ಕೇಂದ್ರ ಸರ್ಕಾರದ ಏಕಲವ್ಯ ಶಾಲೆಗಳಲ್ಲಿ 7,267 ಹುದ್ದೆಗಳ ನೇಮಕಾತಿ – ಅರ್ಜಿ ದಿನಾಂಕ ವಿಸ್ತರಣೆ!

October 25, 2025

ಕೇಂದ್ರ ಸರ್ಕಾರದ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) ಖಾಲಿ ಇರುವ 7,267 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಿನ್ಸಿಪಾಲ್, ಪೋಸ್ಟ್ ಗ್ರ್ಯಾಜುಯೇಟ್ ಟೀಚರ್, ಟ್ರೇನ್ಡ್ ಗ್ರ್ಯಾಜುಯೇಟ್ ಟೀಚರ್, ಹಾಸ್ಟೆಲ್ ವಾರ್ಡನ್ ಸೇರಿದಂತೆ ಹಲವು ಬೋಧಕ ಮತ್ತು ಬೋಧಕೇತರ ಹುದ್ದೆಗಳಿವೆ.

ಮೂಲತಃ ಅಕ್ಟೋಬರ್ 23 ಕೊನೆಯ ದಿನವಾಗಿದ್ದ ಅರ್ಜಿ ಸಲ್ಲಿಕೆ ಅವಧಿಯನ್ನು ಈಗ ಅಕ್ಟೋಬರ್ 28ರವರೆಗೆ ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಸಲು ಆಸಕ್ತರು ಅಧಿಕೃತ ವೆಬ್‌ಸೈಟ್‌ — nests.tribal.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ (EMRS Recruitment 2025):

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ

ಪ್ರಿನ್ಸಿಪಾಲ್ 225
ಪೋಸ್ಟ್ ಗ್ರ್ಯಾಜುಯೇಟ್ ಟೀಚರ್ಸ್ (PGT) 1,460
ಟ್ರೇನ್ಡ್ ಗ್ರ್ಯಾಜುಯೇಟ್ ಟೀಚರ್ಸ್ (TGT) 3,962
ಮಹಿಳಾ ಸ್ಟಾಫ್ ನರ್ಸ್ 550
ಹಾಸ್ಟೆಲ್ ವಾರ್ಡನ್ 635
ಅಕೌಂಟಂಟ್ 61
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟಂಟ್ 228
ಲ್ಯಾಬ್ ಅಟೆಂಡೆಂಟ್ 146
ಒಟ್ಟು ಹುದ್ದೆಗಳು 7,267

ಅರ್ಹತೆಗಳು:

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಬಿಸಿಎ, ಬಿಕಾಂ, ಬಿಇ, ಬಿಪಿಎಡ್, ಬಿಎಡ್, ಅಥವಾ ಸ್ನಾತಕೋತ್ತರ ಪದವೀಧರರು ಅರ್ಜಿಸಲು ಅರ್ಹರು.

ವೇತನ ಶ್ರೇಣಿ:

ನೇಮಕಾತಿ ಹೊಂದಿದವರಿಗೆ ಹುದ್ದೆಯ ಪ್ರಕಾರ ₹18,000 ರಿಂದ ₹2.09 ಲಕ್ಷ ರೂಪಾಯಿವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:

ಒಎಂಆರ್ ಆಧಾರಿತ ಪರೀಕ್ಷೆ

ಕೌಶಲ್ಯ ಪರೀಕ್ಷೆ

ದಾಖಲೆ ಪರಿಶೀಲನೆ

ಸಂದರ್ಶನ

ಉದ್ಯೋಗ ಸ್ಥಳ:

ದೇಶಾದ್ಯಂತ ಇರುವ ಏಕಲವ್ಯ ಮಾದರಿ ವಸತಿ ಶಾಲೆಗಳು.

ಅರ್ಜಿ ಸಲ್ಲಿಸಲು:

👉 nests.tribal.gov.in

📢 ಮುಖ್ಯ ಮಾಹಿತಿ:
➡️ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 28, 2025
➡️ ಅರ್ಜಿ ವಿಧಾನ: ಆನ್‌ಲೈನ್

Views: 34

Leave a Reply

Your email address will not be published. Required fields are marked *