ಕೆಜಿಎಫ್ 2 ದಾಖಲೆ ಮೀರಿಸಿದ ಪಠಾಣ್ ಕಲಕ್ಷನ್.

ಬಾಲಿವುಡ್ ನಲ್ಲಿ ಈಗ ಶಾರುಖ್ ಖಾನ್ ಹವಾ ಜೋರಾಗಿದ್ದು, ಸಾಕಷ್ಟು ವಿವಾದಗಳ ಮಧ್ಯೆ ರಿಲೀಸ್ ಆಗಿದ್ದ ‘ಪಠಾನ್’ ಸಿನಿಮಾ ಈಗ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ.

‘ಕೆಜಿಎಫ್ 2’ ದಾಖಲೆ ಬ್ರೇಕ್ ಮಾಡಿದ್ದು, ಎರಡು ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ಹಲವು ವರ್ಷಗಳಿಂದ ಸತತ ಸೋಲು ಕಂಡಿದ್ದ ಶಾರುಖ್ ಖಾನ್ ಅವರು ಈಗ ಭರ್ಜರಿಯಾಗಿ ಕಂಬ್ಯಾಕ್ ಆಗಿದ್ದಾರೆ. ತಾವು ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ. ಯಶ್ ನಟನೆಯ ಪ್ರಶಾಂತ ನೀಲ್ ನಿರ್ದೇಶನದ ‘ಕೆಜಿಎಫ್ -2′ ಸಿನಿಮಾದ ಹಿಂದಿ ವರ್ಷನ್ ಗೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿ ಹೀಗಿತ್ತು. ಈಗ ‌’ ಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ಅವರ ಗೆಲುವು ಅಭಿಮಾನಿಗಳಿಗೆ ಖುಷಿ ನೀಡಿದೆ. ಶಾರುಖ್ ‘ಪಠಾನ್’ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಣರಾಜ್ಯೋತ್ಸವದ ದಿನದಂದು ರಜೆ ಇದ್ದದ್ದು ಸಿನಿಮಾಗೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಚಿತ್ರಮಂದಿರದ ಹತ್ತಿರ ಮುಗಿಬಿದ್ದಿದ್ದಾರೆ. ಹಾಗಾಗಿ ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *