ಚಿತ್ರದುರ್ಗ ಡಿ. 26
ಕಳೆದ 30 ವರ್ಷಗಳಿಂದ ಆಗ್ನೇಯ ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿಲ್ಲ ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವುವನ್ನು ಸಾಧಿಸಲೆಬೇಕಿದೆ ಇದಕ್ಕೆ ಬೇಕಾದ ಅಗತ್ಯವಾದ ತಯಾರಿಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳಾದ ಮಯೂರ ಜಯಕುಮಾರ್ ಕರೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಮತದಾರರ ಎನ್ರೋಲ್ಮೆಂಟ್ ಬಗ್ಗೆ ಚರ್ಚಿಸಿ ಪೂರ್ವಭಾವಿ ಸಮಾಲೋಚನಾ ಸಭೆ ನಡೆಸಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾರದ ಅಧಿಕಾರಿಗಳು ಈಗಾಗಲೇ ಪದವೀಧರರ ನೊಂದಾಣಿ ಕಾರ್ಯವನ್ನು ಪ್ರಾರಂಭ ಮಾಡಿದೆ ಇದ್ದಲ್ಲದೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪದಾಧಿಕಾರಿಗಳು ಸಹಾ ನೊಂದಾಣಿ ಕಾರ್ಯವನ್ನು ಮಾಡಿದ್ದಾರೆ, ಈಗ ಇಲ್ಲಿ 5 ಜಿಲ್ಲೆಗಳ ಮತದಾರರ ಸಂಖ್ಯೆ ಕಳೆದ ಸಾಲಿಗಿಂತ ಹೆಚ್ಚಾಗಿದೆ ಇದಕ್ಕೆ ಕಾರಣ ವರ್ಷದಿಂದ ವರ್ಷಕ್ಕೆ ಪದವಿಯನ್ನು ಪಡೆದು ಹೊರ ಬರುವವರ ಸಂಖ್ಯೆ ಹೆಚ್ಚಾಗಿದೆ ಇದರಿಂದ ಈ ಕ್ಷೇತ್ರಕ್ಕೆ ಮತದಾರರು ಸಹಾ ಹೆಚ್ಚಾಗಿದ್ದಾರೆ ಎಂದರು.
ಈ ಚುನಾವಣೆಯಲ್ಲಿ ಡಿಸಿಸಿ ಸೇರಿದಂತೆ ಎಲ್ಲಾ ಘಟಕಗಳು ಸೇರಿ ಚುನಾವಣೆಯನ್ನು ಮಾಡಬೇಕಿದೆ, ಈ ಚುನಾವಣೆ ಎಲ್ಲಾ ಚುನಾವಣೆಯಂತೆ ಅಲ್ಲ ಇಲ್ಲಿ ಮತದಾರರು ಬುದ್ದಿವಂತರಾಗಿದ್ದಾರೆ, ಚುನಾವಣೆಯಲ್ಲಿ ಅವರು ಮತವನ್ನು ಚಲಾಯಿಸುವಾಗ ಆಯ್ಕೆ ಮಾಡಿ ಮತವನ್ನು ಚಲಾಯಿಸುತ್ತಾರೆ, ಈ ಹಿನ್ನಲೆಯಲ್ಲಿ ನಮ್ಮ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಯೊಂದು ಮನೆಗೂ ಸಹಾ ಬೇಟಿಯನ್ನು ನೀಡುವುದರ ಮೂಲಕ ಅಲ್ಲಿನ ಪದವೀಧರನ್ನು ಭೇಟಿ ಮಾಡಿ ಮಾತನಾಡಿಸಿ ಅವರಿಂದ ದಾಖಲೆಗಳನ್ನು ತೆಗೆದುಕೊಂಡು ಚುನಾವಣೆ ಶಾಖೆಯಲ್ಲಿ ನೊಂದಾಣಿಯನ್ನು ಮಾಡಿಸುವ ಕಾರ್ಯವನ್ನು ಮಾಡುವುದರ ಮೂಲಕ ಚುನಾವಣೆಯ ಮತದಾನದ ಸಮಯದಲ್ಲಿ ಅವರನ್ನು ಮತದಾನ ಕೇಂದ್ರಕ್ಕೆ ಕರೆ ತಂದು ಮತದಾನವನ್ನು ಮಾಡಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ವಿಧಾನ ಸಭೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇದೆ ಆದರೆ ವಿಧಾನ ಪರಿಷತ್‍ನಲ್ಲಿ ನಮಗೆ ಬಹುಮತ ಇಲ್ಲ, ವಿಧಾನಸಭೆಯಲ್ಲಿ ಏನೇ ಕಾಯ್ದೆ ಮಾಡಿ ಬಹುಮತ ಪಡೆದರು ಸಹಾ ಅದು ಪರಿಷತ್‍ನಲ್ಲಿ ಮಂಡನೆಯಾಗಿ ಪಾಸಾಗಿ ರಾಜ್ಯಪಾಲರ ಸಹಿಗಾಗಿ ಹೋಗಬೇಕಿದೆ ಈ ಹಿನ್ನಲೆಯಲ್ಲಿ ಈ ಚುನಾವಣೆಯಲ್ಲಿ ನಾವು ಗೆಲುವನ್ನು ಸಾಧಿಸಬೇಕಾದ ಅನಿವಾರ್ಯತೆ ಇದೆ, ಇದ್ದಲ್ಲದೆ ಇದೇ ಸಮಯದಲ್ಲಿ ನಡೆಯಲಿರುವ ನೈರುತ್ಯಾ, ಈಶಾನ್ಯ ಹಾಗೂ ವಾಯುವ್ಯ ಕ್ಷೇತ್ರಗಳಲ್ಲಿಯೂ ಸಹಾ ನಮ್ಮ ಪಕ್ಷದ ಗೆಲುವನ್ನು ಸಾಧಿಸಬೇಕಿದೆ ಎಂದು ಅವರು ಎಐಸಿಸಿ ಮತ್ತು ಕೆಪಿಸಿಸಿಗಳು ಈ ಚುನಾವಣೆಯನ್ನು ತೀವ್ರವಾಗಿ ತೆಗೆದುಕೊಂಡಿದ್ದು ಈ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವನ್ನು ಸಾಧಿಸಲೇ ಬೇಕಾದ ಅನಿವಾರ್ಯತೆ ಇದೆ ಈ ಹಿನ್ನಲೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದರ ಬಗ್ಗೆ ಈಗಿನಿಂದಲೇ ಸನ್ನದ್ದರಾಗಬೇಕಿದೆ ಎಂದು ಮಯೂರ ಜಯಕುಮಾರ್ ಕರೆ ನೀಡಿದ್ದಾರೆ.
ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಕಳೆದ ವಿಧಾನ ಸಭೆ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ, ಇದೇ ರೀತಿ ಮುಂದಿನ ವರ್ಷದಲ್ಲಿ ನಡೆಯಲಿರುವ ಆಗ್ನೆಯ ಪದವೀಧರ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಈಗಿನಿಂದಲೇ ಶ್ರಮವನ್ನು ಹಾಕಬೇಕಿದೆ. ಈಗ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರವನ್ನು ಮಾಡುತ್ತಿದೆ ಇದರ ಮೂಲಕ ಈ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕಿದೆ ನಮ್ಮ ಪಕ್ಷದ ಪ್ರತಿಯೊಬ್ಬ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರ ಮನೆಯಲ್ಲಿ ಪದವೀಧರರು ಇದ್ದಾರೆ ಅವರನ್ನು ನೊಂದಾಣಿ ಮಾಡಿಸುವುದರ ಮೂಲಕ ಮುಂದಿನ ಚುನಾವಣೆಯಲ್ಲಿ ನಮಗೆ ಗೆಲುವು ಸಾಧ್ಯವಾಗಲಿದೆ ಎಂದರು.
ಈ ಸಮಾರಂಭದಲ್ಲಿ ಡಿಸಿಸಿ ಕಾರ್ಯಾದ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ, ತಾಲ್ಲೂಕು ಅಧ್ಯಕ್ಷರಾಧ ಪ್ರಕಾಶ್, ನಗರಾಬೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್. ಕೆ. ಸರ್ದಾರ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿಗೀತಾನಂದಿನಿಗೌಡ, ಯುವ ಘಟಕದ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ, ಸೇವಾದಳದ ಭೂತೇಶ್, ಸೈಯದ್ ಆಫ್ತಾಖ್ ಆಹ್ಮಮದ್, ನಗರಾಧ್ಯಕ್ಷ ಲಕ್ಷ್ಮೀಕಾಂತ್, ಎಸ್. ಘಟಕದ ಅಧ್ಯಕ್ಷ ಜಯ್ಯಣ್ಣ, ಎಸ್.ಟಿ. ಘಟಕದ ಅಧ್ಯಕ್ಷ ಮಂಜುನಾಥ್, ಪದವೀಧರ ಕ್ಷೇತ್ರದ ಅಧ್ಯಕ್ಷ ಮುದಸಿರ್, ಮುನಿರಾ ಮುಕಂದರ್, ಅಲ್ಲಾಭಕ್ಷಿ, ಪ್ರಕಾಶ್ ರಾಮ ನಾಯ್ಕ್, ಖುದ್ದುಸ್, ಮಧುಗೌಡ, ಶಬ್ಬೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 33