ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಈ ಬೆನ್ನಲ್ಲೇ ಸಂಗೀತ ಪ್ರಿಯರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ ಇದೀಗ ತನ್ನ ಹೊಸ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೌದು, ‘ಸರಿಗಮಪ ಲಿಟಲ್ ಚಾಂಪ್ಸ್’ (Sa Re Ga Ma Pa Little Champs) ಸೀಸನ್ ಮತ್ತೆ ಆರಂಭವಾಗಲಿದ್ದು, ರಾಜ್ಯದಾದ್ಯಂತ ಪ್ರತಿಭಾವಂತ ಮಕ್ಕಳಿಗಾಗಿ ಹುಡುಕಾಟ ನಡೆಸಲಿದೆ. ಈ ಬಾರಿಯ ಸೀಸನ್ ವಿಶೇಷವಾಗಿ ಮಕ್ಕಳಿಗಾಗಿ ಮೀಸಲಾಗಿದ್ದು, 3 ವರ್ಷದಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ.
ಆಡಿಷನ್ ನಿಯಮಗಳೇನು? ಕರ್ನಾಟಕದ 31 ಜಿಲ್ಲೆಗಳಲ್ಲಿಯೂ ಆಡಿಷನ್ ಪ್ರಕ್ರಿಯೆ ನಡೆಯಲಿದೆ. ಭಾಗವಹಿಸಲು ಇಚ್ಛಿಸುವ ಮಕ್ಕಳು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ:
- ವಯಸ್ಸಿನ ಮಿತಿ: 3 ರಿಂದ 15 ವರ್ಷದ ಒಳಗಿರಬೇಕು.
- ಸಿದ್ಧತೆ: ಮಕ್ಕಳು ವಿಭಿನ್ನ ಶೈಲಿಯ 3 ಹಾಡುಗಳನ್ನು ಕಲಿತುಕೊಂಡು ಬರಬೇಕು.
- ದಾಖಲೆಗಳು: ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ವಿಳಾಸದ ಗುರುತಿನ ಚೀಟಿ (Address Proof) ಜೆರಾಕ್ಸ್ ತರುವುದು ಕಡ್ಡಾಯ.
- ಪ್ರಮುಖ ಸೂಚನೆ: ಈ ಆಡಿಷನ್‌ನಲ್ಲಿ ಭಾಗವಹಿಸಲು ಜೀ಼ ಕನ್ನಡ ವಾಹಿನಿಯು ಯಾವುದೇ ಶುಲ್ಕವನ್ನು (Free Audition) ಪಡೆಯುವುದಿಲ್ಲ. ಪ್ರತಿಭೆಗೆ ಮಾತ್ರ ಇಲ್ಲಿ ಮನ್ನಣೆ.
ನಿಮ್ಮ ಊರಿನಲ್ಲಿ ಆಡಿಷನ್ ಯಾವಾಗ? ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಫೆಬ್ರವರಿ 14 ರಿಂದ ಫೆಬ್ರವರಿ 25 ರವರೆಗೆ ಆಡಿಷನ್ ನಡೆಯಲಿದೆ. ದಿನಾಂಕಗಳ ವಿವರ ಈ ಕೆಳಗಿನಂತಿದೆ:
- ಫೆಬ್ರವರಿ 14 (ಶನಿವಾರ): ಶಿವಮೊಗ್ಗ, ಕೊಪ್ಪಳ ಮತ್ತು ತುಮಕೂರು.
- ಫೆಬ್ರವರಿ 15 (ಭಾನುವಾರ): ಬೆಂಗಳೂರು, ಬಳ್ಳಾರಿ ಮತ್ತು ಉಡುಪಿ.
- ಫೆಬ್ರವರಿ 16 (ಸೋಮವಾರ): ಮಂಗಳೂರು ಮತ್ತು ರಾಯಚೂರು.
- ಫೆಬ್ರವರಿ 17 (ಮಂಗಳವಾರ): ಚಿತ್ರದುರ್ಗ, ಯಾದಗಿರಿ ಮತ್ತು ಮಡಿಕೇರಿ.
- ಫೆಬ್ರವರಿ 18 (ಬುಧವಾರ): ದಾವಣಗೆರೆ ಮತ್ತು ಚಿಕ್ಕಮಗಳೂರು.
- ಫೆಬ್ರವರಿ 19 (ಗುರುವಾರ): ಹಾವೇರಿ ಮತ್ತು ಬೀದರ್.
- ಫೆಬ್ರವರಿ 20 (ಶುಕ್ರವಾರ): ಮಂಡ್ಯ, ಕಲುಬುರಗಿ ಮತ್ತು ಶಿರಸಿ.
- ಫೆಬ್ರವರಿ 21 (ಶನಿವಾರ): ಹಾಸನ, ವಿಜಯಪುರ ಮತ್ತು ಬೆಳಗಾವಿ.
- ಫೆಬ್ರವರಿ 22 (ಭಾನುವಾರ): ಮೈಸೂರು, ಬಾಗಲಕೋಟೆ ಮತ್ತು ಹುಬ್ಬಳ್ಳಿ.
- ಫೆಬ್ರವರಿ 23 (ಸೋಮವಾರ): ಗದಗ್.
- ಫೆಬ್ರವರಿ 24 (ಮಂಗಳವಾರ): ವಿಜಯನಗರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ.
- ಫೆಬ್ರವರಿ 25 (ಬುಧವಾರ): ಕೋಲಾರ ಮತ್ತು ರಾಮನಗರ.
ಗಾಯನದಲ್ಲಿ ಆಸಕ್ತಿಯಿರುವ ನಿಮ್ಮ ಮಕ್ಕಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಮಿಸ್ ಮಾಡದೇ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಜೀ ಕನ್ನಡ ವಾಹಿನಿಯ ಅಧಿಕೃತ ಸೋಶಿಯಲ್ ಮೀಡಿಯಾ ಪುಟಗಳನ್ನು ಪರಿಶೀಲಿಸಬಹುದು.