ಬೆಂಡೆಕಾಯಿ ಪಲ್ಯವನ್ನು ಕೆಲವರು ರುಚಿಕರವಾಗಿ, ಜಿಗುಟು ಇಲ್ಲದಂತೆ ಮಾಡುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಪಲ್ಯ ಜಿಡ್ಡಾಗಿಯೇ ಇರುತ್ತದೆ. ಸರಿಯಾದ ವಿಧಾನಗಳನ್ನು ಅನುಸರಿಸಿದರೆ ಬೆಂಡೆಕಾಯಿ ಪಲ್ಯ ಯಾವಾಗಲೂ ರುಚಿಕರವಾಗಿ, ಮೃದುವಾಗಿ ಮತ್ತು ಜಿಗುಟು ಇಲ್ಲದಂತೆ ಸಿದ್ಧವಾಗುತ್ತದೆ.
ಬೆಂಡೆಕಾಯಿಯಲ್ಲಿ ಇರುವ ಫೈಬರ್, ವಿಟಮಿನ್ A, C, K ಮತ್ತು ಮೆಗ್ನೀಶಿಯಂ ಪೋಷಕಾಂಶಗಳು ದೇಹಕ್ಕೆ ಹಲವಾರು ರೀತಿಯಲ್ಲಿ ಲಾಭಕರ. ವಿಶೇಷವಾಗಿ ಸಕ್ಕರೆ ಕಾಯಿಲೆ ನಿಯಂತ್ರಣ, ಜೀರ್ಣಕ್ರಮ ಸುಧಾರಣೆ ಮತ್ತು ಮೂಳೆಗಳ ಬಲವರ್ಧನೆಗೆ ಇದು ಸಹಕಾರಿ.
ಬೆಂಡೆಕಾಯಿ ಜಿಗುಟಾಗದಂತೆ ಮಾಡುವ ಪ್ರಮುಖ ಸಲಹೆಗಳು
- ತೊಳೆಯುವ ವಿಧಾನ
ಬೆಂಡೆಕಾಯಿಗಳನ್ನು ಕತ್ತರಿಸುವ ಮೊದಲು ಚೆನ್ನಾಗಿ ತೊಳೆಯಿರಿ, ಆದರೆ ತಕ್ಷಣ ಕತ್ತರಿಸಬೇಡಿ. ಸಂಪೂರ್ಣವಾಗಿ ಒಣಗಿದ ನಂತರವೇ ಕತ್ತರಿಸಿದರೆ ಲೋಳೆ ಬರುವ ಪ್ರಮಾಣ ಕಡಿಮೆ. ಟಿಷ್ಯೂ ಪೇಪರ್‌ನಿಂದ ಒರೆಸಿದರೆ ತೇವಾಂಶ ಶೀಲ ಶೇಕಡಾ 100 ಕಡಿಮೆಯಾಗುತ್ತದೆ. - ಜಿಡ್ಡಾಗದ ಪಲ್ಯಕ್ಕೆ ಮೊಸರು ಬಳಕೆ
ಹುರಿಯುವಾಗ ಒಂದು ಚಮಚ ಮೊಸರು ಸೇರಿಸಿದರೆ ತುಂಡುಗಳು ಅಂಟಿಕೊಳ್ಳುವುದಿಲ್ಲ, ಜೊತೆಗೆ ಪಲ್ಯಕ್ಕೆ ವಿಶೇಷ ರುಚಿ ಬರುತ್ತದೆ. ಬದಲು ನಿಂಬೆರಸ ಅಥವಾ ಹುಣಸೆ ರಸವನ್ನು ಕೂಡ ಬಳಸಿ ಜಿಗುಟು ಕಡಿಮೆ ಮಾಡಬಹುದು. - ಕಡಲೆ ಹಿಟ್ಟು — ಸೀಕ್ರೆಟ್ ಇಂಗ್ರಿಡಿಯಂಟ್
ಹುರಿಯುವಾಗಲೇ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿದರೆ ಪಲ್ಯ ಜಿಡ್ಡಾಗುವುದಿಲ್ಲ. ಇದರಿಂದ ರುಚಿ ಹೆಚ್ಚುತ್ತದೆ ಮತ್ತು ಪಲ್ಯ ಒಣವಾಗಿರುತ್ತದೆ. - ಸರಿಯಾದ ಹುರಿತ ತಪ್ಪದೇ
ಬೆಂಡೆಕಾಯಿಗಳನ್ನು ಚೆನ್ನಾಗಿ 8–10 ನಿಮಿಷ ಹುರಿಯಬೇಕು. ಹುರಿಯುವಾಗ ಉಪ್ಪನ್ನು ಹಾಕಬೇಡಿ. ಉಪ್ಪು ಬೇಗ ತೇವ ಕೊಡುತ್ತದೆ ಮತ್ತು ಜಿಗುಟು ಹೆಚ್ಚಿಸುತ್ತದೆ. ನಂತರ ಬೇರೆ ಪದಾರ್ಥಗಳನ್ನು ಸೇರಿಸಿ.
ಈ ಸಣ್ಣ ಸಲಹೆಗಳು ನಿಮ್ಮ ಬೆಂಡೆಕಾಯಿ ಪಲ್ಯವನ್ನು ಹೋಟೆಲ್‌ಸ್ಟೈಲ್, ರುಚಿಕರ ಮತ್ತು ಜಿಗುಟಿಲ್ಲದಂತೆ ಮಾಡುತ್ತವೆ.
Views: 16