ಚಿತ್ರದುರ್ಗ ಅ. 30
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕರ್ನಾಟಕ ರಾಜ್ಯದಲ್ಲಿ ಆರ್‍ಎಸ್‍ಎಸ್ 1 ಪಥ ಸಂಚಲನ ನಿಷೇಧಿಸಲು ಕಾಂಗ್ರೆಸ್ ಸರ್ಕಾರ ಹೊರಟಿತ್ತು. ಧಾರವಾಡ ಹೈಕೋರ್ಟ್ ಪೀಠವು ಮಂಗಳವಾರ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಸರ್ಕಾರಕ್ಕೆ ಹೈಕೋರ್ಟ ಛಿಮಾರಿ ಹಾಕಿದೆ ಎಂದು ಬಿಜೆಪಿ ಮುಖಂಡ ಹನುಮಂಮತೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ದೇಶಭಕ್ತ ಸಂಘಟನೆ ಆರ್‍ಎಸ್‍ಎಸ್ ಚಟುವಟಿಕೆಗಳನ್ನು ಬ್ಯಾನ್ ಮಾಡಿ ನಿಲ್ಲಿಸುವ ದೃಷ್ಟಿಯಿಂದ ಸರ್ಕಾರ ಆದೇಶ ಹೊರಡಿಸಿತ್ತು ಇದೀಗ ಧಾರವಾಡ ಹೈಕೋರ್ಟ್ ಪೀಠವು ಇವರ ಆದೇಶಕ್ಕೆ ತಡೆ ನೀಡಿದ್ದು ಇದೀಗ ಸರ್ಕಾರ ಮುಜುಗರಕ್ಕೆ ಒಳಗಾಗಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೀಗ ನೂರು ವರ್ಷದ ಇತಿಹಾಸ ಹೊಂದಿರುವ ಸಂಘಟನೆ ಇದು ಭಾರತ ದೇಶಾದ್ಯಂತ ಜಿಲ್ಲೆ ಜಿಲ್ಲೆಗಳಲ್ಲಿ ಶಾಂತಯುತವಾಗಿ ಸಂಚಲನವನ್ನು ಮಾಡುತ್ತಾ ಬಂದಿರುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಓಲೈಕೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಡಿಜೆಹಳ್ಳಿ ಕೆಜೆಹಳ್ಳಿ ಮೈಸೂರು ಶಿವಮೊಗ್ಗ ಹಾಗೂ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗಳೇ ಇದಕ್ಕೆ ಸಾಕ್ಷಿ ಇಂತಹವರ ಪ್ರಕರಣಗಳನ್ನು ಹಿಂದಕ್ಕೆ ಪಡೆದು ಅವರಿಗೆ ಬೆಂಬಲಿಸುವುದು ಸರ್ಕಾರದ ಕೆಲಸವಾಗಿದೆ. ಎಂದು ಸರ್ಕಾರದ ನಿರ್ಧಾರಗಳ ವಿರುದ್ದ ಕಿಡಿ ಕಾರಿದ್ದಾರೆ.
ಮುಂದೆ ಇನ್ನಾದರೂ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವುದು ಬಿಡಲಿ. ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಆರ್‍ಎಸ್‍ಎಸ್ ದೇಶಭಕ್ತ ಸಂಘಟನೆಯನ್ನು ಚಟುವಟಿಕೆಗಳನ್ನು ನಿಷೇಧಿಸಲಿಕ್ಕೆ ಹೊರಟರೆ ಪರಿಣಾಮ ಏನಾಗಬಹುದು ಎಂದು ಇನ್ನಾದರೂ ತಿಳಿದುಕೊಳ್ಳಬೇಕು ಎಂದು ಹೇಳಿ ಇಂದು ಈ ಹೈಕೋರ್ಟ್ ಪೀಠದ ತೀರ್ಪಿನಿಂದ ಸರ್ಕಾರ ಬುದ್ಧಿಯನ್ನು ಕಲಿಯಬೇಕು ಎಂದು ಹೇಳಿದ್ದಾರೆ.
Views: 26