ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ ಅರ್ಜಿ ಪ್ರಕ್ರಿಯೆ ಪುನರಾರಂಭ – ಅಗತ್ಯ ದಾಖಲೆಗಳು ಮತ್ತು ದಿನಾಂಕ.

ಬಿಪಿಎಲ್, ಎಪಿಎಲ್ ರೇಷನ್‌ ಕಾರ್ಡ್: ಹೊಸ ಪಡಿತರ ಚೀಟಿ ಅರ್ಜಿ ಪ್ರಕ್ರಿಯೆ ಮತ್ತೆ ಆರಂಭ

ಕರ್ನಾಟಕ ಸರ್ಕಾರ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗೆ (Ration Card) ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪುನರಾರಂಭಿಸಿದೆ. ರೇಷನ್‌ ಕಾರ್ಡ್‌ ಪಡಿತರ ವಸ್ತುಗಳ ಜೊತೆಗೆ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.

ಕೆಲ ತಿಂಗಳುಗಳ ಹಿಂದೆ ನಕಲಿ ದಾಖಲೆಗಳ ಆಧಾರದ ಮೇಲೆ ನೀಡಲಾದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಅಂತಹವರನ್ನು ಎಪಿಎಲ್ ವರ್ಗಕ್ಕೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದ್ದರಿಂದ ಅರ್ಜಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಜನರಿಗೆ ಅವಕಾಶ ನೀಡಲಾಗಿದೆ.

🕓 ಅರ್ಜಿ ಸಲ್ಲಿಕೆಯ ಸಮಯ:
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.

🌐 ಅರ್ಜಿ ಸಲ್ಲಿಸಲು ತಾಣ:
ahara.kar.nic.in ಅಥವಾ ಸೇವಾಸಿಂಧು ಪೋರ್ಟಲ್‌ನಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಬಹುದು.

📋 ಎಪಿಎಲ್ ರೇಷನ್‌ ಕಾರ್ಡ್‌ಗೆ ಅಗತ್ಯ ದಾಖಲೆಗಳು:

ಎಲ್ಲಾ ಸದಸ್ಯರ ಆಧಾರ್ ಕಾರ್ಡ್

ನ್ಯಾಯಬೆಲೆ ಅಂಗಡಿ ಸಂಖ್ಯೆ / ಪಕ್ಕದ ಮನೆಯವರ ರೇಷನ್‌ ಕಾರ್ಡ್

📋 ಬಿಪಿಎಲ್ ರೇಷನ್‌ ಕಾರ್ಡ್‌ಗೆ ಅಗತ್ಯ ದಾಖಲೆಗಳು:

ಎಲ್ಲಾ ಸದಸ್ಯರ ಆಧಾರ್ ಕಾರ್ಡ್

ಒಬ್ಬರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ನ್ಯಾಯಬೆಲೆ ಅಂಗಡಿ ಸಂಖ್ಯೆ / ಪಕ್ಕದ ಮನೆಯವರ ರೇಷನ್‌ ಕಾರ್ಡ್

👨‍👩‍👧‍👦 ಯಾರು ಅರ್ಜಿ ಸಲ್ಲಿಸಬಹುದು:

ಕರ್ನಾಟಕದ ಖಾಯಂ ನಿವಾಸಿಗಳು

ಪಡಿತರ ಚೀಟಿ ಇಲ್ಲದವರು

ಹೊಸದಾಗಿ ವಿವಾಹವಾದ ನವದಂಪತಿಗಳು

ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಆಯ್ಕೆ ಮಾಡಲಾಗುತ್ತದೆ

📑 ಹೆಚ್ಚುವರಿ ದಾಖಲೆಗಳು:

ವೋಟರ್ ಐಡಿ

ಆಧಾರ್ ಕಾರ್ಡ್

ವಯಸ್ಸಿನ ಪ್ರಮಾಣ ಪತ್ರ

ಚಾಲನಾ ಪರವಾನಗಿ

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಮೊಬೈಲ್ ಸಂಖ್ಯೆ

ಸ್ವಯಂ ಘೋಷಿತ ಪ್ರಮಾಣ ಪತ್ರ

🖥️ ಅರ್ಜಿ ಸಲ್ಲಿಸುವ ವಿಧಾನ:

  1. ahara.kar.nic.in ತಾಣಕ್ಕೆ ಭೇಟಿ ನೀಡಿ
  2. “ಇ-ಸೇವೆಗಳು” ವಿಭಾಗದಲ್ಲಿ “ಇ-ಪಡಿತರ ಚೀಟಿ” ಆಯ್ಕೆ ಮಾಡಿ
  3. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ
  4. ಭಾಷೆ ಆಯ್ಕೆ ಮಾಡಿ ಹಾಗೂ ಅಗತ್ಯ ಮಾಹಿತಿಗಳನ್ನು ನಮೂದಿಸಿ
  5. ಬಿಪಿಎಲ್ ಅಥವಾ ಎಪಿಎಲ್ ಆಯ್ಕೆ ಮಾಡಿ
  6. ಅಗತ್ಯ ದಾಖಲೆಗಳ ಸಾಫ್ಟ್ ಕಾಪಿ ಅಪ್‌ಲೋಡ್ ಮಾಡಿ
  7. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ

ಪ್ರಸ್ತುತ ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಹಿಸಲಾಗುತ್ತಿದೆ. ಇದರಿಂದಾಗಿ ಕೆಲವು ಅರ್ಹರ ಕಾರ್ಡ್‌ಗಳು ತಪ್ಪಾಗಿ ಬದಲಾಯಿಸಲ್ಪಟ್ಟಿವೆ ಎಂಬ ದೂರುಗಳು ಬಂದಿವೆ. ಅಂತಹವರು ತಮ್ಮ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಬಹುದು. ಅರ್ಹರು ಎಂದು ದೃಢಪಟ್ಟರೆ, ಅವರಿಗೆ ಬಿಪಿಎಲ್ ಕಾರ್ಡ್ ಮರುಸ್ಥಾಪನೆ ಮಾಡಲಾಗುತ್ತದೆ.

Views: 73

Leave a Reply

Your email address will not be published. Required fields are marked *