ಚೋರ್ಲಾ ಘಾಟ್: 400 ಕೋಟಿ ಮಹಾ ದರೋಡೆ.

ಬೆಳಗಾವಿ: ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂಪಾಯಿ ಮಹಾ ದರೋಡೆ ತಡವಾಗಿ ಬೆಳಕಿಗೆ ಬಂದ ಹೈ ವೋಲ್ಟೇಜ್ ಪ್ರಕರಣ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾರಿ ಸಂಚಲನ ಮೂಡಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಸಿನಿಮೀಯಾ ರೀತಿಯಲ್ಲಿ ಬರೋಬ್ಬರಿ 400 ಕೋಟಿ ರೂ ಮೌಲ್ಯದ ನಗದು ದರೋಡೆ ನಡೆದಿದ್ದು, ಈ ಸಂಬಂಧ ಅಂತರಾಜ್ಯ ಪೊಲೀಸ್ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸುಮಾರು ಎರಡುವರೆ ತಿಂಗಳ ಹಿಂದೆ ನಡೆದ ಈ ಕೃತ್ಯವು ಮಹಾರಾಷ್ಟ್ರ ಪೊಲೀಸರು ಬೆಳಗಾವಿ ಪೊಲೀಸರಿಗೆ ಬರೆದ ಪತ್ರದ ಮೂಲಕ ಈಗ ಜಗ ಜ್ಜಾಹಿರಾಗಿದೆ.

ಘಟನೆ ಬೆಳಕಿಗೆ ಬಂದದ್ದು ಹೇಗೆ?

ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನವರಿ 6ರಂದು ಬೆಳಗಾವಿ ಎಸ್ ಪಿ ಕೆ ರಾಜಾರಾಮನ್ ಅವರಿಗೆ ಪತ್ರ ಬರೆದಿದ್ದರು, ಈ ಪತ್ರದಲ್ಲಿ ಅಕ್ಟೋಬರ್ 2025ರಲ್ಲಿ ನಡೆದ ದರೋಡೆಯ ವಿವರಗಳನ್ನು ಹಂಚಿಕೊಳ್ಳಲಾಗಿತ್ತು. ಗೋವಾದಿಂದ ಕರ್ನಾಟಕದ ಮಾರ್ಗವಾಗಿ ಸಾಗಿಸುತ್ತಿದ್ದ ಎರಡು ಕಂಟೈನರ್ ಗಳನ್ನು ಅಡ್ಡಗಟ್ಟಿದ್ದ ದರೋಡೆಕೋರರು ಅದರಲ್ಲಿ ಸಂಗ್ರಹಿಸಿಟ್ಟಿದ್ದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ದರೋಡೆಯ ಹಿಂದಿನ ಕರಾಳ ಕಥೆ

ದೂರಿನ ಪ್ರಕಾರ ಈ ಘಟನೆ 2025ರ ಅಕ್ಟೋಬರ್ 16ರಂದು ನಡೆದಿದೆ. ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ ಹಣ ಇದಾಗಿದೆ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅಕ್ಟೋಬರ್ 22ರಂದು ನಾಸಿಕ್ ನಲ್ಲಿ ನಡೆದ ಸಂದೀಪ್ ಪಾಟೀಲ್ ಎಂಬುವವರ ಅಪಹರಣದ ಮೂಲಕ. ಅಪಹರಣಕಾರರು ಸಂದೀಪ್ ಅವರಿಗೆ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ್ದರು. ಸಂದೀಪ್ ಅವರು ನೀಡಿದ ದೂರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಚೋರ್ಲಾ ಘಾಟ್ ದರೋಡೆಯ ಸುಳಿವು ಸಿಕ್ಕಿದೆ.

ಐವರು ಆರೋಪಿಗಳ ಬಂಧನ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಹಾರಾಷ್ಟ್ರದ ನಾಸಿಕ್ ಗ್ರಾಮೀಣ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಯೇಶ್ ಕದಂ, ವಿಶಾಲ್ ನಾಯ್ಡು, ಸುನಿಲ್ ದುಮಾನ್, ವಿರಾಟ್ ಗಾಂಧಿ ಜನಾರ್ದನ್ ಧಾಯೇಗುಡೆ ಮುಂಬೈ ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ತಲೆಮರಿಸಿಕೊಂಡಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ ಹಳೆಯ ನೋಟುಗಳ ಸಾಗಾಟದ ಸಂಖ್ಯೆ ಪೊಲೀಸ್ ಮೂಲಗಳ ಪ್ರಕಾರ ಕಂಟೇನರ್ ನಲ್ಲಿ ಸಾಗಿಸುತ್ತಿದ್ದ ಹಣವು ಚಲಾವಣೆಯಿಂದ ಹಿಂಪಡೆಯಲಾದ 2000 ಮುಖಬೆಲೆಯ ನೋಟುಗಳಾಗಿವೆ ಎಂಬ ಸಂಖ್ಯೆ ವ್ಯಕ್ತವಾಗಿದೆ ಗೋವಾದಿಂದ ಕರ್ನಾಟಕದ ಪ್ರಮುಖ ದೇವಸ್ಥಾನ ಒಂದಕ್ಕೆ ಈ ಹಣವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು ನಕಲಿ ಖಾತೆಗಳನ್ನು ಸೃಷ್ಟಿಸಿ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಂಚು ನಡೆದಿರುವ ಸಾಧ್ಯತೆ ಇದೆ ಕರ್ನಾಟಕ ಪೊಲೀಸರ ಕ್ರಮವೇನು ಘಟನೆ ನಡೆದ ಸ್ಥಳ ಬೆಳಗಾವಿ ವ್ಯಾಪ್ತಿಗೆ ಬರುವುದರಿಂದ ಖಾನಾಪುರ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡವು ಸ್ಥಳ ಪರಿಶೀಲನೆ ನಡೆಸಿದೆ ಅಪರಾಧ ನಿಯಂತ್ರಣಕ್ಕೆ ಚೋರ್ಲ ಘಾಟ್ ನಲ್ಲಿ ಸಿಸಿಟಿವಿ ಅಳವಡಿಸಲು ನಿರ್ಧರಿಸಲಾಗಿದೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆಸೆ ಮಹಾರಾಷ್ಟ್ರ ಪೊಲೀಸರ ತನಿಖೆಗೆ ರಾಜ್ಯ ಪೊಲೀಸರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ರಾಜಕೀಯ ಹಾಗೂ ಆರ್ಥಿಕ ಕುಲಗಳ ಹೆಸರು ಕೇಳಿ ಬರುವ ಸಾಧ್ಯತೆ ಇದ್ದು ಮೂರು ರಾಜ್ಯಗಳ ಪೊಲೀಸರು ತನಿಕೆಯನ್ನು ಚುರುಕುಗೊಳಿಸಿದ್ದಾರೆ.

Views: 1

Leave a Reply

Your email address will not be published. Required fields are marked *