ಚಿತ್ರದುರ್ಗ ನ. 11
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗದ ಶ್ರೀ ಏಕನಾಥೇಶ್ವರಿ ಅಮ್ಮನವರ ಪುರಾತನ ಇತಿಹಾಸ ಪ್ರಸಿದ್ಧ ಶಿಲಾ ಶಾಸನವು ಚೋಳಗುಡ್ಡ ಸಮೀಪದ ಆಗಸನಕಲ್ಲು ರಸ್ತೆಯ ಪಕ್ಕದಲ್ಲಿ ಶೀಲಾ ಶಾಸನವಿದೆ ಇದಕ್ಕೆ ಅಡ್ಡಲಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಕೂಡಲೆ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀ ಏಕನಾಥೇಶ್ವರಿ ಅಮ್ಮನವರ ಭಕ್ತಾದಿಗಳು ಹಾಗೂ ಹಿಂದೂ ಸಂಘಟನೆಗಳಿಂದ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಚಿತ್ರದುರ್ಗ ನಗರದ ಕೋಟೆಯನ್ನು ಅನೇಕ ರಾಜ ವಂಶಗಳು ಆಳ್ವಿಕೆಗೆ ಒಳಪಟ್ಟಂತಹ ಅತ್ಯಂತ ಪುರಾತನ ಇತಿಹಾಸದ ನಗರವಾಗಿದೆ. ಆದರೆ ಇದನ್ನು ಹಾಳು ಮಾಡುವ ದುಷ್ಟ ಶಕ್ತಿಗಳು ಇತಿಹಾಸದ ಶಿಲಾ ಶಾಸನವನ್ನು ನಾಶ ಮಾಡುತ್ತಿದ್ದಾರೆ. ಚಿತ್ರದುರ್ಗ ನಗರದ ನಗರಸಭೆ ವ್ಯಾಪ್ತಿಗೆ ಒಳಪಡುವ ಚೇಳುಗುಡ್ಡ ಸಮೀಪದಲ್ಲಿರುವ ಅಗಸನಕಲ್ಲು ರಸ್ತೆಯ ಪಕ್ಕದಲ್ಲಿರುವ ಬಂಡೆಯ ಮೇಲೆ ಏಕನಾಥೇಶ್ವರಿಯ ಶಿಲಾ ಶಾಸನವಿದ್ದು, ಇದು ಇತಿಹಾಸದಲ್ಲಿ ಉಲ್ಲೇಖವಿದೆ. ಆಗೀನ ಕಾಲದಲ್ಲಿ ವಿಜಯ ನಗರದ ಅಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ವಿಜಯನಗರದ ವಿಜಯರಾಯರಿಂದ ಒಳಿತಾಗಲಿ ಎಂದು ವಿರುಪಣ್ಣನವರು ತಮ್ಮ ತೋಟದ ಜಾಗವನ್ನು ಚಿತ್ರದುರ್ಗದ ಆದಿದೇವತ ಶ್ರೀ ಏಕನಾಥೇಶ್ವರಿ ಅಮ್ಮನವರಿಗೆ ದಾನ ಕೊಟ್ಟ ಘಟನೆಯು ಪುಸ್ತಕದಲ್ಲಿ ವಿವರಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಶಿಲಾ ಶಾಸನವಿದೆ. ಇದನ್ನು ಹಾಳು ಮಾಡಲು ಶಾಸನವಿರುವ ಜಾಗವನ್ನು ಒತ್ತುವರಿ ಮಾಡಿ ನಗರಸಭೆಯಿಂದ ಯಾವ ಅನುಮತಿಯನ್ನು ಪಡೆಯದೆ ಇತಿಹಾಸದ ಶಿಲಾ ಶಾಸನಕ್ಕೆ ಅಡ್ಡಲಾಗಿ ಆಕ್ರಮವಾಗಿ ಕಟ್ಟಡವನ್ನು ನಿರ್ಮಿಸಲು ಮುಂದಾಗಿದ್ದರು ಇದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷದ್ನಿಂದ ದಿನಾಂಕ:02-11-2021 ರಂದು ಚಿತ್ರದುರ್ಗ ನಗರಸಭೆಗೆ ಮನವಿಯನ್ನು ಸಲ್ಲಿಸಲಾಗಿತ್ತು.
ದೂರು ನೀಡಿದ ನಂತರ ಇದರ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗೀತಗೊಳಿಸಲಾಗಿತ್ತು. ಶಿಲಾ ಶಾಸನಕ್ಕೆ ಅರ್ಧಕ್ಕೆ ನಿಂತ ಕಟ್ಟಡವು ಶಾಸನಕ್ಕೆ ಅಡ್ಡಲಾಗಿದೆ ಎಂದು ಮರುದೂರನ್ನು ದಿನಾಂಕ:07-03-2025 ರಂದು ತೆರವುಗೊಳಿಸುವಂತೆ ಮನವಿಯನ್ನು ನೀಡಲಾಗಿತ್ತು. ಆದರೆ ನಗರಸಭೆಯು ಯಾವುದೇ ಕ್ರಮವನ್ನು ಸಹ ಕೈಗೊಂಡಿರುವುದಿಲ್ಲ. ಆದ್ದರಿಂದ ಕಟ್ಟಡವನ್ನು ತೆರವು ಮಾಡಿ ಶಿಲಾ ಶಾಸನವನ್ನು ಉಳಿಸಿ ಇತಿಹಾಸವನ್ನು ರಕ್ಷಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಭಕ್ತಾಧಿಗಳು ಹಾಗೂ ಹಿಂದೂ ಸಂಘಟನೆಗಳು ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿವಿಶ್ವ ಹಿಂದೂ ಪರಿಷದ್ ಮುಖಂಡರಾದ ಪಿ. ರುದ್ರೇಶ್ ಏಕನಾಥೇಶ್ವರಿ ಸಮಿತಿಯ ಹನುಮಂತ, ಹಾಗೂ ಶ್ರೀನಿವಾಸ್, ಲೀಲಾದರ್ ಠಾಕೂರ್ ,ಶಿವಶಕ್ತಿ ಬಾಲಾಜಿ , ಮಂಜು, ಗುರುರಾಜ, ಮಲ್ಲೇಶ್, ಕಿರಣ್ ಕುಮಾರ್, ದಿಲೀಪ್, ಇತರರು ಇದ್ದರು