ಪದೇಪದೇ ಶೀತವಾಗುತ್ತದೆಯೇ ಇದು ಸಾಮಾನ್ಯವಾಗಿ ಕಾಯಿಲೆಯ ಮುನ್ಸೂಚನೆ ಇರಬಹುದು ಹವಾಮಾನ ಬದಲಾವಣೆ ಬದಲಾದಾಗ ಅಥವಾ ಮಳೆಗಾಲದಲ್ಲಿ ಶೀತ ಕಾಣಿಸಿಕೊಳ್ಳುವುದು ಸಹಜ ಆದರೆ ನಮಗೆ ಪ್ರತಿ ತಿಂಗಳು ಅಥವಾ ಪದೇಪದೇ ಶೀತವಾಗುತ್ತಿದ್ದರೆ, ಅದನ್ನು ಕೇವಲ ಸಾಮಾನ್ಯ ನೆಗಡಿ ಎಂದು ನಿರ್ಲಕ್ಷಿಸಬೇಡಿ, ಏಕೆಂದರೆ ಇದು ದೇಹದಲ್ಲಿನ ಗಂಭೀರ ಅನಾರೋಗ್ಯದ ಮುನ್ಸೂಚನೆಯಾಗಿರಬಹುದು.
ಪದೇ ಪದೇ ಶೀತವಾಗಲು ಪ್ರಮುಖ ಕಾರಣಗಳು
1. ಅಲರ್ಜಿಕ್ ರಿನಿಟಿಸ್ : ಹವಮಾನ ಬದಲಾದಾಗ ವಿವಿಧ ವೈರಸ್ಗಳು ಸಕ್ರಿಯವಾಗಿ ದೇಹದ ಮೇಲೆ ದಾಳಿ ಮಾಡುತ್ತವೆ ಇದು ಅಲರ್ಜಿಕ್ ರಿನಿಟಿಸ್ ಕಾರಣವಾಗಬಹುದು ಇದರ ಲಕ್ಷಣಗಳೆಂದರೆ ನಿರಂತರ ಸೀನುವಿಗೆ, ಮೂಗು ಸೋರುವಿಕೆ ಮತ್ತು ಮೂಗಿನಲ್ಲಿ ತುರಿಕೆ.
2. ಸೈನಸ್ ಸಮಸ್ಯೆ: ಸೈನಸ್ ಸಮಸ್ಯೆ ಇದ್ದವರಲ್ಲಿ ನೆಗಡಿ ಪದೇ ಪದೇ ಕಾಣಿಸಿಕೊಳ್ಳುತ್ತದೆ ಇದು ದೀರ್ಘಾವಧಿಯ ಕಾಲದವರೆಗೆ ಕಾಡಿದರೆ ಔಷಧಿ ಅಥವಾ ಶಸ್ತ್ರ ಚಿಕಿತ್ಸೆಯ ಅಗತ್ಯವಿರಬಹುದು ಆದ್ದರಿಂದ ವೈದ್ಯರ ಸಲಹೆ ಪಡೆಯುವುದು ಪದ್ಯಗತ್ಯ
3.ದುರ್ಬಲ ರೋಗನಿರೋಧಕ ಶಕ್ತಿ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೊಂದಿದ್ದರೆ ವೈರಸ್ ಗಳು ಸುಲಭವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತವೆ ಇದರಿಂದಾಗಿ ನೀವು ಆಗಾಗ ಶೀತಕ್ಕೆ ತುತ್ತಾಗುತ್ತೀರಿ ಈ ಸಮಸ್ಯೆಯನ್ನು ನಿವಾರಿಸಲು ಸಮತೋಲಿತ ಆಹಾರ ಸೇವನೆ ಮತ್ತು ಉತ್ತಮ ಜೀವನಶೈಲಿ ರೂಡಿಸಿಕೊಳ್ಳಬೇಕು.
ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
ಕೆಳಗಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
* ಸೀತವು 2-3 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ.
* ಶೀತದ ಜೊತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ.
* ಧ್ವನಿಯಲ್ಲಿ ಬದಲಾವಣೆ ಕಂಡು ಬಂದರೆ.
* ಆಗಾಗ ಜ್ವರ ಬರುತ್ತಿದ್ದರೆ.
ಮುನ್ನೆಚ್ಚರಿಕೆ ಕ್ರಮಗಳು:
-ಧೂಳು ಮತ್ತು ಹೊಗೆಯಿಂದ ಆದಷ್ಟು ದೂರವಿರಿ.
– ತಣ್ಣೀರು ಕುಡಿಯುವುದನ್ನು ಕಡಿಮೆ ಮಾಡಿ ಅಥವಾ ನಿಲ್ಲಿಸಿ.
– ಹವಾಮಾನ ಬದಲಾವಣೆಯ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
– ಧೂಮಪಾನದಿಂದ ದೂರವಿರು
Views: 0