ಉಕ್ಕಿನ ಮಹಿಳೆ ಇಂದಿರಾಗಾಂಧಿಯವರ ಪುಣ್ಯಸ್ಮರಣೆ: ಚಿತ್ರದುರ್ಗದಲ್ಲಿ ಭಾವಪೂರ್ಣ ನಮನ.

ಚಿತ್ರದುರ್ಗ ಆ. 31 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಇಂದಿರಾಗಾಂಧಿಯವರು ತಮ್ಮ ಆಡಳಿತವಾಧಿಯಲ್ಲಿ ದೇಶವನ್ನು ಮುನ್ನೆಡೆಸುವ ಕಾರ್ಯವನ್ನು ಮಾಡುವುದರ ಮೂಲಕ ಬಡತನದಲ್ಲಿದ್ದ ದೇಶವನ್ನು ಆರ್ಥಿಕವಾಗಿ ಪ್ರಗತಿಯತ್ತ ಕೊಂಡ್ಯೂಯುದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ ತಿಳಿಸಿದರು.


ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಉಕ್ಕಿನ ಮಹಿಳೆ ಇಂದಿರಾಗಾಂಧಿಯವರ 41ನೇ ಪುಣ್ಯ ಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ ವಲ್ಲಬಾಯಿ ಪಟೇಲ್‍ರವರ 150ನೇ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರು ದಿಟ್ಟ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನೆಡೆಸಿದರು. ಇದರಿಂದ ದೇಶ-ವಿದೇಶದಲ್ಲಿ ಆವರ ಹೆಸರು ಪಸರಿಸಿತು. ಅವರು ತಮ್ಮ ಉಡುಗೆ ತೊಡುಗೆಯಲ್ಲಿ ವಿಶೇಷವಾದ ಕಾಳಜಿಯನ್ನು ವಹಿಸಿದ್ದರು. ಆಗರ್ಭ ಶ್ರೀಮಂತರಾಗಿದ್ದರು ಸಹಾ ರೇಷ್ಮೇ ಸೀರೆಯನ್ನು ಉಡದೆ ತಮ್ಮ ದೈನಂದಿನ ಬದುಕಿನಲ್ಲಿ ಖಾದಿ ವಸ್ತ್ರವನ್ನು ಬಳಕೆ ಮಾಡುವುದರ ಮೂಲಕ ಮಹಾತ್ಮ ಗಾಂಧಿಯವರು ಹಾಕಿ ಕೊಟ್ಟ ಧಾರಿಯಲ್ಲಿ ನಡೆದಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯೂ ಸಹಾ ಸರಳವಾಗಿತು ಆದರೆ ಇಂದಿನ  ಪ್ರದಾನ ಮಂತ್ರಿಗಳು ತಮ್ಮ ವಾಸಕ್ಕೆ ಹೆಚ್ಚಿನ ರೀತಿಯ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಐಷರಾಮ ಜೀವನವನ್ನು ನಡೆಸದೇ ಸರಳವಾಗಿ ತಮ್ಮ ಬದುಕನ್ನು ನಡೆಸಿದವರು ಇಂದಿರಾಗಾಂಧಿಯವರಾಗಿದ್ದಾರೆ ಎಂದರು.


ಇಂದಿರಾಗಾಂಧಿಯವರು ತಮ್ಮ ಆಡಳಿತದ ಅವಧಿಯಲ್ಲಿ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಬಡವರು ಸಹಾ ಬ್ಯಾಂಕ್‍ಗಳಿಗೆ ಹೋಗಲು ಅನುವೂ ಮಾಡಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಇಂದು ನಾವುಗಳು ನಡೆಯಬೇಕಿದೆ, ಇದರಿಂದ ಅವರ ಆತ್ಮಕ್ಕೆ ಶಾಂತಿಯನ್ನು ನೀಡಬೇಕಿದೆ ಎಂದು ಶಿವಣ್ಣ ತಿಳಿಸಿದರು.


ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಅಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಇಂದಿರಾಗಾಂಧಿಯವರು ನಮ್ಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಅವರು ಹಾಕಿ ಕೊಟ್ಟ ತತ್ವಾದರ್ಶಗಳನ್ನು ಮುಂದಿನ ದಿನದಲ್ಲಿ ಪಾಲಿಸುವ ವುದರ ಮೂಲಕ ಕಾಂಗ್ರೆಸ್ ಪಕ್ಷದ ಏಳ್ಗೆಗೆ ಶ್ರಮಿಸಬೇಕಿದೆ ಕಾಂಗ್ರೆಸ್ ಪಕ್ಷಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಮಹಿಳೆ ಎಂದರೆ ಇಂದಿರಾಗಾಂಧಿಯವರು. ದೇಶದಲ್ಲಿ ನಡೆದ ಯುದ್ಧ ಹಾಗೂ ಕಷ್ಟದ ಕಾಲದಲ್ಲಿ ಧೈರ್ಯಗೆಡದೆ ದೇಶವನ್ನು ಸಮರ್ಥವಾಗಿ ಮುನ್ನೆಡೆಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಜನರಿಗಾಗಿ ಹಲವಾರು ಕಾನೂನುಗಳನ್ನು ಜಾರಿ ಮಾಡುವುದರ ಮೂಲಕ ಬಡ ಜನರು ಅರ್ಥಿಕವಾಗಿ ಪ್ರಗತಿ ಹೊಂದಲು ನೆರವಾದರು ಎಂದರು.


ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ ಮಾತನಾಡಿ, ತಂದೆ-ಮಗಳು ದೇಶವನ್ನು ಮುನ್ನಡೆಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ದಿಟ್ಟ ತನದಿಂದ ಆಡಳಿತವನ್ನು ನಡೆಸುವುದರ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕಿದರು. ಆಗ ದೇಶ ಹಲವಾರು ಸಮಸ್ಯೆಗಳಿಂದ ಕೊಡಿತ್ತು ಆದರಲ್ಲಿಯೂ ಸಹಾ ಇಂದಿರಾಗಾಂಧಿಯವರು ಮುನೆಡೆಸಿದರು ಆದರೆ ಈಗ ದೇಶ ಸುಭೀಕ್ಷವಾಗಿದೆ ಈಗ ಇರುವ ಪ್ರದಾನ ಮಂತ್ರಿಗಳು ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಇವರ ದಿಟ್ಟತವನ್ನು ನೋಡಿದ ವಾಜಿಪೇಯಿರವರು ಇವರನ್ನು ದುರ್ಗಿ ಎಂದು ಕರೆದಿದ್ದರು. ಎಂದರು.


ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮುದಸಿರ್, ಸೇವಾದಳದ ಸುಧಾ, ಇಂದಿರಾ, ರಮೇಶ್, ಶಶಿಕಿರಣ್, ಚಾಂದಪೀರ್, ವಸಿಂ, ಆಶ್ರಫ್, ಭರತ್, ತಿಪ್ಪೇಸ್ವಾಮಿ, ಮಧುಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 86

Leave a Reply

Your email address will not be published. Required fields are marked *