ಚಿತ್ರದುರ್ಗದಲ್ಲಿ ಸ್ವದೇಶಿ ಮೇಳದ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು.

ಚಿತ್ರದುರ್ಗ ನ. 03

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಸ್ವಾವಲಂಬನೆಯ ಪರಿಕಲ್ಪನೆ ಹಿನ್ನೆಲೆಯಲ್ಲಿ ನ.12 ರಿಂದ 16 ರವರೆಗೆ ನಗರದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ)ದಲ್ಲಿ ನಡೆಯಲಿರುವ ಸ್ವದೇಶಿ ಮೇಳದ ಅಂಗವಾಗಿ ಹಮ್ಮಿಕೊಂಡಿರುವ ಸ್ವದೇಶಿ ಜಾಗರಣ ಮಂಚ್‍ನ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸೋಮವಾರ ನಡೆಸಲಾಯಿತು. 


ಸ್ವದೇಶಿ ಮೇಳದ ಕರ್ನಾಟಕ ಪ್ರಾಂತ ಉಸ್ತುವಾರಿ ಜಗದೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಸ್ವದೇಶಿ ಮೇಳದ ಸಹಾ ಸಂಯೋಜಕರಾದ ಸಿದ್ಧಾರ್ಥ ಗುಡಾರ್ಪಿ, ಸಂಘಟಕರಾದ ರವೀಂದ್ರ, ಸಹ ಸಂಚಾಲಕರಾದ ಸಂಪತ್ ಕುಮಾರ್ ವೆಂಕಟೇಶ್ ಯಾದವ್, ಶ್ರೀಮತಿ ಶ್ಯಾಮಲ ಶಿವಪ್ರಕಾಶ್, ನಾಗರಾಜ್, ಲೋಕೇಶ್, ರೂಪ ಜನಾರ್ಧನ್, ಸೂರ್ಯ ನಾರಾಯಣ, ರವಿ, ಕೇಶವ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 64

Leave a Reply

Your email address will not be published. Required fields are marked *