ಸಜ್ಜನಕೆರೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ.

ಸಜ್ಜನಕೆರೆ/ಚಿತ್ರದುರ್ಗ: ಜ.18

ದಿನಾಂಕ 17/01/2026ರ ಶನಿವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ವಿಶೇಷ ಮಾಹಿತಿ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಮಾತನಾಡಿ ಪ್ರತಿಯೊಬ್ಬರೂ ವಾಹಗಳನ್ನು ಚಲಾಯಿಸುವಾಗ ಸ್ವಯಂ ಶಿಸ್ತು ಮತ್ತು ಜವಾಬ್ದಾರಿಯೊಂದಿಗೆ ನಿಧಾನಗತಿಯಲ್ಲಿ ರಸ್ತೆ ನಿಯಮಗಳ ಪಾಲನೆಯೊಂದಿಗೆ ವಾಹನ ಅಪಘಾತಗಳನ್ನು ಕಡಿಮೆ ಮಾಡಿ ನಮ್ಮ ಹಾಗೂ ಇತರರ ಜೀವನವನ್ನು ಸುರಕ್ಷಿತವಾಗಿರಿಸೋಣ ಎಂದು ಮಕ್ಕಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು.

ದೈಹಿಕ ಶಿಕ್ಷಕರಾದ ಸತೀಶ್ ರಸ್ತೆ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳು ರಸ್ತೆ ದಾಟುವ ಮುಂಚೆ ನಿಂತು ಬಲಕ್ಕೆ-ಎಡಕ್ಕೆ-ಮತ್ತೊಮ್ಮೆ ಬಲಕ್ಕೆ ನೋಡಿ, ಸುರಕ್ಷಿತವೆಂದು ಖಚಿತಪಡಿಸಿಕೊಂಡು ಮಾತ್ರ ದಾಟಿಬೇಕು ಚಿಕ್ಕ ಮಕ್ಕಳಿಗೆ ರಸ್ತೆ ನಿಯಮಗಳು ಅರ್ಥವಾಗದ ಕಾರಣ ಸಾಧ್ಯವಾದಷ್ಟು ಹಿರಿಯ ಮಾರ್ಗದರ್ಶನದಲ್ಲಿ ರಸ್ತೆಯಲ್ಲಿ ನಡೆದಾಡುವುದು ಸೂಕ್ತ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಯೋಗ ಚಿಕಿತ್ಸಕ ರವಿ ಕೆ.ಅಂಬೇಕರ್ ಮಾತನಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಒಂದು. ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.ರಸ್ತೆ ಅಪಘಾತಗಳನ್ನು ನೋಡಿದಾಗ ಮೊಬೈಲ್ ಗಳಲ್ಲಿ ವೀಡಿಯೊ ಮಾಡದೆ ಜವಾಬ್ದಾರಿಯುತ ನಾಗರೀಕರಾಗಿ ನಾವು ಅಪಘಾತವಾದ ವಾಹನದಲ್ಲಿರುವವರಿಗೆ ಅಗತ್ಯ ಸಹಾಯ ಮಾಡಬೇಕು ತಕ್ಷಣಕ್ಕೆ 108 ಆಂಬುಲೆನ್ಸ್ ಹಾಗೂ 102 ತುರ್ತು ಪೋಲಿಸ್ ಸಹಾಯ ಸಂಖ್ಯೆಗೆ ಕರೆಮಾಡಬೇಕು ರಕ್ತಸ್ರಾವವವಾಗುತ್ತಿದ್ದರೆ ಆ ಜಾಗಕ್ಕೆ ಬಿಗಿಯಾಗಿ ಬಟ್ಟೆಯನ್ನು ಸುತ್ತಿ ರಕ್ತಸ್ರಾವ ಆಗುದನ್ನು ತಪ್ಪಿಸಿ, ಯಾವುದೇ ಕಾರಣಕ್ಕೂ ತಕ್ಷಣಕ್ಕೆ ನೀರನ್ನು ಕುಡಿಸಬೇಡಿ ಅಪಘಾತಕ್ಕೊಳಗಾದವರ ಕುತ್ತಿಗೆ ಮತ್ತು ಸೊಂಟಭಾಗದ ಬಟ್ಟೆಗಳನ್ನು ಸಡಿಲಮಾಡಿ ಆಂಬುಲೆನ್ಸ್ ಬರುವವರೆಗೂ ಸರಾಗ ಉಸಿರಾಟವಾಗುವಂತೆ ನೋಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಇದೇ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ಸಹಶಿಕ್ಷಕಿ ಶ್ರೀಲಕ್ಷ್ಮೀ ರಸ್ತೆ ಸುರಕ್ಷತಾ ಪ್ರತಿಜ್ಞಾವಿಧಿ ಬೊಧಿಸಿದರು ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ,ಅನಸೂಯ ನಿರ್ಮಲಮ್ಮ, ಕೆಇಬಿ ರವಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗಪ್ಪ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Views: 53

Leave a Reply

Your email address will not be published. Required fields are marked *