ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ ಪರಿಣಾಮದಿಂದ ಕಾಲಗಳಲ್ಲಿ ಅನಿಯಮಿತತೆ ಕಂಡುಬರುತ್ತಿದೆ. ಇದಕ್ಕೆ ಮಾನವ ಚಟುವಟಿಕೆಗಳು ಪ್ರಮುಖ ಕಾರಣ. ಈ ವರ್ಷ ಮಳೆಗಾಲ ವಿಸ್ತರಿಸಿದಂತೆ ವಾತಾವರಣ ಬದಲಾವಣೆಗಳು ಮುಂದುವರಿಯುತ್ತಿವೆ.
ಪರಿಸರ ನಾಶವನ್ನು ತಡೆಯಲು ಸಾಮೂಹಿಕ ಪ್ರಯತ್ನ ಈಗಲೇ ಪ್ರಾರಂಭವಾಗಬೇಕು.
ಪ್ರಸ್ತುತ ಚಳಿ ಸ್ವಲ್ಪ ಮಟ್ಟಿಗೆ ಬಿದ್ದಿದ್ದರೂ, ಮುಂದಿನ ದಿನಗಳಲ್ಲಿ ಉತ್ತಮ ಚಳಿಗಾಲ ಬರುವ ನಿರೀಕ್ಷೆಯಿದೆ. ಈ ಋತುವಿನಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ. ಸರ್ಕಾರದ ಮಾಹಿತಿ ಅನುಮಾನದಂತೆ ಈ ವರ್ಷ ಸ್ವಲ್ಪ ಚಳಿಯ ಪ್ರಮಾಣ ಹೆಚ್ಚಾಗಬಹುದು ಎಂಬ ಅನುಮಾನ ಈಗಾಗಲೇ ಇದ್ದೇ ಇದೆ.
ಚಳಿಗಾಲದ ಸಾಮಾನ್ಯ ಸಮಸ್ಯೆಗಳು:
- ಚರ್ಮವು ತೇವಾಂಶ ಕಳೆದುಕೊಂಡು ಒಣಗುವುದು.ಕೈ-ಕಾಲುಗಳು ಒಡೆಯುವುದು ಮತ್ತು ನೋವು. ತುಟಿಗಳು ಒಡೆಯುವುದು.
- ಕೀಲು ನೋವು ಹೆಚ್ಚಾಗುವುದು.ಹಸಿವು ಹೆಚ್ಚಾಗುವುದು.ಕೂದಲು ಒರಟಾಗುವುದು.ನೆಗಡಿ, ಶೀತ, ಕೆಮ್ಮು.
ಚಳಿಗಾಲಕ್ಕೆ ಸೂಕ್ತ ಆಹಾರಗಳು:
ಹಾಲು, ತುಪ್ಪಮೆಂತ್ಯೆ, ಶುಂಠಿ, ಮೆಣಸಿನಕಾಯಿ,ಗೋಧಿ, ಜೋಳ, ನವಣೆ,ಬಿಸಿ ಸೂಪುಗಳು, ಲಘು ಆಹಾರ,ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಹಣ್ಣುಗಳು (ಡ್ರೈ ಫ್ರೂಟ್ಸ್). ಚಳಿಗಾಲದಲ್ಲಿ ನೀರು ಕುಡಿಯುವ ಇಚ್ಛೆ ಕಡಿಮೆಯಾದರೂ, ರೂಢಿಯಷ್ಟು ನೀರು ಕುಡಿಯುವುದು ಅತ್ಯಗತ್ಯ. ವಾತಾವರಣದಿಂದ ದೇಹದ ತೇವಾಂಶ ಕಡಿಮೆಯಾಗುತ್ತದೆ.ತೀಕ್ಷ್ಣ, ಉಷ್ಣ ಆಹಾರ ಸೇವನೆ ಹೆಚ್ಚಾಗುತ್ತದೆ.ನೀರು ಕಡಿಮೆಯಾದರೆ ರಕ್ತಸಂಚಾರ ಮತ್ತು ಪೋಷಕಾಂಶ ಶೋಷಣೆ ಕುಸಿಯುತ್ತದೆ.
ಚರ್ಮ ರಕ್ಷಣೆ:
- ಎಣ್ಣೆ ಅಭ್ಯಂಗ (ತೈಲ ಮಾಲಿಶ್): ಎಳ್ಳೆಣ್ಣೆಯಿಂದ ಸಂಪೂರ್ಣ ದೇಹಕ್ಕೆ ಎಣ್ಣೆ ಹಚ್ಚಿ. ಬಿಸಿ ನೀರಿನಿಂದ ಸ್ನಾನ ಮಾಡಿ. ಬಾಟಲಿ ಮೇಲೆ ‘ಆಹಾರ ದರ್ಜೆ’ ಎಂದು ಬರೆದಿರುವುದನ್ನು ಪರೀಕ್ಷಿಸಿ.’ಹೊರಗಿನ ಉಪಯೋಗಕ್ಕೆ ಮಾತ್ರ’ ಎಂದಿರುವ ಎಣ್ಣೆ ಬಳಸಬೇಡಿ.
- ಸಾಬೂನು ಆಯ್ಕೆ: ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಗಳ ಆಫರ್ಗಳಿಗೆ ಮರುಳಾಗದೆ, ಈ ಮುಂದಿನ ಅಂಶಗಳನ್ನು ಗಮನಿಸಿ ಖರೀದಿಸಿ :
- ಗ್ರೇಡ್ 1 (ಪ್ರಥಮ ದರ್ಜೆ) ಸಾಬೂನು. TFM 76% ಅಥವಾ ಅದಕ್ಕಿಂತ ಹೆಚ್ಚು. TFM (Total Fatty Matter) ಅಂದರೆ ಸಾಬೂನಿನಲ್ಲಿರುವ ಸ್ನಿಗ್ಧತ್ವದ ಪ್ರಮಾಣ — ಹೆಚ್ಚು ಇದ್ದರೆ ಗುಣಮಟ್ಟ ಉತ್ತಮ. ಟಿವಿ ಜಾಹೀರಾತುಗಳಿಗೆ ಮಾತ್ರ ಅವಲಂಬಿಸಬೇಡಿ.ಆಯುರ್ವೇದ ಸಾಬೂನುಗಳಲ್ಲಿಯೂ ಈ ಮಾಹಿತಿಯನ್ನು ಪರೀಕ್ಷಿಸಿ.
ಹಿರಿಯರು ಮತ್ತು ಮಕ್ಕಳು ಚಳಿ ತಾಳುವ ಶಕ್ತಿ ಕಡಿಮೆ ಇರುತ್ತದೆ.ಬೆಚ್ಚಗಿನ ಹಾಸಿಗೆ, ಬಿಸಿ ನೀರಿನ ಚೀಲ ಉಪಯೋಗಿಸಬೇಕು ರಾತ್ರಿ ತಡವಾಗಿ ಹೊರ ಹೋಗುವುದನ್ನು ತಪ್ಪಿಸಬೇಕು. ಸೂರ್ಯನ ಬೆಳಕಿನಲ್ಲಿ ದಿನಕ್ಕೆ ಕನಿಷ್ಠ 15 ನಿಮಿಷ ಕುಳಿತುಕೊಳ್ಳುವುದು.
ನಿಯಮಿತ ವ್ಯಾಯಾಮ ಏಕೆ ಮುಖ್ಯ?
ಚಳಿಗಾಲದಲ್ಲಿ ಮಲಗುವ ಆಕರ್ಷಣೆ ಹೆಚ್ಚಾದರೂ, ವ್ಯಾಯಾಮ ತಪ್ಪಬಾರದು. ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರ.ಬೆಳಿಗ್ಗೆ ಎದ್ದು ಬಿಸಿ ನೀರಿನ ಕುಟುಕು ಕುಡಿಯಿರಿ. ಧ್ಯಾನದಿಂದ ಮನಸ್ಸಿಗೆ ಶಾಂತಿ. ರಕ್ತಸಂಚಾರ ಸುಧಾರಣೆ, ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿ.
ಮುಖ್ಯ ಎಚ್ಚರಿಕೆಗಳು:
- ಯಾವುದೇ ವಸ್ತುವಿನ ಅತಿ ಬಳಕೆ ಹಾನಿಕಾರಕ
- ಚಳಿಗಾಲದ ಪದ್ಧತಿಗಳನ್ನು ಬೇಸಿಗೆಯಲ್ಲಿ ಅನುಸರಿಸಬೇಡಿ
- ಉತ್ಪನ್ನ ಖರೀದಿಸುವಾಗ ಮಾಹಿತಿಯನ್ನು ಓದಿ, ಜಾಹೀರಾತುಗಳಿಗೆ ನಂಬಿಕೆ ಇಡಬೇಡಿ.
ಸಾರಾಂಶ:
- ಆಹಾರ: ಎಳ್ಳು-ಬೆಲ್ಲ, ಉಷ್ಣ ಆಹಾರ, ಸಾಕಷ್ಟು ನೀರು
- ಚರ್ಮ: ಎಳ್ಳೆಣ್ಣೆ ಅಭ್ಯಂಗ, ಉತ್ತಮ ಸಾಬೂನು, ನೈಸರ್ಗಿಕ ಲೇಪ
- ಬಟ್ಟೆ: ಸಂಪೂರ್ಣ ಮೈ ಮುಚ್ಚುವ ಬೆಚ್ಚಗಿನ ಬಟ್ಟೆ, ಕಿವಿ ರಕ್ಷಣೆ
- ಪಾದರಕ್ಷೆ: ಬೂಟು ಮತ್ತು ಸ್ವಚ್ಛ ಸಾಕ್ಸ್
- ವ್ಯಾಯಾಮ: ಯೋಗ, ಸೂರ್ಯನಮಸ್ಕಾರ, ಧ್ಯಾನ
- ಸೂರ್ಯನ ಬೆಳಕು: ದಿನಕ್ಕೆ ಕನಿಷ್ಠ 15 ನಿಮಿಷ ವಿಟಮಿನ್ D ಗಾಗಿ
- ಎಚ್ಚರಿಕೆ: ಇತಿಮಿತಿಯಲ್ಲಿ ಬಳಕೆ, ಋತು ಪ್ರಕಾರ ಬದಲಾವಣೆ.
ಈ ಮಾಹಿತಿಯು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ.
Views: 16