ಬಿಹಾರ ಜಯ: ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ.

ಚಿತ್ರದುರ್ಗ ನ. 14

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೃತ್ರಿ ಪಕ್ಷ ವಿಜಯ ಸಾಧಿಸಿದ್ದ ಹಿನ್ನಲೆಯಲ್ಲಿ ಚಿತ್ರದುರ್ಗ ಬಿಜೆಪಿ ಪಕ್ಷದವತಿಯಿಂದ ನಗರದ ಜಿಲ್ಲಾದಿಕಾರಿಗಳ ಕಚೇರಿಯ ವೃತ್ತದಲ್ಲಿ ವಿಜಯೋತ್ಸವನ್ನು ಆಚರಣೆ ಮಾಡಲಾಯಿತು, ಇಲ್ಲಿ ಪಟಾಕಿಯನ್ನು ಸಿಡಿಸಿ ಸಿಹಿಯನ್ನು ಹಂಚುವುದರ ಮೂಲಕ ಬಿಜೆಪಿ ಪಕ್ಷದ ವಿಜಯೋತ್ಸವನ್ನು ಆಚರಣೆ ಮಾಡಿದರು. 


ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ ಕಾಂಗ್ರೆಸ್ ಪಕ್ಷದವರ ಅಪಪ್ರಚಾರ ವೊಟ್‍ಚೂರಿ ಯಂತಹ ಸುಳ್ಳು ಸುದ್ದಿಗಳನ್ನು ಬಿಹಾರದ ಜನತೆ ಕಿವಿಗೊಡಲಿಲ್ಲ  ಕಾಂಗ್ರೆಸ್‍ನವರ ಮುಸ್ಲಿಂ ತೃಷ್ಟೀಕರಣ ನೀತಿಯಿಂದ ಅಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎರಡು ಅಂಕಿಯನ್ನು ಸಹಾ ದಾಟಿಲ್ಲ, ಹೀನಾಯವಾದ ಸೋಲನ್ನು ಅನುಭವಿಸಿದೆ, ದೇಶದ ಜನ ಕಾಂಗ್ರೆಸ್‍ನ್ನು ತಿರಸ್ಕಾರ ಮಾಡಿದ್ದಾರೆ, ಇದು ಬಿಹಾರದಿಂದ ಪ್ರಾರಂಭವಾಗಿದೆ ಅಲ್ಲಿ ಕಾಂಗ್ರೆಸ್ ನ್ನು ಸಂಪೂರ್ಣವಾಗಿ ಧೂಳಿಪಟ ಮಾಡಿದ್ದಾರೆ ಕಾಂಗ್ರೆಸ್ ಮುಂದಿನ ದಿನದಲ್ಲಿ ರಾಜಕಾರಣದಿಂದ ಮೂಲೆ ಗುಂಪಾಗಲಿದೆ ಬಿಹಾರದ ಜನತೆ ಪ್ರಭುದ್ದರಾಗಿದ್ದಾರೆ ಜಿಲ್ಲೆಯ ಜನತೆ ಪರವಾಗಿ ಅಭಿನಂದಿಸುತ್ತೆನೆ ಎಂದು ಹೇಳಿದರು 


ಬಿಜೆಪಿಯ ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿದರು


ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ಮುಖಂಡರಾದ ಅನಿತ್ ಕುಮಾರ್, ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್, ಮಲ್ಲಿಕಾರ್ಜನ್, ಬಸಮ್ಮ ರೇಖಾ, ಶಿವಲೀಲಾ, ಲಿಂಗರಾಜು ಶೀಲ, ಶೈಲೇಶ್ ಕುಮಾರ್, ವಿರೂಪಾಕ್ಷ ಯಾದವ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ನಗರಾಧ್ಯಕ್ಷ ಲೋಕೇಶ್, ಶಂಭು ಸೋಮೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 3

Leave a Reply

Your email address will not be published. Required fields are marked *