ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 25
ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಸಮೀಪದ ಗೊರ್ಲತ್ತು ಕ್ರಾಸ್‍ನಲ್ಲಿ (ರಾಷ್ಟ್ರೀಯ ಹೆದ್ದಾರಿ 48 ರಲ್ಲಿ) ಗುರುವಾರ ಮುಂಜಾನೆ ಖಾಸಗಿ ಸ್ಲೀಪರ್ ಬಸ್ ಟ್ರಕ್‍ಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಲವಾರು ಜನತೆ ಮಸಣ ಸೇರಿದ್ದಾರೆ. ಹಲವರು ಆಸ್ಪತ್ರೆ ಸೇರಿದ್ದಾರೆ. ಗಾಯಾಳುಗಳನ್ನು ನೋಡಲು ಸ್ಥಳೀಯ ಸಂಸದರಾದ ಗೋವಿಂದ ಕಾರಜೋಳ ಅವರು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಉಳಿದವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಗಾಯಗಳ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಗಾಯಾಳುಗಳ ಪರಿಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ತಲೆಗೆ ಪೆಟ್ಟಾಗಿದೆ. ಬ್ರೈನ್‍ಗೆ ಸ್ವಲ್ಪ ಪೆಟ್ಟು ಬಿದ್ದಿದೆ. ನಾವೇ ಟ್ರೀಟ್ಮೆಂಟ್ ಮಾಡ್ತೀವಿ ಅಂತ ಹೇಳಿದ್ದಾರೆ. ಗಾಯಾಳುಗಳನ್ನು ಬೆಂಗಳೂರು ಅಥವಾ ಧಾರವಾಡಕ್ಕೆ ಶಿಫ್ಟ್ ಮಾಡೋಣಾ ಅಂತ ನಾನೇ ಕೇಳಿದೆ. ಬೇಡ ಅವರಿಗೆ ನಾವೇ ಚಿಕಿತ್ಸೆ ನೀಡುತ್ತೇವೆ. ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಹೀಗಾಗಿ ವೈದ್ಯರಿಗೂ ಮನವಿ ಮಾಡಿದ್ದೇನೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿ ಎಂದಿದ್ದೇನೆ.
ನಾನು ಬೆಳಗ್ಗಿನ ಜಾವ ವಿಚಾರ ಗೊತ್ತಾದ ಕೂಡಲೇ ನಮ್ಮ ಐಜಿಪಿ ರವಿಕಾಂತೇಗೌಡರಿಗೆ ಮಾತನಾಡಿದ್ದೇನೆ. 9 ಜನ ಮೃತರ ದೇಹಗಳನ್ನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡುವಂತಹ ಕೆಲಸವನ್ನು ಮಾಡಿದ್ದೀವಿ. ಪೋಸ್ಟ್ ಮಾರ್ಟಮ್ ಕೆಲಸವೂ ಆಗಬೇಕಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದಾರೆ. ಅದಕ್ಕಾಗಿ ನಾನು ಎಲ್ಲಾ ಆಸ್ಪತ್ರೆಗೂ ಹೋಗಿ ನೋಡುತ್ತಾ ಇದ್ದೇನೆ. ಅವರಿಗೆ ಏನು ಸಹಕಾರ ಬೇಕು, ಅನುಕೂಲತೆ ಬೇಕು ಅದೆಲ್ಲದಕ್ಕೂ ಕೂಡ ನಾನು ಸಹಕಾರ ಮಾಡುತ್ತೇನೆ. ಚಾಲಕರು ಬೇಜವಬ್ದಾರಿಯಿಂದ ಓಡಿಸುವಂತದ್ದು, ಟ್ರಾಫಿಕ್ ನಿಯಮಗಳನ್ನ ಮೀರಿ ಚಾಲನೆ ಮಾಡುವಂತದ್ದು ಇದೆಲ್ಲ ದುರಂತಕ್ಕೆ ಕಾರಣವಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.
Views: 34