ಚಿತ್ರದುರ್ಗ ಸ್ವದೇಶಿ ಮೇಳದಲ್ಲಿ ಆಯುರ್ವೇದ ಜಾಗೃತಿ: ಆಯುಷ್ ಇಲಾಖೆ ಆಯೋಜಿಸಿದ ಉಚಿತ ಶಿಬಿರ.

ಚಿತ್ರದುರ್ಗ ನ. 14

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಮೂರನೇ ದಿನವಾದ ಶುಕ್ರವಾರ ಜಿಲ್ಲಾ ಆಯುಷ್ ಇಲಾಖೆ, ಚಿತ್ರದುರ್ಗವತಿಯಿಂದ ಉಚಿತ ಆಯುಷ್ ಚಿಕಿತ್ಸಾ  ಶಿಬಿರವನ್ನು ಹಮ್ಮಿಕೊಳ್ಳಲಾಯಿತು.


ವೇದಿಕೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಚಂದ್ರಕಾಂತ್ ನಾಗಸಮುದ್ರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. 
ಕಾರ್ಯಕ್ರಮದಲ್ಲಿ ಶ್ರೀಮತಿ  ಶ್ಯಾಮಲ ಶಿವಪ್ರಕಾಶ್ ಇವರು ಸ್ವಾಗತ ಭಾಷಣವನ್ನು ಮಾಡುತ್ತಾ ಪುರಾತನ ಕಾಲದಿಂದಲೂ ನಮ್ಮ ಪೂರ್ವಜನರು ಆಯುರ್ವೇದವನ್ನು ಬಳಸಿ, ಪೋಷಿಸಿ ಮುಂದೆವರಿಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. 


ಮತ್ತೋರ್ವ ಅತಿಥಿಗಳಾದ ಡಾ. ಶಾಂತಲಾ ವೈದ್ಯಾಧಿಕಾರಿಗಳು ಇವರು ಆಯುರ್ವೇದವನ್ನು ನಿತ್ಯ ಬಳಕೆಯಲ್ಲಿ ಅಳವಡಿಸಿಕೊಳ್ಳುವ ಕುರಿತು ತಿಳಿಸಿದರು. 


ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಶ್ರೀಪತಿ, ಪ್ರಾಂಶುಪಾಲರು. ಶ್ರೀ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಕಾಲೇಜು ಮಲ್ಲಾಡಿಹಳ್ಳಿ, ಇವರು ಆಯುರ್ವೇದದ ಇತಿಹಾಸದಲ್ಲಿ ದಿನಚರ್ಯ, ಋತುಚರಿಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತ ಸಲಹೆಯನ್ನು ನೀಡಿ ಮತ್ತು ಕಾರ್ಯಕ್ರಮದಲ್ಲಿ ಆಯುರ್ವೇದವನ್ನು ಬಳಸುವ ಕುರಿತು ಪ್ರಸ್ತಾಪಿಸಿದರು. 


ಕಾರ್ಯಕ್ರಮದಲ್ಲಿ ಡಾ. ರಾಜೇಶ್ವರಿ, ಡಾ. ಉದಯ್ ಭಾಸ್ಕರ್, ಡಾ ರಘುವೀರ್, ಡಾ. ಪ್ರಶಾಂತ್, ಡಾ. ರೇಷ್ಮಾ, ಡಾ. ಸಚಿವ ರೆಡ್ಡಿ ಹಾಗೂ ಸಿಬ್ಬಂದಿಯವರು ಶಿಬಿರದಲ್ಲಿ ಉಪಸ್ಥಿತರಿದ್ದರು.

Views: 38

Leave a Reply

Your email address will not be published. Required fields are marked *