ನಿತ್ಯ ಭವಿಷ್ಯ| 17 ಅಕ್ಟೋಬರ್ : ಇಂದು ಈ ರಾಶಿಯವರಿಗೆ ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸಾಧ್ಯ, ಕರಣ : ಬವ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:36 – 12:05, ಗುಳಿಕ ಕಾಲ 07:40 – 09:08, ಯಮಗಂಡ ಕಾಲ 15:02 – 16:30

ಮೇಷ ರಾಶಿ :

ಸೃಜನಾತ್ಮಕ ಬೋಧ‌ನೆಯಿಂದ ಕೀರ್ತಿ ಹೆಚ್ಚುವುದು. ಇಂದು ಮನೆಯಿಂದ ದೂರವಿರಬೇಕಾದ ಸ್ಥಿತಿ ಬರುವುದು. ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ಸಂತೋಷದಿಂದ ಇರುತ್ತಾರೆ. ಉನ್ನತಸ್ಥಾನದ ಪ್ರಾಪ್ತಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಆಪ್ತರ ನಡುವೆ ಸಂದೇಹವು ಬರುವ ಸಂಭವವಿದೆ. ಯಾರದೋ ಮಾತಿಗೆ ನಿಮ್ಮ ಪ್ರತಿಕ್ರಿಯೆ ಸಲ್ಲದು. ನೂತನ ಗೃಹನಿರ್ಮಾಣದ ಕಾರ್ಯಕ್ಕೆ ದೊಡ್ಡ ಯೋಜನೆಯನ್ನು ರೂಪಿಸುವಿರಿ. ನಿಮಗೆ ಸಿಗಬೇಕಾದ ವಸ್ತುಗಳನ್ನು ಹಕ್ಕಿನಿಂದ ಪಡೆಯುವಿರಿ. ಜೀವನದ ಬಗ್ಗೆ ಗಂಭೀರ ಚಿಂತನೆಯನ್ನು ತಾನಾಗಿಯೇ ಮಾಡುತ್ತಿರುವಿರಿ. ನಿಮ್ಮ ಉದ್ಯೋಗವು ಅನ್ಯರ ಕಿವಿಕಚ್ಚುವಿಕೆಯಿಂದ ಕಳೆದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ಕೊಟ್ಟು‌ ಮನೆಯಿಂದ ದೂರ ಹೋಗುವಿರಿ. ಶತ್ರುಗಳ ತೊಂದರೆಯನ್ನು ತಡೆಯಲು ಕಾನೂನಿಗೆ ಶರಣಾಗುವಿರಿ. ಬೆಂಬಲವಿದೆ ಎಂದು ಏನನ್ನಾದರೂ ಮಾಡುವುದು ಬೇಡ.

ವೃಷಭ ರಾಶಿ :

ನಿಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು ತಟಸ್ಥರಾಗುವಿರಿ. ಇಂದು ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮದಾದ ಪೂರ್ವಯೋಜನೆ ಇರಲಿ. ನಿಮ್ಮ ಕಷ್ಟಕ್ಕೆ ಯಾರೂ ಬರದಿರುವುದು ನಿಮಗೆ ಬೇಸರವನ್ನು ತರಿಸಬಹುದು. ಮನೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರಬಹುದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಪೂರ್ಣವಿಶ್ವಾಸವು ಇರದು. ನಿಮ್ಮ ನೆಮ್ಮದಿಯನ್ನು ಪರರು ಸಹಿಸಲಾರರು. ಬೆರಳು ಕೊಟ್ಟರೆ ಹಸ್ತವನ್ನೇ ನುಂಗಬಹುದು ಎಚ್ಚರ. ಯಾವುದಾದರೂ ಆಮಿಷಕ್ಕೆ ಬಲಿಯಾಗಿ ಕಾನೂನಿಗೆ ವಿರುದ್ಧವಾದ ಕಾರ್ಯದಲ್ಲಿ ತೊಡಗುವಿರಿ. ಪತ್ನಿಯ ಭಾವಕ್ಕೆ ಸ್ಪಂದಿಸಲು ನಿಮಗೆ ಇಂದು ಆಗದು. ಇದು ಮನಸ್ತಾಪಕ್ಕೆ ಕಾರಣವಾದೀತು. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಅಪರಿಚಿತರು ನಿಮ್ಮ ಹಣವನ್ನು ಪಡೆಯಬಹುದು.

ಮಿಥುನ ರಾಶಿ :

ಸ್ವಯಂ ಸ್ಪೂರ್ತಿಯ ಅವಶ್ಯಕತೆ ಇದೆ. ಕಷ್ಟವಾದರೂ ವ್ಯವಹಾರವನ್ನು ಇನ್ನೊಬ್ಬರನ್ನು ಬಳಸಿಕೊಂಡು ಮಾಡುವುದು ಸರಿ ಎನಿಸದು. ಅಪ್ರಾಮಾಣಿಕತೆಯಿಂದ ಆದ ಲಾಭವು ಸದ್ಯಕ್ಕೆ ಸಂತೋಷವನ್ನು ಕೊಡುವುದು. ಮಕ್ಕಳ‌ ಮೇಲೆ‌ ಪ್ರೀತಿ ಇದ್ದರೂ ಹುಸಿ ಮುನಿಸು ಅಗತ್ಯವಾಗಿ ಬೇಕು. ನಿಮ್ಮ ಅಧಿಕ ಶ್ರಮದಿಂದ ನಿಮಗೇ ಯಶಸ್ಸು ಸಿಗುವುದು. ಸ್ವಲ್ಪಮಟ್ಟಿಗೆ ಆಯಾಸವೂ ಆಗುವುದು. ಸಜ್ಜನರ ಅಕಸ್ಮಾತ್ ಭೇಟಿಯಾಗುವುದು. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿ ಇರುವಿರಿ. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಯಾಚಿಸಿ. ಅತಿಥಿಯಾಗಿ ನಿಮಗೆ ಸಮಾರಂಭಕ್ಕೆ ಆಹ್ವಾನ ಬರಲಿದೆ. ಸರಳವಾದ ಕಾರ್ಯವನ್ನು ಕಷ್ಟವಾಗಿಸಿಕೊಳ್ಳುವುದು ಬೇಡ. ನೀವು ಕುಟುಂಬದ ವಿಚಾರದಲ್ಲಿ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿ ಎನಿಸಬಹುದು. ಆರೋಗ್ಯದ ಹೆಚ್ಚು ಗಮನವಿರಲಿ. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ನಿಮಗೆ ಬರುವ ಜವಾಬ್ದಾರಿಯನ್ನು ಅಕಾರಣವಾಗಿ ತಳ್ಳಿಹಾಕುವಿರಿ. ಗಣ್ಯರ ಭೇಟಿಯು ಸಂತೋಷವನ್ನು ನೀಡುವುದು.

ಕರ್ಕಾಟಕ ರಾಶಿ :

ನಿಮ್ಮ ಮಾತಿನ ವೇಗವು ನಿಮಗೂ ಕೇಳುಗರಿಗೂ ನಿಧಾನವೆನಿಸುವುದು. ಅನ್ಯರ ದೋಷವನ್ನೇ ಹುಡುಕುತ್ತ ಇರುವುದು ಸರಿಯಾಗದು. ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ವೃತ್ತಿಯ ಸ್ಥಳದಲ್ಲಿ ನೀವು ಇಂದು ಖುಷಿಯಿಂದ ಇರುವಿರಿ. ನೀವಾಡುವ ಮಾತು ಸರಳವೂ ಸ್ಪಷ್ಟವಾಗಿ ಆಗಿರಲಿ. ಆಗ ಮಾತ್ರ ನಿಮ್ಮ ಮಾತನ್ನು ಆಲಿಸುವರು. ನಿಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವಿರಿ. ಆಸ್ತಿಯನ್ನು ಸ್ವಾಯತ್ತ ಮಾಡಿಕೊಳ್ಳಲು ಏನಾದರೂ ತಂತ್ರವನ್ನು ಹೂಡುವಿರಿ. ಅಧ್ಯಾತ್ಮದ ಕಡೆ ಒಲವು ಅಧಿಕವಾಗಿ ಕಾಣುವುದು. ಪ್ರೇಮ ವಿವಾಹವು ನಿಮಗೆ ಇಷ್ಟವಾಗದು. ಮನೆಯ ಜವಾಬ್ದಾರಿಯು ಬಹಳ ಬೇಗ ಬಂದಿದ್ದು ನಿಮ್ಮ ಎಲ್ಲ ಕ್ರಿಯಾಶೀಲತೆಯನ್ನು ಸದ್ಯ ನಿಲ್ಲಿಸಬೇಕಾಗುವುದು. ನಿಮ್ಮ ವಸ್ತುಗಳನ್ನು ಕಳೆದುಕೊಂಡಿದ್ದು ಗೊತ್ತಾಗದೇಹೋಗುವುದು. ಸಮಾರಂಭಗಳಿಗೆ ಭೇಟಿಯು ಅನಿರೀಕ್ಷಿತವವೂ ಆಗಬಹುದು. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ.

ಸಿಂಹ ರಾಶಿ :

ವಾಹನ ಚಾಲನೆಯಲ್ಲಿ ಅನ್ಯ ಮನಸ್ಕಾರಾಗಬೇಕಾಗುವುದು. ಅಪರಿಚಿತರ ಮಾತಿಗೆ ಮನಸೋಲುವಿರಿ. ಪ್ರೀತಿ ಶುರುವಾಗಬಹುದು. ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ಈ ಓಡಾಟದಿಂದ ಆಯಾಸ ಹೆಚ್ಚಾಗುವುದು. ಪರಪುರುಷರಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮ ಇಂದಿನ ಕೆಲಸವು ಗೊಂದಲದಿಂದ ಕೂಡಿರಲಿದೆ. ಸಂಪತ್ತಿದ್ದರೂ ಅದನ್ನು ಸದುಪಯೋಗ ಮಾಡುವ ಮಾರ್ಗವು ಗೊತ್ತಾಗದೇ ಇರಬಹುದು. ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಮೇಲೆ ದ್ವೇಷ ಸಾಧಿಸಲು ಹೋಗುವುದು ಸರಿಯಲ್ಲ. ಮುಂಗೋಪವನ್ನು ಕಡಿಮೆ ಮಾಡಿಕೊಂಡರೂ ಅದು ನಿಮ್ಮ ಹತೋಟಿಗೆ ಬರುವ ತನಕ ಕಷ್ಟವಾದೀತು. ಬಳಸಿದಷ್ಟಕ್ಕೆ ಮಾತ್ರ ನೀವು ಹಣ‌ ಪಾವತಿಸುವ ಒಪ್ಪಂದ ಮಾಡಿ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದು ಸರಿಯಾಗದು. ಹಿರಿಯರಿಗೆ ಯೋಗ್ಯವಾದ ಗೌರವವನ್ನು ನೀಡಿ. ದುರ್ಬಲ ಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವಿರಿ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ.

ಕನ್ಯಾ ರಾಶಿ :

ನಿಮ್ಮ ಕೆಲಸಕ್ಕೆ ಅನ್ಯರ ದೃಷ್ಟಿ ಬೀಳಬಹುದು. ಸಂಗಾತಿಯನ್ನು ಸಂಭಾಳಿಸಲು ಸೋಲಾಗಬಹುದು. ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ಕೆಲವರಿಗೆ ನಿಮ್ಮ ವರ್ತನೆಯು ಇಷ್ಟವಾಗದೇ ಇರಬಹುದು. ಎಂದೋ ಆಡಿದ ಮಾತಿನ ದುಷ್ಪರಿಣಾಮವು ಇಂದು ಹೊತ್ತಾಗುವುದು. ಅಸಮಯದಲ್ಲಿ ಭೋಜನವನ್ನು ಮಾಡುವುದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಲಿದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅತೀವ ಆಸಕ್ತಿಯು ಇರುವುದು. ಹೂಡಿಕೆಯನ್ನು ಸರಿಯಾದ ಸ್ಥಳದಲ್ಲಿ ಮಾಡಿ. ಆಳವಾದ ಹೋಗುವ ಮೊದಲೇ ಸಮಸ್ಯೆಯನ್ನು ತೆಗೆದುಹಾಕಿ. ಯಾವ ಸನ್ನಿವೇಶವೂ ಬರಬಹುದು. ಮನಸ್ಸನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಸಾಹಿತ್ಯಾಸಕ್ತರು ಹೆಚ್ಚಿನ ಲಾಭವನ್ನು ಪಡೆಯುವಿರಿ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ವ್ಯವಹಾರದಲ್ಲಿ ಚುರುಕುತನ ಅಗತ್ಯ.

ತುಲಾ ರಾಶಿ :

ಸಂಶೋಧನಾ ಕಾರ್ಯಗಳಿಗೆ ದೇಶಭ್ರಮಣವನ್ನು ಮಾಡಬೇಕಾಗುವುದು. ಮೆಚ್ಚುಗೆಗಾಗಿ ಮಾಡುವ ಕೆಲಸವು ವ್ಯರ್ಥವಾಗುವುದು. ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ನಿಮಗೆ ಮೊದಲೇ ಸರಿ ಎನಿಸಿದ್ದು ಈಗ ತಪ್ಪು ಎಂದು ಅರಿವಿಗೆ ಬರುವುದು. ನೀವು ಸರಿಯಾದ ಮಾರ್ಗದರ್ಶನವನ್ನು ಪಡೆಯುವುದು ಮುಖ್ಯ. ಜೀರ್ಣವಾಗದ ಆಹಾರದಿಂದ ಸಂಕಟವಾಗುವುದು. ಯಾರು ಏನೆಂದುಕೊಳ್ಳುತ್ತಾರೇನೋ ಎಂಬ ಹಿಂಜರಿಕೆ ಬೇಡ. ಭೋಗ ವಸ್ತುಗಳಗೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸಂತೋಷವನ್ನೇ ಮುಖ್ಯವಾಗಿ ಇಟ್ಟುಕೊಂಡು ಕೆಲಸಮಾಡುವಿರಿ. ನಿಮ್ಮ ಅಕ್ಕಪಕ್ಕದವರನ್ನು ನಿರ್ಲಕ್ಷ್ಯ ಮಾಡುವಿರಿ. ನಿಮ್ಮ ವಿದ್ಯೆಯ ಬಗ್ಗೆ ಅಹಂಕಾರ ಬರಬಹುದು. ಗುಂಪುಗಾರಿಕೆಯಿಂದ ಹೊರಬಂದ ನಿಮಗೆ ನಿಶ್ಚಿಂತೆಯಾಗಬಹುದು. ಆದಷ್ಟು ಸಾಮಾಜಿಕವಾಗಿ ಸಭ್ಯರಂತೆ ವರ್ತಿಸಿ. ಕುಟುಂಬದ ಮರ್ಯಾದೆಯನ್ನು ಕಾಪಾಡುವ ಕೆಲಸವೂ ನಿಮ್ಮಿಂದ ಆಗಬೇಕಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ.

ವೃಶ್ಚಿಕ ರಾಶಿ :

ಎಲ್ಲದಕ್ಕೂ ಅದೃಷ್ಟವನ್ನು ನಿರೀಕ್ಷಿಸುವುದು ಸರಿಯಲ್ಲ. ನಿಮ್ಮ ಗೃಹ ನಿರ್ಮಾಣಕ್ಕೆ ಯಾರಿಂದಲಾದರೂ ಸಹಕಾರ ಸಿಗಲಿದೆ. ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನು ತರುವುದು. ಆಯಾಸಕರವಾದ ಕಛೇರಿಯ ಕೆಲಸವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿ ಇರುವುದು. ಒಂದೇ ರೀತಿಯ ದಿನಚರಿಯನ್ನು ಕಂಡು ಸ್ತ್ರೀಯರು ಹೊಸ ಪಾಕದತ್ತ ಹೆಚ್ಚಿನ ಒಲವು ತೋರಿಸುವರು. ದಾಂಪತ್ಯದಲ್ಲಿ ಹೊಂದಾಣಿಕೆಯೇ ಹೆಚ್ಚಾಗಿ ಇರುವುದು. ಯಾರನ್ನೂ ಯಾರೂ ಬಿಟ್ಟುಕೊಡದ ಸ್ಥಿತಿಯು ಬರಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಮುಂದುವರಿಸಿ. ಸಂವಹನದ ತರಬೇತಿಯನ್ನು ಯಾರಿಂದಲಾದರೂ ಪಡೆಯಿರಿ. ನಿಮ್ಮ ಕಾರ್ಯಗಳು ಎಂದಿಗಿಂತ ಶಿಸ್ತಿನಿಂದ ಇರುವುದು ನಿಮಗೆ ಅಚ್ಚರಿಯನ್ನು ತರಬಹುದು. ನಿಮ್ಮ ಕೋಪವು ತಾತ್ಕಾಲಿಕವಾಗಿ ಇರುವುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ಮಾನಸಿಕ ಅಸ್ವಾಸ್ಥ್ಯವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ.

ಧನು ರಾಶಿ :

ಇನ್ನೊಬ್ಬರಿಗೆ ಹೋಲಿಸುವುದು ನಿಮಗೆ ನಿಷ್ಟವಾಗದೇ ಕೋಪಗೊಳ್ಳುವಿರಿ. ಅನಪೇಕ್ಷಿತ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದು ಬೇಡ. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಅತಿಯಾದ ಆತ್ಮವಿಶ್ವಾಸವೇ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲುವಂತೆ ಮಾಡುವುದು. ವ್ಯಾಪಾರದಲ್ಲಿ ಚುರುಕುತನದ ಅವಶ್ಯಕತೆ ಹೆಚ್ಚು ಇರಬೇಕಾಗುವುದು. ಮಾತು ಸರಳವೂ ನೇರವೂ ಆಗಿರಲಿ. ಹೊಸ ಮನೆಗೆ ಹೋಗುವ ಯೋಚನೆ ಇರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಸರಿಯಾಗಿರದೇ ಹೋಗಬಹುದು. ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ. ನಿಮ್ಮ ಸಾಮಾನ್ಯ ಕಾರ್ಯವೂ ಇತರರಿಗೆ ಅಸಮಾನ್ಯ ಎನಿಸುವುದು. ಎಂಥವರನ್ನೂ ನಂಬಿಸುವಂತೆ ಮಾತನಾಡುವಿರಿ. ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಮಾತು ಹಿತವಾಗಿ ಇರಲಿ. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ಪ್ರಭಾವಿ ವ್ಯಕ್ತಿಗಳ ಜೊತೆ ಸೌಹಾರ್ದದ ಮಾತನಾಡಿ.

ಮಕರ ರಾಶಿ :

ನಿಮ್ಮನ್ನು ನೀವೇ ಸೀಮಿತಿ ಗೊಳಿಸಿದರೆ ಬೆಳವಣೆಗೆ ಸಾಧ್ಯವಾಗದು. ವ್ಯವಹಾರದ ನಷ್ಟವನ್ನು ತುಂಬಿಕೊಳ್ಳಲು ಬೇಕಾದ ಯೋಜನೆ ಮಾಡುವಿರಿ. ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಪ್ರಯಾಣದ ಆಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಪ್ರೀತಿಗಾಗಿ ಕೆಲವನ್ನು ತ್ಯಾಗ ಮಾಡಬೇಕು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಎಲ್ಲವನ್ನೂ ನೀವು ಚಿಂತೆಯಿಂದ ಇರುವಿರಿ. ಕುಟುಂಬದ ಜೊತೆ ಇರುವುದು ನಿಮ್ಮ ಬಹಳ ಖುಷಿಯನ್ನು ಕೊಡುವುದು. ಹಣಾಕಾಸಿಗೆ ಸಂಬಂಧಿಸಿದಂತೆ ನೀವು ಕಠೋರ ನಿಲುವನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ದುಃಖದಲ್ಲಿ ಭಾಗಿಯಾಗಿ ಸಾಂತ್ವನವನ್ನು ಹೇಳುವಿರಿ. ವಿಶ್ರಾಂತಿ ಬೇಕೆಂದರೂ ಇಂದು ಪಡೆಯಲಾಗದು. ಆಕಸ್ಮಿಕವಾಗಿ ಧನಲಾಭವೂ ಆಗಬಹುದು. ನಿಮ್ಮ ನಿರಂತರ ಪರಿಶ್ರಮದಿಂದ ನಿಮಗೆ ಕಾರ್ಯವು ಸಫಲವಾಗುವುದು. ಕೆಲಸದ ಹಿಂದೆ ಬಿದ್ದು ಆಗಬೇಕಾದುದನ್ನು ಮಾಡಿಕೊಳ್ಳುವಿರಿ. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ.

ಕುಂಭ ರಾಶಿ :

ಎಲ್ಲವೂ ಇದ್ದರೂ ಏನೂ ಮಾಡಲಾಗದ ಸ್ಥಿತಿ ಬರಲಿದೆ. ಹಣದ ಹಂಚಿಕೆಯಲ್ಲಿ ನಿಮಗೆ ಕಲಹವಾಗುವುದು. ಕಾರ್ಯದಲ್ಲಿ ಒತ್ತಡವು ಅಧಿಕವಾಗಿ ಇರುವುದು. ಖರ್ಚಿಗೆ ಕಡಿವಾಣ ಹಾಕುವುದು ಕಷ್ಟವಾದೀತು. ಶತ್ರುಗಳ ವಿರುದ್ಧ ವಿಜಯ ಸಾಧಿಸುವ ಸಾಧ್ಯತೆ ಇದೆ. ಅಬಲರ ಮೇಲೆ ನಿಮ್ಮ ಸಿಟ್ಟನ್ನು ತೋರಿಸುವಿರಿ. ನಿರುದ್ಯೋಗವು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ನಿಮಗೆ ಕಷ್ಟವಾದೀತು. ಆಹ್ಲಾದಕರವೆನಿಸುವ ವಿಷಯಗಳ ಬಗ್ಗೆ ಇತರರೊಂದಿಗೆ ಸಂಪರ್ಕ ಸಾಧಿಸುವ ದಿನ. ವ್ಯಾಪಾರದಲ್ಲಿ ನಮಗೆ ಮೋಸವಾಗುವ ಸಾಧ್ಯತೆ ಇದೆ. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು ನಿಮಗೆ ಕೀರ್ತಿಯನ್ನು ತಂದುಕೊಡುವುದು. ಯಾರನ್ನೂ ನಂಬವುದು ನಿಮಗೆ ತೊಂದರೆಯಾಗಬಹುದು. ಇಂದಿನ ಕೆಲವು ಸಮಯವು ನಿಮಗೆ ನೆಮ್ಮದಿಯನ್ನು ಕೊಡುವುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಸಂಭಾವ್ಯತೆಯ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ.

ಮೀನ ರಾಶಿ :

ದಾರಿ ತಪ್ಪಿದ ನಿಮ್ಮನ್ನು ಪುನಃ ಹಿಂದೆ ತರಲು ಕಷ್ಟವಾಗುವುದು. ಇಂದು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ಏನನ್ನೋ ಯೋಚಿಸುತ್ತಲೇ ಇರುವಿರಿ. ನಿಮ್ಮದಾದ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಪೂರ್ಣ ವಿಶ್ವಾಸ ಬರುವವರೆಗೂ ಏನನ್ನೂ ಮಾಡಲಾರಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಇರಲಿದೆ. ಇನ್ನೊಬ್ಬರನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಳ್ಳುವಿರಿ. ನೀವು ಹೆಚ್ಚು ಎತ್ತರಕ್ಕೆ ಏರಲು ಮತ್ತು ಹೆಚ್ಚಿನದನ್ನು ಸಾಧಿಸಲು ಪ್ರೋತ್ಸಾಹಿಸುವ ಕಾರ್ಯಗಳಿಂದ ಯಶಸ್ಸು ನಿಮ್ಮದಾಗುತ್ತದೆ. ಸಂಗಾತಿಯಿಂದ ಬಂದ ಕೆಲವು ಮಾತುಗಳು ನಿಮಗೆ ಬೇಸರವನ್ನು ತರಿಸಬಹುದು. ಶುಭ ಕಾಲದ ನಿರೀಕ್ಷೆಯನ್ನು ನೀವು ಇರುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಪುತ್ರ ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವೆನಿಸುವುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ.

Views: 50

Leave a Reply

Your email address will not be published. Required fields are marked *