ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕ್ರೀಡಾ, ಸಾಂಸ್ಕೃತಿಕ, ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ.
ಚಿತ್ರದುರ್ಗ ಡಿ 30
ಹಿಂದಿನ ಕಾಲದಲ್ಲಿ ವಿದ್ಯಾರ್ಥಿಯ ಜೀವನ ಬಂಗಾರದ ಜೀವನ ಎನ್ನುತ್ತಿದ್ದರು, ಆದರೆ ಈಗ ವಿದ್ಯಾರ್ಥಿಯ ಜೀವನ ಸ್ಪರ್ಧಾತ್ಮಕವಾದ ಯುಗವಾಗಿದೆ, ಇಲ್ಲಿ ಕಷ್ಟು ಪಟ್ಟು ಅಭ್ಯಾಸವನ್ನು ಮಾಡಿದರೆ ಮಾತ್ರ ನಿಮ್ಮ ಮುಂದಿನ ಜೀವನ ಸುಖವಾಗಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಉಪ ನಿರ್ದೆಶಕರಾದ ತಿಮ್ಮಯ್ಯ ಕೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜುವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ರೋವರ್ಸ್ ಘಟಕಗಳ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಎಲ್ಲಡೆ ಸ್ಪರ್ದೆ ಹೆಚ್ಚಾಗಿದೆ ಸಣ್ಣದಾದ ಹುದ್ದೆಗೂ ಸಹಾ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು ಅರ್ಜಿಯನ್ನು ಹಾಕುತ್ತಿದ್ದಾರೆ, ಇದಕ್ಕೆ ನಮ್ಮಲ್ಲಿ ಅದಕ್ಕೆ ತಕ್ಕಂತ ಅರ್ಹತೆ ಇರಬೇಕಿದೆ, ಈ ಹಿನ್ನಲೆಯಲ್ಲಿ ತಮ್ಮ ಅಭ್ಯಾಸದ ಜೊತೆಗೆ ಇಂದಿನ ಸ್ಪರ್ಧಾತ್ಮಕವಾದ ಯುಗಕ್ಕೆ ತಕ್ಕಂತೆ ತಯಾರಾಗಬೇಕಿದೆ, ಬರೀ ಪಾಸಾದರೆ ಸಾಲದು ಇನ್ನೂ ಹೆಚ್ಚಿನ ರೀತಿಯಲ್ಲಿ ನಮ್ಮಲ್ಲಿ ಕೌಶಲ್ಯವನ್ನು ಹೊಂದಿರಬೇಕಿದೆ.ಇದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ನಡೆಸಬೇಕಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು, ಉಪನ್ಯಾಸಕರು, ಪೋಕಷರು, ಮಾರ್ಗದರ್ಶಕರು ಮಾತ್ರ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಬೇಕಿದೆ ಇಲ್ಲಿ ಯಾರು ಸಹಾ ಬರುವುದಿಲ್ಲ, ಕಠಿಣವಾದ ಪರಿಶ್ರಮದ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ, ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಹಾಜರಾಗುವುದಿಲ್ಲ ಶೇ.75ರಷ್ಟು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ನೀಡುವುದಿಲ್ಲ ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚರವಹಿಸಬೇಕಿದೆ. ವಿದ್ಯಾರ್ಥಿ ದಿಸೆಯಿಂದಲೇ ಸಂಸ್ಕಾರವನ್ನು ಕಲಿಯಿರಿ ಇದರಿಂದ ಅದು ನಿಮಗೆ ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ. ಉಡಾಫೆಯಿಂದ ಜೀವನವನ್ನು ಕಳೆಯಬೇಡಿ, ನಿಮ್ಮನ್ನು ಹೆತ್ತವರಿಗೆ ಅವರಿಗೆ ಗೌರವವನ್ನು ತರುವಂತ ಕೆಲಸವನ್ನು ಮಾಡಿ, ಅಗೌರವವನ್ನು ತರುವಂತ ಕೆಲಸವನ್ನು ಮಾಡಬೇಡಿ ಎಂದು ತಿಮ್ಮಯ್ಯ ಕಿವಿ ಮಾತು ಹೇಳಿದರು.
ಸಮಾರೋಪ ಭಾಷಣ ಮಾಡಿದ ಕರ್ನಾಟಕ ಬಯಲಾಟ ಆಕಾಡೆಮಿಯ ಸದಸ್ಯರಾದ ಮಾರನಾಯಕ, ನನ್ನ ವಿದ್ಯೆ ಕಡಿಮೆ ಆದರೆ ಬಯಲಾಟದಲ್ಲಿ ನಾನು ಪ್ರವೀಣ, ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಆಟಗಳು ಹೆಚ್ಚಾಗಿದೆ ಆದರೆ ಇಂದಿನ ದಿನಮಾನದಲ್ಲಿ ಮೊಬೈಲ್ ಹಾವಳಿಯಿಂದಾಗಿ ನಮ್ಮಂತಹರ ಆಟಗಳು ಕಡಿಮೆಯಾಗಿವೆ, ನನ್ನ ತಂದೆ ಬಯಲಾಟ, ತಾಯಿ ಸೋಭಾನೆ ಪದವನ್ನು ಹಾಡುತ್ತಿದ್ದರು, ಇದರಿಂದ ನಾನು ಸನಾ ನನ್ನ ಶಿಕ್ಷಣವನ್ನು ಮೊಟುಕುಗೊಳಿಸಿ ಈ ಬಯಲಾಟಕ್ಕೆ ಬರಲಾಯಿತು. ಕಲಿಕೆಯ ಸಮಯದಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ, ಸಮಯಕ್ಕೆ ಮಹತ್ವವನ್ನು ನೀಡಿ ನನ್ನಲ್ಲಿ ಕಡಿಮೆ ವಿದ್ಯಾಭ್ಯಾಸ ಇದ್ದರೂ ಸಹಾ ನನ್ನಲ್ಲಿನ ಕಲೆಯಿಂದ ನಾನು ರಾಜ್ಯ ಮಟ್ಟಕ್ಕೂ ಸಹಾ ಹೋಗುವುದರ ಮೂಲಕ ಕಲೆಯನ್ನು ಪ್ರದರ್ಶನ ಮಾಡಿ ರಾಜ್ಯ ಪ್ರಶಸ್ತ್ರಿಯನ್ನು ಗಳಿಸಿದ್ದೇನೆ 2023-24ರಿಂದ ಕರ್ನಾಟಕ ಬಯಲಾಟ ಆಕಾಡೆಮಿಯ ಸದಸ್ಯರಾಗಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಚಾರ್ಯರಾದ ಎನ್.ದೊಡ್ಡಪ್ಪ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ರೀತಿಯ ಅನುಕೂಲವನ್ನು ಮಾಡಿಕೊಡಲಾಗಿದೆ, ಆದರೆ ವಿದ್ಯಾರ್ಥಿಗಳು ಸರಿಯಾದ ಸಹಕಾರವನ್ನು ನೀಡುತ್ತಿಲ್ಲ, ಕಾಲೇಜಿನಲ್ಲಿ 853 ವಿದ್ಯಾರ್ಥಿಗಳಿದ್ದು, ಇದರಲ್ಲಿ 453 ದ್ವೀತಿಯ ಪಿಯು ಓದುವಂತ ವಿದ್ಯಾಥಿಗಳಿದ್ದಾರೆ, ಇವರಲ್ಲಿ ಹಲವಾರು ಜನ ಕಾಲೇಜಿಗೆ ಬರುವುದಿಲ್ಲ ಇನ್ನೂ ಕೆಲವರು ಅತಿಥಿ ಉಪನ್ಯಾಸಕರ ರೀತಿಯಲ್ಲಿ ಆಗಾಗ ಬರುತ್ತಾರೆ, ಇದರಲ್ಲಿ ಬಂದವರು ಸಹಾ ಸರಿಯಾದ ರೀತಿಯಲ್ಲಿ ಅಭ್ಯಾಸವನ್ನು ಮಾಡುವುದಿಲ್ಲ ನೋಟ್ಸ್ ಬರಿಯುವುದಿಲ್ಲ ನಮ್ಮ ಜಿಲ್ಲೆಯಲ್ಲಿ ಉತ್ತಮವಾದ ಫಲಿತಾಂಶವನ್ನು ತರಲು ನಮ್ಮ ಉಒಪ ನಿರ್ದೇಶಕರು ಹಲವಾರು ರೀತಿಯ ಯೋಜನೆಯನ್ನು ಹಾಕಿಕೊಂಡು ಈ ಭಾರಿ ಉತ್ತಮವಾದ ಫಲಿತಾಂಶವನ್ನು ನೀಡಬೇಕೆಂದು ಪಣವನ್ನು ತೊಟ್ಟಿದ್ದಾರೆ ಇದಕ್ಕೆ ನಮ್ಮ ಪಿಯು ಕಾಲೇಜಿನ ಎಲ್ಲಾ ಪ್ರಾಂಶುಪಾಲರ ಉಪನ್ಯಾಸಕ ಬೆಂಬಲ ಸಹಕಾರ ಇದೆ ಎಂದ ಅವರು. ರೈತನಿಗೆ ತಾನು ಬೆಳೆದ ಬೆಳೆ ಉತ್ತಮವಾಗಿ ಬಂದರೆ ಸಂತೋಷ ಅದೇ ರೀತಿ ಉಪನ್ಯಾಸಕರಿಗೆ ತಾವು ಮಾಡಿದ ಭೋಧನೆಗೆ ಉತ್ತಮವಾದ ಫಲಿತಾಂಶ ಬಂದರೆ ಸಂತೋಷವಾಗುತ್ತದೆ ಎಂದರು.
ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರು, ಕಾಲೇಜು ಅಭೀವೃದ್ದಿ ಸಮಿತಿಯ ಸದಸ್ಯರಾದ ನರಸಿಂಹಮೂರ್ತಿ ಎನ್, ಪತ್ರಕರ್ತರು ಕಾಲೇಜು ಅಭೀವೃದ್ದಿ ಸಮಿತಿಯ ಸದಸ್ಯರಾದ ಮಹೇಶ್ ಬಾಬು, ಪುಟ್ಟಮ್ಮ, ಉಪನ್ಯಾಸಕರಾದ ಮೋಹನ್, ಲೋಕೇಶ್, ರಮೇಶ್, ಶ್ರೀನಿವಾಸ್ ವಿದ್ಯಾರ್ಥಿಗಳ ಪ್ರತಿನಿಧಿಗಳಾದ ರಕ್ಷಿತಾ ಅಭೀಷೇಕ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುನಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿದ ಕಾರ್ತಿಕ್, ಗೀರಿಶ್ ಹಾಗೂ ಕಿಶೋರ್ ಹಾಗೂ ಕಾಲೇಜಿನಲ್ಲಿ ನಡೆಸಿದ ಕ್ರೀಡಾಕೂಟದಲ್ಲಿ ಸಾಂಸ್ಕøತಿಕ ಚಟುವಟಿಕೆಯಲ್ಲಿ ವಿಜೇತರಾದವರವರನ್ನು ಕಾಲೇಜಿವತಿಯಿಂದ ಗೌರವಿಸಲಾಯಿತು.
ರಾಹುಲ್ ಚಿನ್ನ ಪ್ರಾರ್ಥಿಸಿದರೆ ಹಿರಿಯ ಉಪನ್ಯಾಸಕಾರದ ಸುರೇಶ್ ಸ್ವಾಗತಿಸಿದರು. ಶ್ರೀನಿವಾಸ್ ವಂದಿಸಿದರು, ಚನ್ನಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಸುರಭಿ ಮೆಲೋಡಿಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು,
Views: 15