ಮಹಿಳಾ ರಕ್ಷಣೆಗೆ ಪ್ರತ್ಯೇಕ ವೇದಿಕೆ ಅಗತ್ಯ: ಎಎಪಿ ಜಿಲ್ಲಾಧ್ಯಕ್ಷ ಜಗದೀಶ್.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜ. 22 

ಇತ್ತೀಚಿನ ದಿನಮಾನದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ.  ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ನೊಂದ ಮಹಿಳೆಯರಿಗೆ ನ್ಯಾಯವನ್ನು ಕೊಡಿಸುವ ದಿಸೆಯಲ್ಲಿ ಮಹಿಳೆಯರಿಗೆ ರಕ್ಷಣೆಯನ್ನು ನೀಡುವ ವೇದಿಕೆಯ ಅಗತ್ಯ ಇದೆ ಇದನ್ನು ಪ್ರಾರಂಭಿಸುವಂತೆ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಜಗದೀಶ್ ಪ್ರಗತಿಪರ ಚಿಂತಕರಲ್ಲಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜ ದಲ್ಲಿ ಮಹಿಳೆಯರ ಮೇಲೆ ನಿರಂತರಾಗಿ ದೈಹಿಕವಾಗಿ ಮಾನಸಿಕವಾಗಿ ರ್ದರ್ಜನ್ಯ ನಡೆಯುತ್ತಿದೆ, ಇದನ್ನು ಅನುಭವಿಸಿದ ಹಲವಾರು ಜನತೆ ದೂರನ್ನು ನೀಡಲು ಮುಂದಾಗುವುದಿಲ್ಲ ಆದರೆ ಇನ್ನೂ ಕೆಲವರು ಧೈರ್ಯದಿಂದ ದೂರನ್ನು ನೀಡುವುದರ ಮೂಲಕ ನ್ಯಾಯವನ್ನು ಪಡೆಯಲು ಮುಂದಾಗುತ್ತಾರೆ. ಆದರೆ ನ್ಯಾಯಾ ಸಿಗುವುದು ಕಡಿಮೆ, ಈ ಹಿನ್ನಲ್ಲೆಯಲ್ಲಿ ಜಿಲ್ಲೆಯಲ್ಲಿ ಪ್ರಗತಿಪರ ಚಿಂತಕರಾದ ಮಹಿಳೆಯರು ತಮ್ಮ ರಕ್ಷಣೆಗೆ ತಾವೇ ಮುಂದಾಗಬೇಕಿದೆ, ಒಂದು ವೇದಿಕೆಯನ್ನು ನಿರ್ಮಾಣ ಮಾಡುವುದರ ಮೂಲಕ ನೊಂದ ಮಹಿಳೆಯರಿಗೆ ನ್ಯಾಯವನ್ನು ಒದಗಿಸುವ ಕಾರ್ಯಕ್ಕೆ ಮುಂದಾಗುವಂತೆ ಕರೆ ನೀಡಿದರು.

ಕಳೆದ 8-10 ದಿನಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ರಾಜಕಾರಣಿಯೂರ್ವರು ಮಹಿಳಾ ಅಧಿಕಾರಿ ಮೇಲೆ ವಿನಾ ಕಾರಣ ಮಾತಿನ ದೌರ್ಜನ್ಯವನ್ನು ನಡೆಸಿದ್ದಾರೆ. ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವ ಅಧಿಕಾರಿಯೊರ್ವರು ತಮ್ಮ  ಕಚೇರಿಯಲ್ಲಿಯೇ ಮಹಿಳೆಯ ಮೇಲೆ ದೌರ್ಜನ್ಯವನ್ನು ಎಸೆಗಿದ್ದಾರೆ. ಇದರ ವಿರುದ್ದ ಮಹಿಳೆಯರು ಪ್ರತಿಭಟನೆಯನ್ನು ನಡೆಸುವುದರ ಮೂಲಕ ಇಂತಹ ವ್ಯಕ್ತಿಗಳಿಗೆ ತಕ್ಕ ಪಾಠವನ್ನು ಕಲಿಸಬೇಕಿದೆ. ಇದ್ದಲ್ಲದೆ ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಸೇರಿದಂತೆ ಇತರೆ ದೌರ್ಜನ್ಯಗಳು ನಡೆದಾಗ ಅದನ್ನು ಎದುರಿಸುವ ವೇದಿಕೆಯೊಂದು ಅನಿವಾರ್ಯವಾಗಿದೆ. ಇದನ್ನು ಜಿಲ್ಲೆಯ ಪ್ರಗತಿಪರ ಮಹಿಳೆಯರು ಸ್ಥಾಪನೆ ಮಾಡುವುದರ ಮೂಲಕ ಮಹಿಳೆಯರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.  

ಇಂದಿನ ದಿನಮಾನದಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ, ಅವರಿಗೆ ರಕ್ಷಣೆಯನ್ನು ನೀಡುವಂತ ಕಾರ್ಯವನ್ನು ಮಾಡುತ್ತಿಲ್ಲ, ಇದೇ ರೀತಿ ನಡೆದರೆ ಮುಂದಿನ ದಿನಮಾನದಲ್ಲಿ ಹೆಣ್ಣು ಹುಟ್ಟುವುದೆ ಬೇಡ ಎನ್ನುವಂತ ವಾತಾವರಣ ನಿರ್ಮಾಣವಾಗುತ್ತದೆ, ನಮ್ಮನ್ನು ಆಳುವ ಸರ್ಕಾರಗಳು ಜನತೆ ಅಗತ್ಯವಾದ ರಕ್ಷಣೆಗೆ ಅಗತ್ಯವಾಗಿ ಬೇಕಾದ ಕಾಯ್ದೆಗಳನ್ನು ಜಾರಿ ಮಾಡುವುದು ಬಿಟ್ಟು ತಮಗೆ ಅನುಕೂಲವಾಗುವಂತೆ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ಮುಂದಾಗಿದೆ, ದ್ವೇಷದ ಭಾಷಣ ಮಾಡಿದರೆ ಅದನ್ನು ತಡೆಯುವಂತ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ, ಇದರ ಉಪಯೋಗ ರಾಜಕಾರಣಿಗಳು ಮಾತ್ರ ಆಗುತ್ತದೆ ಸಾಮಾನ್ಯ ಜನತೆಗೆ ಇದರ ಉಪಯೋಗ ಇಲ್ಲ ಜನತೆಯ ಅಭೀವೃದ್ದಿಯ ಬಗ್ಗೆ ಚಿಂತನೆಯನ್ನು ನಡೆಸಬೇಕಿದೆ ಇಂತಹ ಕಾಯ್ದೆಯನ್ನು ಜಾರಿ ಮಾಡುವುದನ್ನು ಸರ್ಕಾರಗಳು ಬಿಡಬೇಕಿದೆ ಎಂದು ಸರ್ಕಾರಕ್ಕೆ ಜಗದೀಶ್ ಕಿವಿ ಮಾತು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ಮಹಿಳಾಂ ಘಟಕದ ಜಿಲ್ಲಾಧ್ಯಕ್ಷರಾದ ಜ್ಯೋತಿ ಮಾತನಾಡಿ, ಪೋಲಿಸ್ ಇಲಾಖೆಯಲ್ಲಿ ಉತ್ತನವಾಧ ಸ್ಥಾನದಲ್ಲಿರುವ ವ್ಯಕ್ತಿಯೂರ್ವರು ತಮ್ಮ ಕಚೇರಿಯಲ್ಲಿ ಮಹಿಳೆಯ ಬಗ್ಗೆ ಅಸಭ್ಯವಾಗಿ ವರ್ತಿಸಿ ರುವುದು ಎಲ್ಲಾ ಸರ್ಕಾರಿ ನೌರಕರು ತಲೆ ತಗ್ಗಿಸುವಂತ ಕೆಲಸವಾಗಿದೆ. ಇದನ್ನು ರಾಜ್ಯದ ಎಲ್ಲಾ ಮಹಿಳೆಯರು ಖಂಡಿಸಬೇಕಿದೆ, ಹೆಸರಿನಲ್ಲಿ ರಾಮ ಎಂದು ಇದ್ದರೂ ಸಹಾ ಮಾಡಿರುವ ಕೆಲಸ ಮಾತ್ರ ರಾವಣನದ್ದಾಗಿದೆ, ಅದೂ ಸಹಾ ರಾಷ್ಟ್ರಧ್ವಜದ ಕೆಳಗೆ ಇಂತಹ ದುಷ್ಟ ಕೃತ್ಯ ಮಾಡಿದ್ದಾರೆ. ಇವರನ್ನು ಕೆಲಸದಿಂದಲೇ ತೆಗೆಯಬೇಕಿದೆ ಇಂತಹವರ ಸೇವೆ ನಮಗೆ ಅಗತ್ಯ ಇಲ್ಲ, ಬೇರೆ  ಕೆಲಸ ಇಲ್ಲದೆ ನೂರಾರು ಜನ ಇದ್ದಾರೆ ಅವರಿಗೆ ಉದ್ಯೋಗವನ್ನು ನೀಡಬೇಕಿದೆ ಎಂದರು. 

ಗೋಷ್ಟಿಯಲ್ಲಿ ರಾಮಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಹಾಲಪ್ಪ, ವರಲಕ್ಷ್ಮೀ, ಜಂಟಿ ಕಾರ್ಯದರ್ಶಿ ದಾನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Views: 60

Leave a Reply

Your email address will not be published. Required fields are marked *