು. ನಾನು ನಿಖರವಾಗಿ ಏನು ಗಳಿಸಿದ್ದೇನೆಂದು ನನಗೆ ಇನ್ನೂ ತಿಳಿದಿಲ್ಲ, ಈ ಪ್ರಶಸ್ತಿ ನನ್ನ ಮಹಾರಾಷ್ಟ್ರ ರಾಜ್ಯ ಮತ್ತು ನನ್ನ ಇಡೀ ಕುಟುಂಬದ ಹೆಸರನ್ನು ಶ್ರೇಷ್ಠಗೊಳಿಸಿದೆ ಎಂಬುದು ಮಾತ್ರ ನನಗೆ ತಿಳಿದಿದೆ. ನನ್ನ ತಾಯಿ ಹೇಳುತ್ತಿದ್ದರು, ‘ಕಳೆದ 70 ವರ್ಷಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ನೀವು ಅತ್ಯಂತ ಕಿರಿಯ ಬಾಲ ಕಲಾವಿದೆ’ ಎಂದು ತಮ್ಮ ಪೋಸ್ಟ್‌ನ ಮೂಲಕ ತ್ರಿಶಾ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

“ಈ ಯಶಸ್ಸಿಗೆ, ನನ್ನ ಪೋಷಕರು, ನನ್ನ ಇಡೀ ಕುಟುಂಬ, ನನ್ನ ಚಿತ್ರದ ಇಡೀ ತಂಡ, ನನ್ನ ನಿರ್ದೇಶಕ ನಾಗರಾಜ್ ಮಂಜುಳೆ ಸರ್, ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಜ್ಯೂರಿಗಳು ಮತ್ತು ‘ಚಿಮಿ’ಗೆ ತುಂಬಾ ಪ್ರೀತಿ ನೀಡಿದ ನನ್ನ ಪ್ರೀತಿಯ ಪೋಷಕರು, ಪ್ರೇಕ್ಷಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮೆಲ್ಲರಿಗೂ ನಾನು ತುಂಬಾ ಋಣಿಯಾಗಿದ್ದೇನೆ. ನಿಮ್ಮೆಲ್ಲರಿಂದಾಗಿ ನಾನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ತಲುಪಿದ್ದೇನೆ. ದಯವಿಟ್ಟು ಹೀಗೆಯೇ ನನ್ನೊಂದಿಗೆ ಶಾಶ್ವತವಾಗಿ ಇರಿ. ಇಂದಿನಿಂದ ನಾನು ಅದೇ ಜವಾಬ್ದಾರಿ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ” ಎಂದು ಅವರು ಈ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/DO_H0FbDGTi/?igsh=MXJpMjU2cXZ2N3l6ag==

Views: 47

Leave a Reply

Your email address will not be published. Required fields are marked *