ಜನವರಿ 15ರಂದು ಭಜನಾ, ಸಂಜೆ ಅನ್ನಸಂತರ್ಪಣೆ
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ:
ಗ್ರಾಮದ ತುರೆಬೈಲು ಕಾಲೋನಿಯ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದ ಸಮೀಪ, ಶ್ರೀ ಉತ್ಸವಂಬ ಸೇವಾ ಸಮಿತಿ ಹಾಗೂ ಪಾಂಡುರಂಗ ಭಜನಾ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ 5ನೇ ವಾರ್ಷಿಕೋತ್ಸವ ಹಾಗೂ ಭಜನಾ ಕಮಟ ಕಾರ್ಯಕ್ರಮವನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಜನವರಿ 15, 2026 (ಗುರುವಾರ) ಮಧ್ಯಾಹ್ನ 4.00 ಗಂಟೆಗೆ ಆರಂಭವಾಗಲಿದೆ.
19 ಭಜನಾ ತಂಡಗಳ ಭಾಗವಹಿಸುವಿಕೆ ನಿರೀಕ್ಷೆ
ಈ ಭಜನಾ ಕಮಟ ಕಾರ್ಯಕ್ರಮದಲ್ಲಿ ಸುಮಾರು 19 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಭಕ್ತರು ಮತ್ತು ಗ್ರಾಮಸ್ಥರಿಗೆ ಭಜನಾ ಸಂಭ್ರಮವನ್ನು ಉಣಬಡಿಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.
ಸಂಜೆ ಅನ್ನಸಂತರ್ಪಣೆ
ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ಗಂಟೆಯಿಂದ ಅನ್ನಸಂತರ್ಪಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಭಜನಾ ಕಮಿಟಿ ಮಂಡಳಿ ತಿಳಿಸಿದೆ.
ಗ್ರಾಮದ ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
Views: 33