ರೋಟರಿ ಹಾಗೂ ವಾಸವಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಉಚಿತ ಅಸ್ಥಿ ಶಸ್ತ್ರಚಿಕಿತ್ಸಾ ತಪಾಸಣಾ ಶಿಬಿರ.

ಚಿತ್ರದುರ್ಗ ಆ. 25

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ರೋಟರಿ ಕ್ಲಬ್ ಚಿತ್ರದುರ್ಗ,ವಾಸವಿ ಕ್ಲಬ್ ಚಿತ್ರದುರ್ಗ, ಲಕ್ಷ್ಮಿ ಸರ್ಜಿಕಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಣೇಬೆನ್ನೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಚಳ್ಳಕೆರೆ ರಸ್ತೆಯ “ಎಸ್.ಆರ್.ಬಿ.ಎಂ.ಎಸ್. ಸೇವಾ ಭವನದಲ್ಲಿ ಶನಿವಾರ ಮೊಣಕಾಲು ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ಆಪರೇಷನ್” ಗಳಿಗಾಗಿ ವಿಶೇಷ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 

ಈ ದಿನ ಬೆಳಿಗ್ಗೆ 11 ಗಂಟೆಯಿಂದ  3:00  ಗಂಟೆಯವರೆಗೆ ನಡೆದ ಈ ಶಿಬಿರದಲ್ಲ್ಲಿ 45ಕ್ಕೂ ಹೆಚ್ಚು ಜನ ಪರೀಕ್ಷೆಗೆ ಒಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆರು ಜನ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಡಾ. ಸಂಜೀವ್ ಎಂ.ಮುದ್ರಿ ಹಾಗೂ ಡಾಕ್ಟರ್ ಕೊಟ್ರೇಶ್, ರೋಟರಿ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಮೂರ್ತಿ, ಕಾರ್ಯದರ್ಶಿ ಅನುರಾಧ ವಿಶ್ವನಾಥ್, ವಾಸವಿ ಕ್ಲಬ್ಬಿನ ಅಧ್ಯಕ್ಷರಾದ ರಾಜೇಶ್ವರಿ ಸಿದ್ರಾಮ್, ಸರ್ವಿಸ್ ಪ್ರಾಜೆಕ್ಟ್ ಚೇರ್ಮನ್ ಎ.ಆರ್. ಲಕ್ಷ್ಮಣ್, ಕ್ಲಬ್ ಟ್ರೈನರ್ ಕನಕ ರಾಜ್, ಎಸ್.ವೀರೇಶ್, ಭಾಗವಹಿಸಿದ್ದರು.

Views: 20

Leave a Reply

Your email address will not be published. Required fields are marked *