ಭೋವಿ ನಿಗಮದ ಹೊಸ ಅಧ್ಯಕ್ಷರಾಗಿ ಎಂ.ರಾಮಪ್ಪ ಅಧಿಕಾರ ಸ್ವೀಕಾರಕ್ಕೆ ಸಿದ್ಧ.

ಚಿತ್ರದುರ್ಗ ಆ. 13

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಭೋವಿ ಅಭೀವೃದ್ದಿ ನಿಮಗಮದ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಎಂ.ರಾಮಪ್ಪರವರು ಆ. 15 ರ ಬುಧವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂ ರಿನಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೀಧಿಯಲ್ಲಿನ ವೀಶ್ವಶ್ವೇರಯ್ಯ ದೊಡ್ಡ ಗೋಪುರದ 20 ನೇ ಮಹಡಿ ಯಲ್ಲಿನ ನಿಗಮದ ಕಚೇರಿಯಲ್ಲಿ ಅಧ್ಯಕ್ಷರಾಗಿ ಆಧಿಕಾರವನ್ನು ಸ್ವೀಕಾರ ಮಾಡಲಿದ್ದು ಅಂದೇ ತಮ್ಮ ಕಾರ್ಯ ಲಯದಲ್ಲಿ ಪೂಜೆಯನ್ನು ಇಟ್ಟುಕೊಂಡಿದ್ದಾರೆ.

ರಾಮಪ್ಪರವರ ಅಭಿಮಾನಿಗಳು, ಹಿತೈಷಿಗಳು ಈ ಕಾರ್ಯ ಕ್ರಮಕ್ಕೆ ಆಗಮಿಸುವಂತೆ ಎಂ.ರಾಮಪ್ಪ ಅಭಿಮಾನಿಗಳ ಬಳಗದವತಿಯಿಂದ ಕಾಂಗ್ರೆಸ್ ಮುಖಂಡರಾದ ಮುದಸಿರ್‍ನವಾಜ್, ಜಿ.ಪಂ.ಮಾಜಿ ಸದಸ್ಯರಾದ ಅನಿಲ್‍ಕುಮಾರ್, ಕನಕದಾಸ್, ಜಿ.ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

Views: 9

Leave a Reply

Your email address will not be published. Required fields are marked *