ಗಾಂಧೀಜಿ ವ್ಯಕ್ತಿತ್ವವನ್ನು ಸಮರ್ಥವಾಗಿ ಚಿತ್ರಿಸಿದ ‘ಮಹಾತ್ಮರ ಬರವಿಗಾಗಿ’ ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 02

ದೀವಿಗೆ ಸಾಂಸ್ಕೃತಿಕ ವೇದಿಕೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸದ್ದ ಯಕ್ಷ ರಂಗಾಯಣ ಕಾರ್ಕಳ ರಂಗಪಯಣದ ಎರಡನೇ ನಾಟಕ ಮಹಾತ್ಮರ ಬರವಿಗಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ನೆರೆದ ಪ್ರೇಕ್ಷಕರು ನಾಟಕ ಮುಗಿದಾಗ ನಿಶ್ಯಬ್ಧಕ್ಕೆ ಜಾರಿದ್ದು ಅದನ್ನು ಬಿಂಬಿಸಿತು.

ನಾಟಕದ ಕುರಿತು ಅಭಿಪ್ರಾಯ ಹಂಚಿಕೊಂಡ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ರಾಜಶೇಖರಯ್ಯ ಅವರು ಗಾಂಧೀಜಿಯ ಜೀವನದ ಕೊನೆಯ ದಿನಗಳನ್ನು ಅವರ ವ್ಯಾಕುಲತೆಯನ್ನು ಹತ್ತಿರದಿಂದ ಕಂಡ ಬರ್ಕವೈಟ್ ರನ್ನು ಉಲ್ಲೇಖಿಸಿ ಮಾತನಾಡಿದರು ಹಾಗೂ ಗಾಂಧಿಜಿ ಅನುಯಾಯಿ ಬೆಳಗೆರೆ ಚಂದ್ರಶೇಖರ ಶಾಸ್ತ್ರಿ ಯವರು ಅವರ ಸಾವಿನಿಂದ ಅನುಭವಿಸಿದ ನೋವಿನ ಕತೆ ಆದ್ರ್ರತೆ ಯಿಂದ ಕೂಡಿದ್ದು ಎಂದು ಹೇಳದರು. ನಾಟಕವು ಗಾಂಧಿಜಿಯ ವ್ಯಕ್ತಿತ್ತ್ವವನ್ನುಸಮರ್ಥವಾಗಿ ಚಿತ್ರಿಸುತ್ತದೆ, ಪ್ರೇಕ್ಷಕರ ಮನ ಮುಟ್ಟುವ ಪ್ರಯೋಗ ಇದೆಂದು ತಿಳಿಸಿದರು.

ನಿರ್ದೇಶಕ ಶ್ರೀಕಾಂತ್ ಅವರ ಜಾಣ್ಮೆ ಹಾಗೂ ನಾರಾಯಣ್ ಅವರ ಕಾದಂರಿಯನ್ನು ರಂಗದ ಮೇಲೆ ತಂದ ಅವರ ಗ್ರಹಿಕೆ ನಾಟಕದಲ್ಲಿ ಅನಾವರಣಗೊಂಡಿದೆ ಎಂದು ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕರಾದ ಎಚ್.ಜಿ.ರಾಮಚಂದ್ರ ರಾವ್ ಹೇಳಿದರು. ಗುಲಾಮನ ಸಾತಂತ್ರ್ಯ ಯಾತ್ರೆ ನಾಟಕದ ಆಶಯ ಮತ್ತು ಅದರ ಪ್ರಸ್ತುತತೆ ಮೇಲೆ ಬೆಳಕು ಚೆಲ್ಲಿದರು. ಇಂದಿನ ರಾಜಕಾರಣದಲ್ಲಿ ಆಳುವ ವರ್ಗ ಕಾರ್ಪೊರೇಟ್ ವರ್ಗದ ಗುಲಾಮನರಾಗಿರುವುದು ಕಂಡುಬರುತ್ತದೆ, ಆದರೆ ಈ ನಾಟಕದಲ್ಲಿ ಅದಕ್ಕೆ ವಿರುದ್ಧವಾಗಿ ಗುಲಾಮನಾಗಿದ್ದ ಸುಲ್ತಾನ ಸ್ವಾತಂತ್ರ ಪಡೆಯಲು ಹವಣಿಸುವ ನಡೆ ಅನುಕರಣೀಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಾಸವಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಸತ್ಯನಾರಾಯಣ ಶೆಟ್ಟಿ ಮಾತನಾಡಿ ಮನ ಮಿಡಿಯುವ ಪ್ರಯೋಗ ಇದಾಗಿತ್ತು ಎಂದರು.

ಈ ನಾಟಕವು ಚಿ ನ ಮಂಗಳ ಅವರ ಮಹಾತ್ಮರ ಬರವಿಗಾಗಿ ಕಾದಂಬರಿ ಆಧರಿಸಿದ ರಂಗರೂಪ. ಖ್ಯಾತ ಲೇಖಕ ಆರ್ ಕೆ ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿ ವೇಯ್ಟಿಂಗ್ ಫಾರ್ ದ ಮಹಾತ್ಮದ ಕನ್ನಡ ಅವತರಿಣಿಕೆ ಇದಾಗಿದ್ದು ಇದರ ನಿರ್ದೇಶಕರು ಎನ್ ವಿ ಶ್ರೀಕಾಂತ ದಾವಣಗೆರೆ. ಮಹಾತ್ಮ ಗಾಂಧೀಜಿಯವರು ಅಧ್ಯಕ್ಷರಾಗಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನೆನಪಿನಲ್ಲಿ ಈ ಪ್ರಯೋಗವನ್ನು ಸಿದ್ಧಪಡಿಸಲಾಗಿದೆ.

ನಾಟಕದ ಕಥಾವಸ್ತು: ನಾಟಕವು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಚಿತ್ರಿತವಾಗಿದ್ದು ಮಹಾತ್ಮ ಗಾಂಧೀಜಿಯವರ ತತ್ತ್ವಗಳು ಮತ್ತು ಚಳವಳಿಯನ್ನು ಒಳಗೊಂಡಿದೆ. ಕಥೆಯು ಮುಖ್ಯವಾಗಿ ಶ್ರೀರಾಮ್ ಎಂಬ ಯುವಕ ಮತ್ತು ಭಾರತಿ ಎಂಬ ಹುಡುಗಿಯ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಶ್ರೀರಾಮ್ ಗಾಂಧೀಜಿಯವರ ಚಳವಳಿಗೆ ಸೇರಿ ಸ್ವಾತಂತ್ರ್ಯದಲ್ಲಿ ಸಕ್ರಿಯನಾಗಿ ಜೈಲು ಸೇರುತ್ತಾನೆ. ಭಾರತಿಯು ಗಾಂಧೀಜಿಯ ಸಹವರ್ತಿಯಾಗಿದ್ದು ಹೋರಾಟಗಳಲ್ಲಿ ಭಾಗವಹಿಸಿ ಕೊನೆಗೆ ಶ್ರೀರಾಮನನ್ನು ವರಿಸಲು ಅವರ ಆಶೀರ್ವಾದ ಪಡೆಯುತ್ತಾಳೆ. ಗಾಂಧೀ ಹತ್ಯೆಯ ಘಟನೆಯೊಂದಿಗೆ ನಾಟಕವು ಮುಗಿಯುತ್ತದೆ. ಈ ನಾಟಕವು ಗಾಂಧೀಜಿಯವರ ವ್ಯಕ್ತಿತ್ವವನ್ನು ಮತ್ತು ಅವರ ಆದರ್ಶಗಳು ಸಾಮಾನ್ಯ ಜನರ ಜೀವನದ ಮೇಲೆ ಹೇಗೆ ಪ್ರಭಾವ ಬೀರತು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

Views: 129

2 thoughts on “ಗಾಂಧೀಜಿ ವ್ಯಕ್ತಿತ್ವವನ್ನು ಸಮರ್ಥವಾಗಿ ಚಿತ್ರಿಸಿದ ‘ಮಹಾತ್ಮರ ಬರವಿಗಾಗಿ’ ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ.

Leave a Reply

Your email address will not be published. Required fields are marked *