ವರದಿ ಮತ್ತು ಫೋಟೋ ಕೃಪೆ, ಕೆ. ಓ. ನಾಗೇಶ್
ಚಳ್ಳಕೆರೆ, ಡಿ.22:
ನಗರದ ಪ್ರತಿಷ್ಠಿತ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಳ್ಳಕೆರೆಯಲ್ಲಿ ದಿನಾಂಕ 22-12-2025ರಂದು ರಾಷ್ಟ್ರೀಯ ಗಣಿತ ದಿನಾಚರಣೆ (National Mathematics Day – 2025) ಅನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗಣಿತ ಮಾದರಿಗಳ ಪ್ರದರ್ಶನ, ವಿಜ್ಞಾನ ಮಾದರಿಗಳು, ಗಣಿತದ ಮ್ಯಾಜಿಕ್‌ಗಳು, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಮಿಂಚಿನ ಮಗ್ಗಿ ಸ್ಪರ್ಧೆಗಳು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಜ್ಞಾನವನ್ನು ಪ್ರತಿಬಿಂಬಿಸುವಂತೆ ನಡೆದವು. ಮಕ್ಕಳ ಚಟುವಟಿಕೆಗಳು ಸಾರ್ವಜನಿಕರ ವಿಶೇಷ ಗಮನ ಸೆಳೆದವು.

ನಗರದ ರೋಟರಿ ಕ್ಲಬ್ ಸಹಯೋಗದೊಂದಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರಗಳು ಹಾಗೂ ವಿಜೇತರಿಗೆ ಆಕರ್ಷಕ ಬಹುಮಾನಗಳು ವಿತರಿಸಲಾಯಿತು.
ಗಣಿತ ದಿನಾಚರಣೆಯ ಪ್ರದರ್ಶನಕ್ಕೆ ಚಿತ್ರದುರ್ಗ ಡಯಟ್‌ನ ಹಿರಿಯ ಉಪನ್ಯಾಸಕರಾದ ನಾಗಭೂಷಣ್, ತಿಪ್ಪೇಸ್ವಾಮಿ, ಶಿವಲೀಲಾ, ಬಿ.ಆರ್.ಸಿ. ಮಂಜುಬಾಬು, ಬಿ.ಆರ್.ಪಿ. ತಿಪ್ಪೇಸ್ವಾಮಿ, ಇ.ಸಿ.ಓ. ದೇವೇಂದ್ರಪ್ಪ, ಸಿ.ಆರ್.ಪಿ.ಗಳಾದ ನಾಗರಾಜ್, ಮಹಂತೇಶ್, ರಮೇಶ್, ಹಾಗೂ ಶಿಕ್ಷಕರಾದ ಶ್ರೀಧರ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಪ್ರದರ್ಶನಕ್ಕೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ, ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭೇಟಿ ನೀಡಿ ಕಾರ್ಯಕ್ರಮವನ್ನು ವೀಕ್ಷಿಸಿದರು.
ಕಾರ್ಯಕ್ರಮದ ಪ್ರಮುಖ ಕ್ಷಣಗಳು
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ರಾಧಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ.ಎಂ. ಪ್ರಕಾಶ್, ಕಾರ್ಯದರ್ಶಿ ಜಯಪ್ರಕಾಶ್, ನಿರ್ದೇಶಕರು ಹಾಗೂ ವೈದ್ಯರಾದ ಡಾ. ಜಯಕುಮಾರ್, ಮಾಜಿ ಅಧ್ಯಕ್ಷರಾದ ಪ್ರಹ್ಲಾದ್ ಮತ್ತು ಕೆ. ನಾಗೇಶ್, ಸಿ.ಆರ್.ಪಿ. ನಾಗರಾಜ್, KMSPP ಯ ಕರಿಬಸಮ್ಮ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಬಿ. ರೇಖಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ 7ನೇ ತರಗತಿ ವಿದ್ಯಾರ್ಥಿಗಳು, ಶಿಕ್ಷಕರಾದ ಕೆ. ಓ. ನಾಗೇಶ್ ರಚಿಸಿದ ಗಣಿತ ಗೀತೆಯನ್ನು ಹಾಡುವ ಮೂಲಕ ಭವ್ಯ ಚಾಲನೆ ನೀಡಿದರು.
ಮುಖ್ಯ ಶಿಕ್ಷಕರಾದ ವೈ. ನಾಗರಾಜ್ ಸ್ವಾಗತ ಭಾಷಣ ಮಾಡಿದರು.
ಗಣಿತ ಶಿಕ್ಷಕರಾದ ಕೆ. ಓ. ನಾಗೇಶ್ ಅವರು ರಾಷ್ಟ್ರೀಯ ಗಣಿತ ದಿನದ ಮಹತ್ವ ಮತ್ತು ಶಾಲೆಯಲ್ಲಿನ ಗಣಿತ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಶಿಕ್ಷಕರಾದ ಸಿ. ಸಣ್ಣಪಾಪಣ್ಣ ವಂದನಾರ್ಪಣೆ ಸಲ್ಲಿಸಿದರು ಹಾಗೂ ಎಚ್. ನಾಗೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.
ಕೆ.ಆರ್. ಪುಟ್ಟಸ್ವಾಮಿ, ಡಿ. ತಿಪ್ಪೇಸ್ವಾಮಿ, ಮಂಜುಳ, ಫಾಜಿಲಾ ಕೌಸರ್ ಅವರು ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪೃಥ್ವಿಕುಮಾರ್, ವೇಣುಗೋಪಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
5ನೇ ತರಗತಿ ಮಕ್ಕಳು, ಕೆ. ಓ. ನಾಗೇಶ್ ರವರ ‘ವೃತ್ತ’ ಎಂಬ ಶೀರ್ಷಿಕೆಯ ಗೀತೆಗೆ ನೃತ್ಯ ಪ್ರದರ್ಶಿಸಿ ಎಲ್ಲರ ಮನಸೆಳೆದರು.
Views: 403