ಚಿತ್ರದುರ್ಗ ನ. 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದಲ್ಲಿ ಸಾಕು ಪ್ರಾಣಿಗಳ ಪಾಲನೆ, ರಕ್ಷಣೆ, ಅವುಗಳ ಕ್ಷೇಮಾಭೀವೃದ್ದಿಗಾಗಿ ಚಿತ್ರದುರ್ಗ ಪೋರ್ಟ್ರ್ ಅನಿಮಲ್ ರೆಸ್ಕ್ಯೂ ಸರ್ವಿಸ್ ಸೊಸೈಟಿ ಅಸ್ಥಿತ್ವಕ್ಕೆ ಬಂದಿದೆ. ಇದರ ಅಧ್ಯಕ್ಷರಾಗಿ ಗೋಪಾಲಸ್ವಾಮಿ ನಾಯಕ, ಉಪಾಧ್ಯಕ್ಷರಾಗಿ ಮಲ್ಲಪ್ಪ ಟಿ.ಹೆಚ್. ಪಿ.ವೆಂಕಟರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಅಭೀಷೇಕ್ ತುರೇಬೈಲು ಗೌಡರ, ಸಹ ಕಾರ್ಯದರ್ಶಿಯಾಗಿ ಸೋಮಶೇಖರ್ ಕೆ, ಖಂಜಾಚಿಯಾಗಿ ಡಾ,ಕೃಷ್ಣಪ್ಪ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ನಂದಿನಿ ಕೆ. ಶ್ರೀಮತಿ ಅನುಷ ಎಂ.ಬಿ ಹಾಗೂ ವಿನಾಯಕ ಪ್ರಸನ್ನ ಕುಮಾರ್ ನೇಮಕವಾಗಿದ್ದಾರೆ.
ಚಿತ್ರದುರ್ಗ ಪೋರ್ಟ್ ರೆಸ್ಕ್ಯೂ ಸರ್ವಿಸ್ ಸೊಸೈಟಿಯವತಿಯಿಂದ ಪ್ರಾಣಿಗಳ ಪಾಲಕ ಹಾಗೂ ರಕ್ಷಣ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಹಾಗೂ ಪ್ರಾಣಿಗಳ ಕ್ಷೇಮಾಭಿವೃದ್ಧಿಗೆ ಪ್ರಯತ್ನಿಸುವುದು. ಪ್ರಾಣಿಗಳ ಕಲ್ಯಾಣ, ಜೋಷಣೆ ಮತ್ತು ಅವುಗಳ ರಕ್ಷಣಾಕ್ರಮಗಳ ಬಗ್ಗೆ ಕಾನೂನು ಅರಿವು ಮತ್ತು ನೆರವು ಕಾರ್ಯವನ್ನು ಕೈಗೊಳ್ಳುವುದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯ ಪ್ರಾಣಿಗಳ ರಕ್ಷಣೆ ಮತ್ತು ಪಾಲನೆ ಹಾಗೂ ಅಭಿವೃದ್ಧಿಗೆ ಪ್ರಯತ್ನಿಸುವುದು. ಪ್ರಾಣಿಗಳ ಕಲ್ಯಾಣ ರಕ್ಷಣಾ ಕ್ರಮಗಳ ಸರ್ಕಾರದ ಯೋಜನೆಗಳ ಬಗ್ಗೆ ಜನ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು ಪ್ರಾಣಿಗಳ ಹಕ್ಕುಗಳ ರಕ್ಷಣೆ ಪ್ರಾಣಿಗಳ ಸ್ವಭಾವ ಆರೈಕೆ, ಉಪಯೋಗಗಳು, ಮೂಲಭೂತ ಹಕ್ಕುಗಳು ಮತ್ತು ರಕ್ಷಣೆ ಕ್ರಮಗಳ ಬಗ್ಗೆ ತಾಂತ್ರಿಕ ತರಬೇತಿ, ಸಂಕಿರಣ, ಜಾಗೃತಿ ಶಿಬಿರ, ಮನಃಶ್ವೇತನ ಶಿಬಿರ ಏರ್ಪಡಿಸುವುದು ಮತ್ತು ಆಸರೆ ಗುಂಪು, ಶಾಲಾ/ಕಾಲೇಜು / ಸಂಸ್ಥೆ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ನಿರುದ್ಯೋಗಿ ಯುವಕ/ಯುವತಿಯರಿಗೆ ಸಾಕು ಪ್ರಾಣಿಗಳ ಪಾಲನೆ ಮತ್ತು ಪೋಷಣೆ ಮಾಡಿ ಆದಾಯಗಳಿಸುವ ಮೂಲಕ ಸ್ವಯಂ ಉದ್ಯೋಗ ಮಾಡುವ ಸಲುವಾಗಿ ತರಬೇತಿ ನೀಡುವುದು. ಈ ಸಂಬಂಧ ಸೂಕ್ಷ್ಮ ಸ್ಥಳಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸ ಲಾಗುವುದು.
ಸಂಘದವತಿಯಿಂದ ಪಶು ಪ್ರಾಣಿಗಳ ಆರೋಗ್ಯ ರಕ್ಷಣೆಗಾಗಿ ಉಚಿತ ಜಾನುವಾರು ಆರೋಗ್ಯ ಶಿಬಿರ ಉಚಿತ ಲಸಿಕಾ ಕಾರ್ಯಕ್ರಮ, ಶಸ್ತ್ರ ಚಿಕಿತ್ಸಾ ಕಾರ್ಯಕ್ರಮ ಇತರೆ ಚಿಕಿತ್ಸಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಬಿಡಾಡಿ ದನ, ಪರಿತ್ಯಕ್ತ ರಾಸುಗಳ ಪಾಲನೆ ಮತ್ತು ಪೋಷಣೆಗಾಗಿ ಗೋ ಶಾಲೆಗಳನ್ನು ಸ್ಥಾಪನೆ, ಬೀದಿ ನಾಯಿಗಳು / ವಾರಸುದಾರರು / ಪರಿತ್ಯೆಕ ನಾಯಿಗಳ ಪಾಲನೆ ಮತ್ತು ಪೋಷಣೆಗಾಗಿ. ನಾಯಿ ಆಶ್ರಯ ತಾಣ, ಬೋರ್ಡಿಂಗ್ ಕೇಂದ್ರಗಳ ಸ್ಥಾಪನೆ, ಜಾನುವಾರುಗಳಿಂದ ಮನುಷ್ಯರಿಗೆ ಹರಡುವ ಪ್ರಾಣಿ ಜನ್ಯ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ, ಮಾಹಿತಿ/ತರಬೇತಿ/ಜಾಗೃತಿ ಶಿಕ್ಷಣ ನೀಡುವಂತಹ ಕಾರ್ಯಕ್ರಮ ಸಾಕು ನಾಯಿ ಮರಿಗಳಿಗೆ ನುರಿತ ತರಬೇತಿದಾರರಿಂದ ತರಬೇತಿ ನೀಡುವುದು. ಈ ಸಂಬಂಧ ಆಸಕ್ತ ಯುವಕ/ಯುವತಿಯರಿಗೆ ತರಬೇತುದಾರರನ್ನಾಗಿ ರೂಪಿಸಲು ಆಯ್ಕೆ ಮಾಡಿ ತರಬೇತಿ ಕೊಡಿಸುವುದು. ಪ್ರಾಣಿ ಜನನ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಲು ಸ್ಥಳಿಯ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಭಾಗವಹಿಸಲಾಗುವುದು.
Views: 24