ಚಿತ್ರದುರ್ಗ| ವೈಕುಂಠ ಏಕಾದಶಿ ಸಂಭ್ರಮ: ಮೆದೆಹಳ್ಳಿ ರಸ್ತೆಯ ಶ್ರೀ ವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 30

ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಇರುವ ಶ್ರೀ ವಿಷ್ಣು ದೇವಸ್ಥಾನದಲ್ಲಿ ಮಂಗಳವಾರ 2ನೇ ವರ್ಷದ ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಬೆಳಿಗ್ಗೆ ಪೂಜೆ ನೆರವೇರಿತು ಈ ಸಂದರ್ಭದಲ್ಲಿ ವಿಷ್ಣು ದೇವರಿಗೆ ಅಭಿಷೇಕ ಹೂವಿನ ಅಲಂಕಾರ ಸ್ವಾಮಿಯವರ ಪ್ರಕಾರೋತ್ಸವ ಉತ್ತರ ಬಾಗಿಲು ಪೂಜೆ ಅಲಂಕಾರ ಸೇವೆ ಏರ್ಪಡಿಸಲಾಯಿತು.

ಪೂಜೆಯ ನೇತೃತ್ವವನ್ನು ಸತೀಶ್ ಶರ್ಮಾ ಮತ್ತು ಸಂಗಡಿಗರಿಂದ ಪೂಜೆ ಮಾಡಲಾಯಿತು ಈ ಸಂದರ್ಭದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ದೇವರ ವಿಗ್ರಹವನ್ನು ಇಟ್ಟು ದೇವಸ್ಥಾನಗಳ ಸುತ್ತಲೂ ಪ್ರದಕ್ಷಣೆ ಮಾಡಲಾಯಿತು . ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೈಕುಂಠ ದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.

ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದದ ಅಧ್ಯಕ್ಷರಾದ ಶರಣ್ ಕುಮಾರ್ ಹಾಗೂ ಕಾರ್ಯದರ್ಶಿಯಾದ ಎಮ್ ಪಿ ವೆಂಕಟೇಶ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಿ ಎಸ್ ಮೋಹನ್ ಕುಮಾರ್, ಬಾಲಾಜಿ ಜಗದೀಶ್ ಗುಡ್ಡದ ಮಲ್ಲಪ್ಪ, ಇಂದ್ರಣ್ಣ, ಸೂರಪ್ಪ, ರೇಷ್ಮೆ ಮಂಜುನಾಥ್ ರಮೇಶ್ ಹಾಗೂ ರಮೇಶ್ ಗುರುಸ್ವಾಮಿ ಉಪಸ್ಥಿತರಿದ್ದರು , ಸಂಜೆ ತನಕ ನಗರದ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.

Views: 55

Leave a Reply

Your email address will not be published. Required fields are marked *