ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ. ಗ್ರಾಮದ ತೊರೆಬೈಲು ಕಾಲೋನಿಯ ಉತ್ಸವಮ ಸೇವಾ ಸಮಿತಿ ಹಾಗೂ ಶ್ರೀ ಪಾಂಡುರಂಗ ಭಜನಾ ಮಂಡಳಿ ವತಿಯಿಂದ 5 ವರ್ಷದ ವಾರ್ಷಿಕೋತ್ಸವ ಹಾಗೂ ಬಜನಾ ಕುಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ ಎಸ್ ಅನಿತ್ ಕುಮಾರ್. ಗ್ರಾಮದಲ್ಲಿ ಬಜನಾ ಕುಮಟ ಮಗುವಾಗಿ ಹುಟ್ಟಿ ಯುವಕನಾಗಿ ಬೆಳೆದು ಮುಂದೆ ಸಾಗುತ್ತಿರುವ ಈ ಭಜನಾ ತಂಡವು ಮುಂದೆ ಸಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಇನ್ಸ್ಟಾಗ್ರಾಮ್ ಮೊಬೈಲ್ ದಾರವಾಹಿ ಟಿವಿ ಕಾಲದಲ್ಲಿ ಮಾಧ್ಯಮಗಳನ್ನು ಅಡಿಟ್ ಆಗಿದ್ದಾರೆ ಆದರೆ ಸಂಕ್ರಾಂತಿಯ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಬಜನಾ ಕಮಟ ಸಂಘಕ್ಕೆ ತುಂಬು ಹೃದಯದ ಧನ್ಯವಾದಗಳು ಮುಂದಿನ ಪೀಳಿಗೆಗೆ ಇದೊಂದು ಮಾದರಿಯಾಗಲಿ ಎಂದು ತಿಳಿಸಿದರು.
ಲಾವಣಿ ಪದದ ಯುಗ ಧರ್ಮ ರಾಮಣ್ಣ ಮಾತನಾಡಿ ಒಂದನೇ ತರಗತಿಯಲ್ಲಿ ಐದು ಸರಿ ಫೇಲ್ ಆಗಿ ದೈವಾನುಗ್ರಹದಿಂದ ಲಾವಣಿ ಪದದ ಮೂಲಕ ಸುಮಾರು ಈ ಕಾರ್ಯಕ್ರಮವನ್ನು ಸೇರಿ 16032 ಕಾರ್ಯಕ್ರಮಗಳನ್ನು ನೀಡಿದ್ದೇನೆ ನಾನು ನಮ್ಮ ಗ್ರಾಮದಲ್ಲಿ ಒಂದು ವರ್ಷಕ್ಕೆ 15 ರೂಪಾಯಿ ಸಂಬಳ ಇದ್ದು ಐದು ವರ್ಷ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ನಮ್ಮ ಗ್ರಾಮದಲ್ಲಿ ನಾಟಕ ತಂಡದ ಮೂಲಕ ಹಾಸ್ಯ ಪಾತ್ರವನ್ನು ನೀಡಿದರು ಅಲ್ಲಿಂದ ಪ್ರಾರಂಭವಾದ ಕಾರ್ಯಕ್ರಮ ಲಾವಣಿ ಪದದ ಮೂಲಕ ಪ್ರಾರಂಭಗೊಂಡು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಕಾರ್ಯಕ್ರಮ ನೀಡುತ್ತಾ ಬಂದಿದ್ದೇನೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿ ಗಳಲ್ಲಿ ಜನಪದ ನಶಿಸಿ ಹೋಗುತ್ತಿದೆ ಆದರೆ ಯುವಕರು ಇಂತಹ ಕಾರ್ಯಕ್ರಮಕ್ಕೆ ಮಾಡುತ್ತಿರುವುದು ಒಳ್ಳೆಯ ಕೆಲಸ 1982. ಭೀಮಸಮುದ್ರ ಗ್ರಾಮದಲ್ಲಿ ತರಳುಬಾಳು ಹುಣ್ಣಿಮೆ ನಡೆದಿತ್ತು ಅಂದು ಈ ಗ್ರಾಮಕ್ಕೆ ಆಗಮಿಸಿದ್ದನು ಸಿರಿಗೆರೆ ತರಳುಬಾಳು ಮಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜೊತೆಯಲ್ಲಿ ಸುಮಾರು 20 ವರ್ಷಗಳ ಕಾಲ ತರಳುಬಾಳು ಕಾರ್ಯಕ್ರಮದಲ್ಲಿ ವೇದಿಕೆ ಕೊಟ್ಟು ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಬಜನಾ ಕುಮಟದಲ್ಲಿ ಕಾರ್ಯಕ್ರಮಕ್ಕೆ ಸುಮಾರು 19 ತಂಡಗಳು ಪಾಲ್ಗೊಂಡಿದ್ದವು 7:00 ಗಂಡ ಯಿಂದ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಸುಮಾರು 2000ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸಮಯೋಜಕರಾದ ಲೋಕೇಶ್, ಧರ್ಮಸ್ಥಳ ಸಂಘದ ನಿರ್ದೇಶಕರಾದ ಕಮಲೇಶ್ ,ಸಂಘದ ವ್ಯವಸ್ಥಾಪಕರಾದ ಚಂದ್ ರವಿಚಂದ್ರ ಗ್ರಾಮದ ಉದ್ಯಮಿಗಳು ಹಾಗೂ ಕೃಷಿಕರಾದ ಬಿಟಿ ಪುಟ್ಟಪ್ಪ, BT ಶಂಕ್ರಮೂರ್ತಿ, ಸಾಸಲು ದೇವಕುಮಾರ್, ಶಾಂತಲಾ ಬಿ ಟಿ, ವೀರೇಶ್ ಟಿ ಜಿ ,ಅರುಣ್ ಕುಮಾರ್, ಶರತ್ ಪಟೇಲ್ ,ಡಿ ಜಿ ಮಲ್ಲಿಕಾರ್ಜುನ್
Views: 26