“ಚಿತ್ರದುರ್ಗದಲ್ಲಿ ನ.12-17 ಸ್ವದೇಶಿ ಮೇಳ: ರಾಸಾಯನಿಕ ಆಹಾರ ಬಿಟ್ಟು ಸಾವಯವಕ್ಕೆ ಕರೆ”

ಚಿತ್ರದುರ್ಗ ನ. 8

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಇಂದಿನ ದಿನಮಾನದಲ್ಲಿ ನಾವುಗಳು ರಾಸಾಯನಿಕವಾದ ಆಹಾರವನ್ನು ಸೇವನೆ ಮಾಡುವುದರ ಮೂಲಕ ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದೇವೆ, ಇದರ ಬದಲು ಸಾವಯವ ವಸ್ತುಗಳು ಅದರಲ್ಲೂ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಕರೆ ನೀಡಿದರು.

ಚಿತ್ರದುರ್ಗ ನಗರದಲ್ಲಿ ನ.೧೨ ರಿಂದ ೧೭ರವರೆಗೆ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿ ನಡೆಯಲಿರುವ ಸ್ವದೇಶಿ ಮೇಳದ ಅಂಗವಾಗಿ ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತದವರೆಗೆ ಸ್ವದೇಶಿ ಮೇಳದ ಪ್ರಚಾರದ ಅಂಗವಾಗಿ ನಡೆದ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಬಹುತೇಕ ಜನತೆ ಫಾಸ್ಟ್ ಫುಡ್‌ಗೆ ಮರುಳಾಗಿದ್ದಾರೆ. ಹಿಂದಿನ ಕಾಲದಂತೆ ಹೆಚ್ಚಿನ ಆರೋಗ್ಯ ಹಾಗೂ ಶಕ್ತಿಯನ್ನು ನೀಡುವಂತ ಆಹಾರದ ಸೇವನೆ ಕಡಿಮೆಯಾಗುತ್ತಿದೆ, ಜಂಕ್ ಪುಡ್‌ನ್ನು ಸೇವನೆ ಮಾಡುವುದರ ಮೂಲಕ ಆನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ ನಮ್ಮ ಪೂರ್ವಜರು ಸಾವಯವ ಗೊಬ್ಬರದಿಂದ ತಯಾರಾದ ವಸ್ತುಗಳನ್ನು ಸೇವನೆ ಮಾಡುವುದರ ಮೂಲಕ ನೂರಾರು ವರ್ಷ ಜೀವನವನ್ನು ಯಾವುದೇ ರೋಗ ಇಲ್ಲದೆ ನಡೆಸುತ್ತಿದ್ದರು, ಆದರೆ ಇಂದಿನ ಯುವ ಪೀಳಿಗೆ ಇದನ್ನು ಬಿಟ್ಟು ಜಂಕ್‌ಪುಡ್ ಸೇವನೆಯಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.

ಚಿತ್ರದುರ್ಗದಲ್ಲಿ ನ. ೧೨ ರಿಂದ ೧೭ರವರೆಗೆ ಸ್ವದೇಶಿ ಮೇಳವನ್ನು ಆಯೋಜನೆ ಮಾಡಲಾಗಿದೆ ಇಲ್ಲಿ ಈ ಮೇಲ ಬರಲು ನವೀನ್ ರವರು ಕಾರಣರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಜನತೆಗೆ ಸ್ವದೇಶಿ ವಸ್ತುಗಳನ್ನು ಪರಿಚಯ ಮಾಡಿಕೊಡಬೇಕೆಂದು ತೀರ್ಮಾನ ಮಾಡಿದ್ದರ ಹಿನ್ನಲೆಯಲ್ಲಿ ಈ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಜನತೆ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಮೇಳದ ಯಶಸ್ವಿಗೆ ಕಾರಣರಾಗಬೇಕಿದೆ. ಸ್ವದೇಶಿ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯ ಸುಧಾರಣೆಯಾಗುತ್ತದೆ, ಇದರಿಂದ ಗ್ರಾಮಾಂತರ ಜನತೆಗೆ ಉದ್ಯೋಗ ಸಿಗುತ್ತದೆ, ಈ ದೃಷ್ಟಿಯಿಂದ ಸ್ವದೇಶಿ ಮೇಳ ನಡೆಯಲಿದೆ. ಜನತೆ ಇದರ ಸದುಪಯೋಗವನ್ನು ಪಡೆಯಬೇಕಿದೆ. ಇಂದಿನ ದಿನಮಾನದಲ್ಲಿ ನಾವುಗಳು ರಾಸಾಯಿನಿ ಕವಾದ ಆಹಾರವನ್ನು ಸೇವನೆ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಕ್ಯಾನ್ಸ್‌ರ್‌ಗೆ ಒಳಗಾಗುತ್ತಿದ್ದೇವೆ ಇದರಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ. ಎಂದ ಆವರು ಖಾಯಿಲೆ ಬಂದಾಗ ಅದಕ್ಕೆ ಔಷಧಿಯನ್ನು ಸೇವನೆ ಮಾಡುವ ಬದಲು ಖಾಯಿಲೆ ಬಾರದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ. ಈ ಮೇಳದ ಯಶಸ್ವಿಗೆ ಹಲವಾರು ಜನತೆ ಬಹು ದಿನಗಳಿಂದ ಕಾರ್ಯ ಪ್ರವೃತರಾಗಿದ್ದಾರೆ ಇವರ ಎಲ್ಲಾ ಪರಿಶ್ರಮದಿಂದ ಈ ಮೇಳ ಯಶಸ್ವಿಯಾಗಬೇಕಿದೆ ಎಂದರು.

ಕಾರ್ಯಕ್ರದಲ್ಲಿ ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್, ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಸಹ ಸಂಚಾಲಕರಾದ ಸಂಪತ್ ಕುಮಾರ್, ವೆಂಕಟೇಶ್ ಯಾದವ್, ರೇಖಾ, ಶಶಿಕಲಾ ರವಿಶಂಕರ್, ಬಸಮ್ಮ, ನಾಗರಾಜ್ ಸಂಗಂ, ಲಿಂಗರಾಜು,ಶ್ಯಾಮಲ ಶಿವಪ್ರಕಾಶ್, ಗುರು, ರವೀಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 23

Leave a Reply

Your email address will not be published. Required fields are marked *