ಕಾಂಗ್ರೆಸ್ ಮುಕ್ತ ಭಾರತಕ್ಕೆ ಬಿಹಾರ ಫಲಿತಾಂಶ ಸಾಕ್ಷಿ;ಬಿಹಾರದಲ್ಲಿ ಮತ್ತೇ ಡಬಲ್ ಎಂಜಿನ್ ಸರ್ಕಾರ : ಹನುಮಂತೇಗೌಡ.


ಚಿತ್ರದುರ್ಗ ನ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಬಿಹಾರ ಚುನಾವಣೆಯಲ್ಲಿ ಆ ರಾಜ್ಯದ ಜನತೆ ಎನ್,ಡಿ.ಎ ಪ್ರಧಾನ ಮೋದಿ ಹಾಗೂ ನಿತೀಶ್ ಕುಮಾರ್ ನೇತೃತ್ವದ ಎನ.ಡಿ.ಎ. ಒಕ್ಕೂಟಕ್ಕೆ ಬಾರಿ ಬಹುಮತ ನೀಡಿ ಗೆಲ್ಲಿಸಿದ್ದು, ಮತದಾರರ ಆರ್ಶಿವಾದ ಎಂದು ಬಿಜೆಪಿ ಮುಖಂಡರಾದ ಹನುಮಂತೇಗೌಡ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಬಿಹಾರದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೂರ ಹೊಮ್ಮಿದ್ದು ಸಂತಸದ ವಿಷಯವಾಗಿದೆ, ಮಹಾ ಘಟಭಂದನ್ ಒಕ್ಕೂಟಕ್ಕೆ ಬಿಹಾರದ ಜನ ತಕ್ಕ ಪಾಠ ಮಾಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಬಿಹಾರ ಚುನಾವಣೆ ಫಲಿತಾಂಶ ಮುನ್ನುಡಿಯನ್ನು ಬರೆದಿದೆ, ಈ ಚುನಾವಣೆಯಲ್ಲಿ ಎರಡಂಕಿಯನ್ನು ಕಾಣದ ಕಾಂಗ್ರೆಸ್ ಹಾಗೂ ಆರ್‍ಜೆಡಿ. ಜಂಗಲ್‍ರಾಜ್ ಆಡಳಿತವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿ ಚುನಾವಣೆಯಲ್ಲಿ ಆಯೋಗವನ್ನು ದೂರುವ ಕಾಂಗ್ರೆಸ್ ಮುಖಂಡರು ಈಗಲಾದರೂ ಬುದ್ದಿಕಲಿತು ಆತ್ಮಾವಲೋಕನವನ್ನು ಮಾಡಿಕೊಳ್ಳಲಿ ಬಿಹಾರ ಚುನಾವಣೆ ಪ್ರಜಾಪ್ರಭುತ್ವದ ಗೆಲುವಾಗಿದೆ ಎನ್.ಡಿ.ಎ.ಗೆ ಜನಾದೇಶ ನೀಡಿದ್ದಾರೆ ಎಂದು ಹನುಮಂತೇಗೌಡ ಹೇಳಿದ್ದಾರೆ.

Views: 13

Leave a Reply

Your email address will not be published. Required fields are marked *