ಚಿತ್ರದುರ್ಗ ಅ. 29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಿಮ್ಮಪ್ಪಯ್ಯನಹಳ್ಳಿಯ ಪಟೇಲ್ ತಿಪ್ಪೇಸ್ವಾಮಿ ಶ್ರೀಮತಿ ಚನ್ನಬಸಮ್ಮ ಸಮಾಜ ಸೇವಾ ಟ್ರಸ್ಟ್‍ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಂಗಳವಾರ ನೋಟ್ ಪುಸ್ತಕ ಹಾಗೂ ಎರಡೆರಡು ಪೆನ್ನುಗಳನ್ನು ವಿತರಿಸಲಾಯಿತು.
ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿ ನೂರು ವರ್ಷಗಳನ್ನು ಕಳೆದು, 101ನೇ ವರ್ಷದಲ್ಲಿ ಮುಂದುವರೆಯುತ್ತಿದೆ. ಸಾಕಷ್ಟು ಕಡೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಆದರೆ ನಮ್ಮೂರ ಶಾಲೆ ನೂರರ ಸಂಭ್ರಮವನ್ನು ದಾಟಿ ಮುನ್ನುಗ್ಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ, ಬಡವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಶೈಕ್ಷಣಿಕವಾಗಿ ಉಪಯುಕ್ತವಾಗುವಂತಹ ಕೊಡುಗೆ ನೀಡುವುದು ಉತ್ತಮ ಎಂದು ಆಲೋಚಿಸಿ, ಒಂದು ಕಾಲದಲ್ಲಿ ಈ ಗ್ರಾಮದ ಆಡಳಿತವನ್ನು ನಡೆಸಿದ, ದೊಡ್ಡಗೌಡರೆಂದು ಕರೆಸಿಕೊಳ್ಳುವ ಪಟೇಲ್ ತಿಪ್ಪೇಸ್ವಾಮಿಯವರು 1956ರ ಭೂದಾನ ಚಳುವಳಿಯ ಸಂದರ್ಭದಲ್ಲಿ, ಈ ಶಾಲೆಯ ಅಭಿವೃದ್ಧಿಗೋಸ್ಕರ 5 ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿರುತ್ತಾರೆ .
ಅವರ ವಂಶಜರಾದ ಮಕ್ಕಳು, ಮೊಮ್ಮಕ್ಕಳು ಸೇರಿ, ಅವರ ಹೆಸರನ್ನು ಶಾಶ್ವತ ವಾಗಿ ಉಳಿಸಲು ಸಮಾಜ ಸೇವಾ ಟ್ರಸ್ಟ್‍ನ್ನು ಪ್ರಾರಂಭಿಸಿದ್ದು, ಅದರ ಮೂಲಕ ಈ ಶಾಲೆಯ 1ರಿಂದ 7ನೇ ತರಗತಿ 141ಮಕ್ಕಳಿಗೆ743 ನೋಟ್ಸ್ ಬುಕ್ಸ್‍ಯನ್ನು ಮಕ್ಕಳಿಗೆ ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹವನ್ನು ನೀಡಲಾಯಿತು. ಈ ಅರ್ಧ ವಾರ್ಷಿಕ ಸಮಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾಕಾಗುವಷ್ಟು ನೋಟ್ ಪುಸ್ತಕ ಹಾಗೂ ಎರಡೆರಡು ಪೆನ್ನುಗಳನ್ನು ವಿತರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ವಂಶಸ್ಥರು ನಿವೃತ್ತ ಉಪನ್ಯಾಸಕರಾದ ನಂದೀಶ್. ಜಿ ಟಿ. ಸಹಕಾರ ಬ್ಯಾಂಕ್‍ನ ಸದ್ಯಸರಾದ ಜಿ.ಟಿ.ಬಸವರಾಜ್, ಶಾಲೆಯ.ಎಸ್.ಡಿಎಂ.ಸಿ. ಅಧ್ಯಕ್ಷ ರಾದ ವೈ.ಉಲ್ಲಾಸ, ಮುಖ್ಯ ಶಿಕ್ಷಕರಾದ ಟಿ. ಚಂದ್ರನಯ್ಕ್.ಹಾಗೂ ಗ್ರಾಮ ಪಂಚಾಯತಿ ಸದ್ಯಸರಾದ ರೇವಣ್ಣ. ಓ. ನಾಗರಾಜ್. ಮೈಲಾರಿ. ಗ್ರಾಮಸ್ಥರಾದ ಪ್ರಸನ್ನ ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Views: 91