ಚಿತ್ರದುರ್ಗ ನ. 14
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಕಠಿಣ ಪರಿಶ್ರಮದ ಜೊತೆಗೆ ಪದವಿಯನ್ನು ಪಡೆದು ಇದರೊಂದಿಗೆ ಕೌಶಲ್ಯವನ್ನು ಹೊಂದುವುದರ ಮೂಲಕ ತಮ್ಮ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ ಇದರೊಂದಿಗೆ ಪ್ರಮಾಣಿಕತೆ, ನ್ಯಾಯ, ನೀತಿಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಕೊಪ್ಪಳ ವಿಶ್ವ ವಿದ್ಯಾನಿಲಯದ ಕುಪತಿಗಳಾದ ಬಿ.ಕೆ.ರವಿ ಕರೆ ನೀಡಿದರು.

2024-25ನೇ ಸಾಲಿನಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಲ್ಲಿ ಪದವಿ ಶಿಕ್ಷಣ ಪೂರೈಸಿರುವ ಸುಮಾರು 600 ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ‘ಪರಿಣಿತ್-2025’ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರಾಜು ಅರಸು ಹೆಸರಿನಲ್ಲಿ ನಡೆಯುತ್ತಿರುವ ಈ ವಿದ್ಯಾ ಸಂಸ್ಥೆಯಲ್ಲಿ ಬಡವರಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವುದರ ಮೂಲಕ ಚಂದ್ರಪ್ಪರವರು ವಿದ್ಯಾದಾನಿಗಳಾಗಿದ್ದಾರೆ, ಅರಸುರವರ ಚಿಂತನೆಗಳನ್ನು ತಮ್ಮಲ್ಲಿ ಅಳವಡಿಕೆ ಮಾಡಿಕೊಳ್ಳುವುದರ ಮೂಲಕ ಇಲ್ಲಿನ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಿದ್ದಾರೆ. ಅರಸು ರವರ ಚಿಂತನೆಗಳನ್ನು ತಮ್ಮಲ್ಲಿ ಮೈಗೊಡಿಸಿಕೊಳ್ಳುವುದರ ಮೂಲಕ ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಶೋಷಣೆಗೆ ಒಳಗಾದ ಸಮುದಾಯಗಳಿಗೆ ತಮ್ಮ ಸಹಾಯವನ್ನು ಮಾಡುತ್ತಿದ್ದಾರೆ ಎಂದರು.
ಚಿತ್ರದುರ್ಗ ಬರ ಪೀಡಿತ ಪ್ರದೇಶವಾಗಿದೆ ಇಲ್ಲಿ ಶಿಕ್ಷಣವೊಂದೇ ದಾರಿಯಾಗಿದೆ ಶಿಕ್ಷಣ ಇದದಲ್ಲಿ ನಮ್ಮ ಜೀವನವನ್ನು ಸಾಗಿಸಬಹುದಾಗಿದೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ತಾವುಗಳಿಸುವ ಪದವಿಯ ಜೊತೆಗೆ ಕೌಶಲ್ಯವನ್ನು ಸಹಾ ಗಳಿಸುವಂತೆ ಆಗಬೇಕಿದೆ ಆಗ ಮಾತ್ರ ನೀವುಗಳಿಸಿದ ಅಂಕಗಳಿಗೆ ಬೆಲೆ ಸಿಗುತ್ತದೆ. ಬಿಎಡ್ ಎಂದರೆ ಶಿಕ್ಷಕರುಗಳನ್ನು ತಯಾರು ಮಾಡುವ ಕಾರ್ಯವಾಗಿದೆ, ಇಲ್ಲಿ ಉತ್ತಮವಾಗಿ ಕೆಲಸವನ್ನು ಮಾಡಿದರೆ ಮುಂದೆ ಉತ್ತಮವಾದ ಪ್ರಜೆಗಳು ನಿಮ್ಮಿಂದ ನಿರ್ಮಾಣವಾಗಲು ಸಾಧ್ಯವಿದೆ. ಬಲಿಷ್ಠವಾದ ಭಾರತವನ್ನು ನಿರ್ಮಾಣ ಮಾಡುವುದು ಶಿಕ್ಷಕರಿಂದ ಮಾತ್ರ ಸಾಧ್ಯವಿದೆ. ಯುವ ಪೀಳಿಗೆಯನ್ನು ತಯಾರು ಮಾಡುವ ಹೊಣೆಗಾರಿಕೆ ನಿಮ್ಮ ಮೇಲೆ ಇದೆ, ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಹೆಚ್ಚಾಗಿದೆ ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಬಿ.ಡಿ.ಕುಂಬಾರ್ ಮಾತನಾಡಿ, ಬೇರೆ ಕಾಲೇಜುಗಳಿಗೆ ಹೋಲಿಸಿದರೆ ದೇವರಾಜು ಅರಸುವಿದ್ಯಾಸಂಸ್ಥೆ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ, ಇಂದಿನ ದಿನಮಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಅವಲಂಬಿಸಿದೆ ನಮ್ಮ ಜ್ಞಾನದ ಬಳಕೆಯನ್ನು ಮಾಡಬೇಕಿದೆ, ಇದರಿಂದ ನಮ್ಮ ಜ್ಞಾನವೂ ಸಹಾ ಬಳಕೆಯಾಗುತ್ತದೆ, ತಾವುಗಳಿಸುವ ಪದವಿಯೊಂದಿಗೆ ಕೌಶಲ್ಯವನ್ನು ಹೊಂದಿದಾಗ ಮಾತ್ರ ನಿಮ್ಮ ಪದವಿಗೆ ಮಾನ್ಯತೆ ಸಿಗುತ್ತದೆ, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ಸಹಾ ನೀಡುತ್ತಿರುವುದು ಉಪಯುಕ್ತವಾದ ಕಾರ್ಯವಾಗಿದೆ ಎಂದರು,
ತಾವು ಕಲಿತ ಶಿಕ್ಷಣಕ್ಕೆ ಉದ್ಯೋಗವನ್ನು ಅರಸದೇ ನೀವೇ ಬೇರೆಯವರಿಗೆ ಉದ್ಯೋಗವನ್ನು ನೀಡುವಂತಾಗಬೇಕಿದೆ ಆಗ ನಿಮ್ಮ ಶಿಕ್ಷಣಕ್ಕೆ ಬೆಲೆ ಬರುತ್ತದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಮಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದೆ ಅದರ ಪ್ರಯೋಜನವನ್ನು ಪಡೆಯುವುದರ ಮೂಲಕ ಬೇರೆಯವರಿಗೆ ಉದ್ಯೋಗವನ್ನು ನೀಡುವಂತವರಾಗಿ, ಕೈಗಾರಿಕೆ ಸ್ಥಾಪನೆ ಮಾಡಿ, ವ್ಯವಹಾರವನ್ನು ಮಾಡಿ, ಸೊಸೈಟಿಯನ್ನು ಪ್ರಾರಂಭಿಸುವಂತೆ ಕರೆ ನೀಡಿ ಇಂದಿನ ದಿನಮಾನದಲ್ಲಿ ಸರ್ಕಾರದ ಮಟ್ಟದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿವೆ ಈ ಹಿನ್ನಲೆಯಲ್ಲಿ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿ, ಇದಕ್ಕೆ ಬೇಕಾದ ತಯಾರಿಯನ್ನು ನಡೆಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಗಳು ಹಾಗೂ ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಡಾ.ಎಂ.ಚಂದ್ರಪ್ಪ ಮಾತನಾಡಿ, ಕಳೆದ 40 ವರ್ಷಗಳಿಂದ ಚಿತ್ರದುರ್ಗದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ, ಇಲ್ಲಿ 5ಸಾವಿರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈಗಾಗಲೇ 22 ಸಾವಿರದಷ್ಟು ವಿದ್ಯಾರ್ಥಿಗಳು ವಿವಿಧ ರೀತಿಯ ಪದವಿಯನ್ನು ಪಡೆದು ತೆರಳಿದ್ದಾರೆ, 4000 ಶಿಕ್ಷಕರನ್ನು ತಯಾರು ಮಾಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ಫಲಾಫೇಕ್ಷೆ ಇಲ್ಲದೆ ಶಿಕ್ಷಣವನ್ನು ನೀಡಲಾಗುತ್ತಿದೆ. ರಾಜಕೀಯವಾಗಿ ಶಾಸಕನಾಗಿ ಕೆಲಸವನ್ನು ಮಾಡಿದ್ದೇನೆ, ಕಷ್ಠಕರ ಕಾಲದಲ್ಲಿ ಶಿಕ್ಷಣವನ್ನು ಸಹಾ ನೀಡಲಾಗಿದೆ. ಉತ್ತಮವಾದ ಸೇವೆಯನ್ನು ಹೊಂದಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಸಿ. ರಘುಚಂದನ್ ಮಾತನಾಡಿ, ಚಿತ್ರದುರ್ಗ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯು ಕಳೆದ 43 ವರ್ಷಗಳಿಂದ ಶೈಕ್ಷಣಿಕಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಶಾಲಾ ಶಿಕ್ಷಣ, ಪದವಿಪೂರ್ವ ಶಿಕ್ಷಣ, ಪದವಿ ಶಿಕ್ಷಣ, ಆರೋಗ್ಯವಿಜ್ಞಾನ ಶಿಕ್ಷಣ, ವೈದ್ಯಕೀಯ ಶಿಕ್ಷಣ ಇನ್ನೂ ಮುಂತಾದ ಗುಣಮಟ್ಟದ ಶೈಕ್ಷಣಿಕ ಸೇವೆಗಳನ್ನು ನೀಡುತ್ತಿದ್ದು, ಈವರೆಗೂ ಲಕ್ಷಾಂತರವಿದ್ಯಾರ್ಥಿಗಳ ಪಾಲಿನ ಆಶಾದೀಪವಾಗಿ ಪ್ರಜ್ವಲಿಸಿದೆ ಎಂದು ತಿಳಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ.ಹೆಚ್., ಅಧ್ಯಕ್ಷರಾದ ಶ್ರೀಮತಿ ಎಂ.ಸಿ.ಯಶಸ್ವಿನಿ, ಡೀನ್ರಾದ ಡಾ.ಬಿ.ಸಿ.ಅನಂತರಾಮು, ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ,ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿರುವರು.
Views: 14