ಕಲ್ಟ್’ ಚಿತ್ರ ಪ್ರಮೋಷನ್: ಡಿಸೆಂಬರ್ 30ಕ್ಕೆ ಸ್ಟೈಲಿಶ್ ಸ್ಟಾರ್ ಜೈದ್ ಖಾನ್ ತಂಡದೊಂದಿಗೆ ಚಿತ್ರದುರ್ಗಕ್ಕೆ ಆಗಮನ.

ಚಿತ್ರದುರ್ಗ ಡಿ.28 :

ಸ್ಟೈಲಿಶ್ ಸ್ಟಾರ್ ಜೈದ್ ಖಾನ್ ನಟಿಸಿರುವ ಬಹು ನಿರೀಕ್ಷಿತ ‘ಕಲ್ಟ್’ ಚಿತ್ರ ಜನವರಿ 23 ರಂದು ಬಿಡುಗಡೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ಡಿಸೆಂಬರ್ 30 ಕ್ಕೆ ಕೋಟೆಗಳ ನಾಡು ಐತಿಹಾಸಿಕ ನಗರಿ ಚಿತ್ರದುರ್ಗ ಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಂದು ಚಿತ್ರ ನಟ ಜೈದ್ ಖಾನ್, ನಟಿ ಯರಾದ ರಚಿತಾ ರಾಮ್, ಮಲೈಕಾ ವಸುಪಾಲ್ ಸೇರಿ ಇಡೀ ತಂಡ ಆಗಮಿಸಲಿದೆ ಎಂದು ಸಮಾಜ ಸೇವಕ ಅನ್ವ ರ್ ಬಾಷಾ ತಿಳಿಸಿದ್ದಾರೆ.

ಸಿಟಿ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, 30 ರಂದು ರಾಂಪಾರ್ ಅಲೋಕಿ, ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮ ನೀಡಲಿದ್ದಾರೆ. 30 ರಂದು ಬೆಳಗ್ಗೆ 11 ಕ್ಕೆ ಚಿತ್ರ ತಂಡ ಚಿತ್ರದುರ್ಗ ನಗರದ ಕನಕ ವೃತ್ತದ ಪ್ರವೇಶ ಮಾಡಲಿದ್ದು, ಕನಕದಾಸರು, ಡಾ. ಬಿ. ಆರ್.ಅಂಬೇಡ್ಕರ್, ಮದಕರಿ ನಾಯಕ ರ ಪ್ರತಿಮೆ ಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆ ನಡೆಯಲಿದೆ. 12 ಗಂಟೆಗೆ ದೇವರಾಜು ಶಿಕ್ಷಣ ಸಂಸ್ಥೆಯ ವೆಂಕಟೇಶ್ವರ ಶಾಲೆಯಲ್ಲಿ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ನಟ ಜೈದ್ ಖಾನ್ ಅತಿಥಿ ಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಜೆ ಐದು ಗಂಟೆಗೆ ಮಾಧ್ಯಮಿಕ ಶಾಲೆ ಆವರಣದಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಪಕ್ಷದ ಗಣ್ಯರು, ಸಾಹಿತಿ, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಚಿತ್ರದುರ್ಗ ಸಾಹಿತಿ ಕಲಾವಿದರ ನಾಡು. ಇಲ್ಲಿ ಪ್ರಮೋಷನ್ ಮಾಡಿದ ಎಲ್ಲ ಚಿತ್ರಗಳು ಯಶಸ್ಸು ಕಂಡಿದೆ. ಹೀಗಾಗಿ ಕಲ್ಟ್ ಚಿತ್ರ ದ ಪ್ರಮೋಷನ್ ಗಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಸಿ. ಟಿ ಕೃಷ್ಣಮೂರ್ತಿ, ಡಾ.ತಿಪ್ಪೇಸ್ವಾಮಿ, ಅನೀಸ್, ಓ. ಶಂಕರ್, ಕಿರಣ್, ಮಹಾಲಿಂಗಪ್ಪ ಕುಂಚಿಗನಾಳ್, ಬಾಳೆಕಾಯಿ ಶ್ರೀನಿವಾಸ್, , ರಾಜಣ್ಣ, ಉಪಸ್ಥಿತರಿದ್ದರು.

Views: 37

Leave a Reply

Your email address will not be published. Required fields are marked *