✍️ ಲೇಖಕರ ವಿವರ
ಎಂ.ಆದರ್ಶ ಬಿದರಕೆರೆ
ನಿಕಟಪೂರ್ವ ಪ್ರಾಂತ ಕಾರ್ಯ ಸಮಿತಿ ಸದಸ್ಯರು ಆಭಾವಿಪ
ಚಿತ್ರದುರ್ಗ ಡಿ. 29
ಅಟಲ್ ಬಿಹಾರ್ ವಾಜಪೇಯಿರವರ ವಿಕಸಿತ ಭಾರತದ ಕನಸು
ಡಿಸೆಂಬರ್ 25 ನಮಗೆಲ್ಲ ವಿಶೇಷದಿನ. ರಾಷ್ಟ್ರದ ಮಾಜಿ ಪ್ರಧಾನಮಂತ್ರಿಗಳು, ಭಾರತರತ್ನ ಪ್ರಶಸ್ತಿ ಪುರಸ್ಕೃತರು, ಅಜಾತಶತ್ರು, ಅಟಲ್‍ಬಿಹಾರ್ ವಾಜಪೇಯಿಯವರ ಜನ್ಮದಿನೋತ್ಸವ. ಅವರು ಅಸಂಖ್ಯಾತ ಜನರಿಗೆ ಸ್ಪೂರ್ತಿ ನೀಡುತ್ತಿರುವ ಮುತ್ಸದಿಯಾಗಿ ಎತ್ತರದ ಸ್ಥಾನದಲ್ಲಿದ್ದಾರೆ.
“ರಾಷ್ಟ್ರಮೊದಲು, ಪಕ್ಷನಂತರ, ನಾನು ಕಡೆಯಲ್ಲಿ” ಎಂಬ ತತ್ವವನ್ನು ಜೀವನದುದ್ದಕ್ಕೂ ಅಚರಿಸಿ ಕೇವಲ ಭಾಜಪಕ್ಕೆ ಅಷ್ಟೆ ಅಲ್ಲದೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಮಾರ್ಗದರ್ಶಿಯಾದ ಆದರ್ಶಮಯ ಬದುಕು ಅಟಲ್‍ಜಿಯವರದು.
ಡಿಸೆಂಬರ್ 25 ಉತ್ತಮ ಆಡಳಿತ ದಿನ
ಡಿಸೆಂಬರ್ 25ರಂದು ಭಾರತದಲ್ಲಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಸ್ಮರಣಾರ್ಥ ಉತ್ತಮ ಆಡಳಿತ ದಿನವನ್ನು ಆಚರಿಸಲಾಗುತ್ತದೆ. ವಾಜಪೇಯಿ ಅವರ ಪಾರದರ್ಶಕತೆ, ದಕ್ಷತೆ ಮತ್ತು ಜನ ಕೇಂದ್ರಿತ ಆಡಳಿತದ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. 2014ರಲ್ಲಿ ನರೇಂದ್ರ ಮೋದಿ ಸರ್ಕಾರದ ಮೊದಲು ಘೋಷಿಸಿದ ಉತ್ತಮ ಆಡಳಿತ ದಿನವು ಸರ್ಕಾರಿ ಸಂಸ್ಥೆಗಳ ಹೊಣೆಗಾರಿಕೆಯ ಬಗ್ಗೆ ಜಾಗೃತಿ ಮೂಡಿಸುವುದು & ಪರಿಣಾಮಕಾರಿ ಸೇವಾ ವಿತರಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರತಿವರ್ಷ, ಜವಾಬ್ದಾರಿಯುತ ಆಡಳಿತದ ಮಹತ್ವವನ್ನು ಎತ್ತಿ ತೋರಿಸುವ ಚಟುವಟಿಕೆಗಳೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.
ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ & ನಿರ್ಣಯಗಳು
ಭಾರತ ಪ್ರಕಾಶಿಸುತ್ತಿದೆ ವಾಜಪೇಯಿ ಅವರು ದೇಶದ ಆರ್ಥಿಕ ಭದ್ರತೆಗಾಗಿ ಹಾಕಿದ ಬುನಾದಿಯನ್ನು ಮರೆಯುವಂತಿಲ್ಲ.ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡ ವಾಜಪೇಯಿ ಅವರು ಐದುವರ್ಷಗಳ ಕಾಲ ಅಧಿಕಾರ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದಾರೆ. 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದರು. ಮೈತ್ರಿ ಸರ್ಕಾರಗಳಿಂದ ಕೂಡಾ ಸರ್ಕಾರ ಆಡಳಿತ ಸಾಧ್ಯ ಎಂದು ತೋರಿಸಿಕೊಟ್ಟರು ಜಾಗತಿಕವಾಗಿ ಭಾರತವನ್ನು ಸಮರ್ಥ ದೇಶವಾಗಿ ನೋಡಲು ಸಾಧ್ಯವಾಗುವಂತೆ ಪರಿಸ್ಥಿತಿ ತಂದರು.
1) ದೇಶದ ಪ್ರಗತಿಗಾಗಿ ಸಮಗ್ರ ಯೋಜನೆಗಳು :
ದೇಶದೆಲ್ಲಡೆ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ರಸ್ತೆ ನಿರ್ಮಾಣ ಯೋಜನೆಗಳ ಫಲವನ್ನು ಈಗ ದೇಶ ಕಾಣುತ್ತಿದೆ. ಸುವರ್ಣಚತುಷ್ಪಥ ಯೋಜನೆ ಪ್ರಧಾನಮಂತ್ರಿ ಗ್ರಾಮ ಸತಕ್ ಯೋಜನೆ ಮುಖ್ಯವಾದವು. ಸುವರ್ಣಚತುಷ್ಪಥದಲ್ಲಿ ಚೆನ್ನೈ, ಕೊಲ್ಕಾತ್ತಾ,ದೆಹಲಿ, ಮುಂಬೈ, ನಗರಗಳನ್ನು ಹೆದ್ದಾರಿಗಳ ಜಾಲದ ಮೂಲಕ ಬೆಸಯಲಾಗಿದೆ.
2) ಖಾಸಗೀಕರಣ :
ಆಡಳಿತದಲ್ಲಿ ಪಾರದರ್ಶಕತೆ ಜತೆಗೆ ವಿಕೇಂದ್ರಿಕರಣ ಖಾಸಗೀಕರಣಕ್ಕೂ ಒತ್ತು ನೀಡಿದರು. ಭಾರತ ಅಲ್ಯೂಮಿನಿಯಂ ಕಂಪನಿ ಹಾಗೂ ಹಿಮಾಷನ್ ಜಿಂಕ್, ಇಂಡಿಯನ್ ಪೆಟ್ರೊಕೆಮಿಕಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಅಂದು ವಾಜಿಪೇಯಿ ಸರ್ಕಾರ ಇಟ್ಟ ಹೆಜೆ ಇಂದಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮಾದರಿ ಪ್ರತಿಯಾಯಿತು.
3) ವಿತ್ರಿಯ ಕೊರತೆ ಮೇಲೆ ನಿಗಾ
ವಾಜಪೇಯಿ ಸರ್ಕಾರ ಹೊರತಂದ ವಿತ್ತಿಯ ಜವಾಬ್ದಾರಿ ಕಾಯ್ದೆ ಮೂಲಕ ವಿತ್ತಿಯ ಕೊರತೆ ಮೇಲೆ ನಿಗಾ ಇರಿಸಲಾಯಿತು. ಸಾರ್ವಜನಿಕ ವಲಯದ ಉಳಿತಾಯ 0.8% (ಆರ್ಥಿಕ ವರ್ಷ 2000) ರಿಂದ 2005ರ ಅರ್ಥಿಕ ವರ್ಷದಲ್ಲಿ 9.3%ಕ್ಕೆ ಏರಿತು.
4) ಸರ್ವಶಿಕ ಅಭಿಯಾನ :
6 ರಿಂದ 14 ವರ್ಷ ವಯಸ್ಸಿನ ತನಕ ಉಚಿತ ಪ್ರಾಥಮಿಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದು ಕ್ರಾಂತಿ ಮಾಡಲಾಯಿತು. 2001ರಲ್ಲಿ ಚಾಲನೆ ಸಿಕ್ಕಿ ಯಶಸ್ಸಿಗೇರಿತು. ಶಾಲೆ ಬಿಟ್ಟು ತೆರಳುವವರ ಸಂಖ್ಯೆ ಶೇ. 60%ರಷ್ಟು ಕಡಿಮೆಯಾಯಿತು.
5) ಟೆಲಿಕಾಂ ಕ್ರಾಂತಿ :
ವಾಜಪೇಯಿ ಸರ್ಕಾರ ಹೊರತಂದ ಟೆಲಿಕಾಂ ನೀತಿ ದೇಶದಲ್ಲಿ ಹೊಸಕ್ರಾಂತಿ ಮಾಡಿತು. ಅದಾಯ ಹಂಚಿಕೆ ವ್ಯವಸ್ಥೆಯನ್ನು ತಂದು ಟೆಲಿಕಾಂ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧ್ಯವಾಯಿತು. ಭಾರತ ಸಂಚಾರ್ ನಿಗಮ ನಿಯಮಿತ ಪ್ರತ್ಯೇಕ ನಿಯಮವಳಿಗಳನ್ನು ರೂಪಿಸಿತು. ವಿದೇಶ ಸಂಚಾರ್ ನಿಗಮ್ ನಿಯಮಿತ ಹೊಂದಿದ್ದ ಏಕಸ್ವಾಮ್ಯತೆಯನ್ನು ಮುರಿಯಲಾಯಿತು. ದೇಶದೆಲ್ಲೆಡೆ ಟೆಲಿಕಾಂ ಜಾಲ ವಿಸ್ತರಣೆಗೊಂಡಿತು.
6) ನದಿಜೋಡಣೆ : ಬರಗಾಲ ಮತ್ತು ಪ್ರವಾಹ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ನದಿ ಜೋಡಣೆ ಕಲ್ಪನ ಅಟಲ್ ಜೀಯವರ ಕನಸಾಗಿತ್ತು.
ಅಜಾತಶತ್ರು ಅಟಲ್ ಜೀ – ಶಾಶ್ವತ ಪ್ರೇರಣೆ
2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದರೂ, ಅಟಲ್ ಬಿಹಾರ್ ವಾಜಪೇಯಿ ಅವರ ಚಿಂತನೆಗಳು, ತತ್ವಗಳು ಹಾಗೂ ಆಡಳಿತ ಶೈಲಿ ಇಂದಿಗೂ ಪ್ರಸ್ತುತವಾಗಿವೆ. ರಾಜಕೀಯದಲ್ಲಿ ಶಿಷ್ಟಾಚಾರ, ಸಂಯಮ ಮತ್ತು ರಾಷ್ಟ್ರಭಕ್ತಿಗೆ ಅವರು ಪ್ರತೀಕವಾಗಿದ್ದರು.
ವಿಕಸಿತ ಭಾರತದ ಕನಸಿಗೆ ಬುನಾದಿ ಹಾಕಿದ ವಾಜಪೇಯಿ ಅವರ ಬದುಕು, ಮುಂದಿನ ತಲೆಮಾರಿನ ನಾಯಕರಿಗೆ ಶಾಶ್ವತ ಪ್ರೇರಣೆಯಾಗಿ ಉಳಿಯಲಿದೆ.

✍️ ಲೇಖಕರ ವಿವರ
ಎಂ.ಆದರ್ಶ ಬಿದರಕೆರೆ
ನಿಕಟಪೂರ್ವ ಪ್ರಾಂತ ಕಾರ್ಯ ಸಮಿತಿ ಸದಸ್ಯರು ಆಭಾವಿಪ
Views: 314