ಚಿತ್ರದುರ್ಗ ನ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಹಿಂದಿನ ಕಾಲದಲ್ಲಿ ಮನೆಗ ಬೇಕಾದ ಅಗತ್ಯವಾದ ತರಕಾರಿಗಳನ್ನು ಮನೆಯ ಕೈತೋಟದಲ್ಲಿಯೇ ಬೆಳೆಯುವುದರ ಮೂಲಕ ಮನೆಯವರ ಆರೋಗ್ಯವನ್ನು ಕಾಪಾಡುತ್ತಿದ್ದರು, ಆದರೆ ಇಂದಿನ ದಿನಮಾನದಲ್ಲಿ ಎಲ್ಲವನ್ನು ಮಾರುಕಟ್ಟೆಯಿಂದ ಖರೀದಿ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಮಾಡಿಕೊಳ್ಳುತ್ತಿದ್ದರು ಎಂದು ದಾವಣಗೆರೆಯ ಪರಿವರ್ತನ ವೇದಿಕೆಯ ಡಾ|| ಶಾಂತ ಭಟ್ ವಿಷಾಧಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಕಳೆದ 12 ರಿಂದ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದ ನಾಲ್ಕನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ ತಾರಸಿ ತೋಟ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮವಾದ ಪರಿಸರಕ್ಕಾಗಿ ಜನರ ಮನಸ್ಸ್‍ನ್ನು ಪರಿಸರದ ಕಡೆಗೆ ತಿರುಗಿಸುವ ಕಾರ್ಯವನ್ನು ಇಂದಿನ ದಿನದಲ್ಲಿ ಮಾಡಬೇಕಿದೆ. ಮಾನವ ಇಂದಿನ ದಿನಮಾನದಲ್ಲಿ ಸೋಮಾರಿಯಾಗಿದ್ದಾನೆ ತನ್ನಲ್ಲಿನ ಹಣದಿಂದ ಕೊಳ್ಳುಬಾಕುತನವನ್ನು ರೂಢಿಸಿಕೊಂಡಿದ್ದಾನೆ, ಹಿಂದಿನ ಕಾಲದವರು ತಮಗೆ ಅಗತ್ಯವಾದ ವಸ್ತುಗಳನ್ನು ಮಾತ್ರ ಮಿತವಾಗಿ ಬಳಕೆ ಮಾಡುತ್ತಿದ್ದರು ಆದರೆ ಇಂದಿನ ಕಾಲದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.
ನಮ್ಮ ತಂದೆ-ತಾಯಿ ಅಜ್ಜ,ತಾತನ ಕಾಲದಲ್ಲಿ ನಮ್ಮನ್ನು ಹೊಲ ತೋಟಗಳಿಗೆ ಕರೆದುಕೊಂಡು ಹೋಗುವುದರ ಮೂಲಕ ತಮ್ಮ ಪರಿಸರವನ್ನು ಪರಿಚಯ ಮಾಡಿ ಕೊಡುತ್ತಿದ್ದರು ಆದರೆ ಇಂದಿನ ಮಕ್ಕಳಿಗೆ ಹಾಲು ಎಲ್ಲಿದ್ದ ಬರುತ್ತದೆ ಎಂದರೆ ಭೂತ್‍ನಿಂದ ಅನ್ನುತ್ತಾರೆ ಅದೇ ರೀತಿ ತರಕಾರಿಗಳು ಎಲ್ಲಿಂದ ಬರುತ್ತವೆ ಎಂದರೆ ಮಾರುಕಟ್ಟೆಯಿಂದ ಎನ್ನುತ್ತಾರೆ ಎಂದರು. ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಲಿ ಎಂದು ದಿನ ಮಕ್ಕಳನ್ನು ಓದು ಓದು ಎನ್ನುತ್ತಾರೆ ಅಟವನ್ನು ಆಡಲು ಸಹಾ ಬಿಡುವುದಿಲ್ಲ, ಅವರ ಮುಂದಿನ ಜಿವನಕ್ಕೆ ಅವಶ್ಯಕವಾದ ತಯಾರಿಯನ್ನು ಸಹಾ ಮಾಡಲು ಬಿಡುತ್ತಿಲ್ಲ, ಇಂದಿನ ದಿನಮಾನದಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಬುದ್ದಿಯನ್ನು ಉಪಯೋಗ ಮಾಡುತ್ತಿಲ್ಲ ಇದರ ಬದಲು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಮುಂದಿನ ದಿನದಲ್ಲಿ ನಿಮ್ಮ ಬುದ್ದಿಗೆ ಮಂಕು ಹಿಡಿಯುತ್ತದೆ ಎಂದ ಅವರು, ಮನೆಯಲ್ಲಿ ಕೈತೋಟವನ್ನು ಮಾಡುವುದರ ಮೂಲಕ ಶುದ್ದವಾದ ತರಕಾರಿಗಳನ್ನು ಬೆಳೆದು ಮನೆಯಲ್ಲಿ ಉಪಯೋಗವನ್ನು ಮಾಡುವುದರ ಮೂಲಕ ಮನೆಯವರ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ಡಾ|| ಶಾಂತ ಭಟ್ ತಿಳಿಸಿದರು.
ತಾರಸಿ ತೋಟ ತರಬೇತಿಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ನಾವು ಚಿಕ್ಕವರಾಗಿದ್ದಾಗ ನಮ್ಮ ಮನೆಯ ಹಿಂದೆ ತೋಟವನ್ನು ಮಾಡುತ್ತಿದ್ದರು ಅದರಲ್ಲಿ ಮನಗೆ ಬೇಕಾದ ಅಗತ್ಯವಾದ ತರಕಾರಿಗಳನ್ನು ಬೆಳೆಯುವುದರ ಮೂಲಕ ಮನೆಗೆ ಶುದ್ದವಾರ ತರಕಾರಿಗಳನ್ನು ಉಪಯೋಗ ಮಾಡುತ್ತಿದ್ದರು, ಆದರೆ ಇಂದಿನ ದಿನದಲ್ಲಿ ಯಾವ ಮನೆಯಲ್ಲಿಯೂ ಸಹಾ ಕೈತೋಟ ಎನ್ನುವುದು ಇಲ್ಲವಾಗಿದೆ, ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಜನತೆ ತಮ್ಮ ಮನೆಗೆ ಅಗತ್ಯವಾಗಿ ಬೇಕಾದ ತರಕಾರಿಗಳನ್ನು ತಾವೇ ಸ್ವಂತಹ ಬೆಳೆಯುವುದರ ಮೂಲಕ ಉಪಯೋಗವನ್ನು ಮಾಡುತ್ತಿದ್ದಾರೆ, ನಗರಗಳಲ್ಲಿ ನಮಗೆ ಅಗತ್ಯವಾಗಿ ಬೇಕಾದ ವಸ್ತುಗಳು ನಮ್ಮ ಮನೆ ಬಾಗಿಲಿಗೆ ಕೆಲವೇ ನಿಮಿಷಗಳಲ್ಲಿ ಬರುವ ಈ ಕಾಲದಲ್ಲಿ ತರಕಾರಿಗಳು ಯಾವ ರೀತಿಯಲ್ಲಿ ಬೆಳೆಯುತ್ತಾರೆ ಎಂದು ಮಕ್ಕಳಿಗೆ ತಿಳಿದಿಲ್ಲ ಎಂದರು.
ಉತ್ತಮವಾದ ಬೆಳೆ ಬರಲಿ ಎಂಬ ದೃಷ್ಟಿಯಿಂದ ರಾಸಾಯಿಕ ವಸ್ತುಗಳನ್ನು ಬೆಳೆಗಳಿಗೆ ನೀಡುತ್ತಿದ್ದಾರೆ ಇದರಿಂದ ಬೆಳೆಗಳು ವಿಷವಾಗುತ್ತಿವೆ ಇದನ್ನು ಸೇವಿಸುವ ನಾವುಗಳು ಸಹಾ ವಿಷದ ದೇಹವಾಗುತ್ತಾ ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ, ಮನೆಯ ತಾರಸಿಯಲ್ಲಿ ಕೈತೋಟವನ್ನು ಮಾಡುವುದರ ಮೂಲಕ ಮನೆಗೆ ಅಗತ್ಯವಾದ ತರಕಾರಿ, ಸೊಪ್ಪುಗಳನ್ನು ಬೆಳೆಯುವುದರ ಮೂಲಕ ಮನೆಯ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ನವೀನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಚಾಲಕರಾದ ಸೌಭಾಗ್ಯ ಬಸವರಾಜನ್, ರೀನಾ ವೀರಭದ್ರಪ್ಪ, ಶ್ಯಾಮಲ ಶಿವಪ್ರಕಾಶ್, ನಾಗರಾಜ್ ಬೇದ್ರೇ ಭಾಗವಹಿಸಿದ್ದರು.
Views: 16