ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 15
ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಂ ಸಮುದಾಯವನ್ನು 2ಬಿಗೆ ಸೇರಿಸುವುದಾಗಿ ಭರವಸೆಯನ್ನು ನೀಡುತ್ತು ಅದರೆ ಸರ್ಕಾರ ಅಧಿಕಾರಕ್ಕೆ ಬಂದು 1000 ದಿನಗಳಾದರೂ ಸಹಾ ನಮ್ಮ ಬೇಡಿಕೆ ಈಡೇರಿಲ್ಲ ಶೀಘ್ರವಾಗಿ ನಮ್ಮ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಈಡೇರಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮುಸ್ಲಿಂ ಸಂಘ ಎಚ್ಚರಿಕೆಯನ್ನು ನೀಡಿದೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಎಲ್.ಎಸ್. ಬಷೀರ್ ಆಹ್ಮದ್ ಈ ಸಭೆಯಲ್ಲಿ ವಿಶೇಷವಾದ ವಿಷಯಗಳನ್ನು ಚರ್ಚೆ ಮಾಡಲಾಗುತ್ತದೆ. ಇದರಲ್ಲಿ ರಾಜ್ಯದ ವಿವಿಧೆಡೆಗಳಿಂದ ನಮ್ಮ ಸಮುದಾಯದ ಮುಖಂಡರು ಭಾಗವಹಿಸಿದ್ದಾರೆ. ಇದರಲ್ಲಿ ಸಮಾಜದ ಅರ್ಥಿಕ ರಾಜಕೀಯ ಸಮಾಜಿಕ ಪ್ರಗತಿಗೆ ಸಂಬಂಧಪಟ್ಟಂತೆ ಚರ್ಚೆಯನ್ನು ನಡೆಸಲಾಗಿದೆ. ನಮ್ಮನ್ನಾಳುವ ಸರ್ಕಾರ ಚುನಾವಣಾ ಪೂರ್ವದಲ್ಲಿ ನಮ್ಮ ಸಮುದಾಯವನ್ನು 2ಬಿಗೆ ತರುವಾದಾಗಿ ಪಕ್ಷದ ಮುಖಂಡರು ಭರವಸೆಯನ್ನು ನೀಡಿದ್ದರು, ಆದರೆ ಇದುವರೆವಿಗಾದರೂ ನಮ್ಮ ಭರವಸೆಯನ್ನು ಈಡೇರಿಸಿಲ್ಲ, ಇದ್ದಲ್ಲದೆ ಬೆಳಗಾಂ ಅಧಿವೇಶನದಲ್ಲಿ ದ್ವೇಷ ಭಾಷಣದ ಬಗ್ಗೆ ಕಾನೂನು ತಂದರು ಆದರೆ ಅದು ಇದುವರೆವಿಗೂ ಜಾರಿಯಾಗಿಲ್ಲ, ಅದನ್ನು ಸರ್ಕಾರ ಆಮೆಗತಿಯನ್ನು ಓಡಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ನಮ್ಮ ಸಮಾಜಕ್ಕೆ ನೀಡಿದ 2ಬಿ ಸೇರ್ಪಡೆಯ ಮೀಸಲಾತಿಯ ಭರವಸೆಯನ್ನು ಈಡೇರಿಸಬೇಕು,ರಾಜ್ಯದಲ್ಲಿ ದ್ವೇಷ ಭಾಷಣ ಕಾನೂನು ಜಾರಿಯಾಗಬೇಕು, ಸಮಾಜದಲ್ಲಿನ ಎಲ್ಲರು ಸರ್ಕಾರದ ನಡೆಯನ್ನು ಗಮನಿಸುತ್ತಿದ್ದಾರೆ.
ಸರ್ಕಾರ ಇದೇ ಮುಂದುವರೆಸಿದರೆ ಮುಂದಿನ ದಿನದಲ್ಲಿ ಬರುವಂತ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿದ್ದು, ಈ ಸಮಾಜ ಇಲ್ಲಿಯವರೆಗೂ ಶಾಂತಿಯಿಂದ ಸರ್ಕಾರದ ನಡೆಯನ್ನು ವೀಕ್ಷಿಸಲಾಗುತ್ತಿದೆ, ಇದನ್ನೇ ಮುಂದುವರೆಸಿದರೆ ಇದರ ಪರಿಣಾಮವನ್ನು ಮುಂದಿನ ದಿನದಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಅವರು, ಇದರಿಂದ ಬೇರೆಯವರಿಗೆ ಅವಕಾಶವನ್ನು ನೀಡಿದಂತೆ ಆಗುತ್ತದೆ ಸರ್ಕಾರಕ್ಕೆ ಒತ್ತಡ ಇದ್ದರೂ ಸಹಾ ನಮ್ಮ ಸಮುದಾಯವನ್ನು ಸಮಾನ್ಯ ಕ್ಷೇತ್ರದಿಂದ 2ಬಿಗೆ ಸೇರಿಸಬೇಕು, ರಾಜ್ಯದಲ್ಲಿನ ವಿರೋಧ ಪಕ್ಷ ರಾಜ್ಯದಲ್ಲಿನ ಮುಸ್ಲಿಂರ ಬಗ್ಗೆ ಪ್ರೀತಿ ಇಲ್ಲವಾಗಿದೆ, ಅವರ ಮೇಲಿನ ದ್ವೇಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ 136 ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದ ಅವರು ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟವನ್ನು ರೂಪಿಸಲಾಗುವುದು ಎಂದರು.
ಚಿತ್ರದುರ್ಗ ವಕ್ರ್ಛ ಮಂಡಳಿಗೆ ಜಾಕಿರ್ ಹುಸೇನ್ ರವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ನಮ್ಮ ಸಂಘ ತೀರ್ಮಾನ ಮಾಡಿದೆ ಇದರ ಬಗ್ಗೆ ಶೀಘ್ರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗುವುದು, ರಾಜ್ಯ ವ್ಯಾಪ್ತಿ ಪ್ರವಾಸ ಮಾಡುವುದರ ಮೂಲಕ ನೂತನವಾಗಿ ಕಾರ್ಯಕಾರಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು, ಗ್ರಾಮಾಂತರ ಪ್ರದೇಶದಿಂದ ಸಂಘಟನೆಯನ್ನು ಚುರುಕುಗೊಳಿಸಲಾಗುವುದು, ಸಮಾಜಕ್ಕೆ ರಾಜಕೀಯ ಶಕ್ತಿಯನ್ನು ದೂರಕಿಸಿಕೊಡುವುದು ಅಗತ್ಯವಾಗಿದೆ ಎಂದರು.
ಕರ್ನಾಟಕ ಮುಸ್ಲಿಂ ಸಂಘದ ಕಾರ್ಯಾಧ್ಯಕ್ಷರಾದ ಜಾಕಿರ್ ಹುಸೇನ್ ಮಾತನಾಡಿ, ಚುನಾವಣೆಯ ಸಮಯ ದಲ್ಲಿ ನಮ್ಮ ಸಮುದಾಯವನ್ನು ರಾಜಕೀಯ ಪಕ್ಷಗಳು ಮತಗಳನ್ನು ಪಡೆದ ಅಧಿಕಾರಕ್ಕೆ ಬರುತ್ತಾರೆ ತದ ನಂತರ ನಮಗೆ ನೀಡಿದ ಆಶ್ವಾಸನೆಗಳನ್ನು ಮರೆಯುತ್ತಾರೆ. ರಾಜ್ಯದಲ್ಲಿನ ಶೇ. 85 ರಿಂದ 90 ರಷ್ಟು ನಮ್ಮ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದ್ದಾರೆ ನಮ್ಮ ಮತಗಳಿಂದ ಅಧಿಕಾರವನ್ನು ಪಡೆದ ಕಾಂಗ್ರೆಸ್ ಪಕ್ಷ ನಮಗೆ ನೀಡಿದ ಭರವಸೆಯನ್ನು ಮರೆತ್ತಿದೆ ನಮ್ಮನ್ನು ಬರೀ ಮತ ಹಾಕಲಿಕೆ ಮಾತ್ರ ಬಳಕೆ ಮಾಡುತ್ತಿರುವುದು ವಿಷಾಧದ ಸಂಗತಿಯಾಗಿದೆ. ನಮಗೆ ಸೌಲಭ್ಯ ನೀಡುವಲ್ಲಿ ಹಿನ್ನಡೆಯಾಗಿದೆ. ನಮಗೆ ಮೀಸಲಾಯಿತಿಯನ್ನು ನೀಡದಿದ್ದರೆ ಮುಂದಿನ ದಿನದಲ್ಲಿ ವಿಧಾನಸೌಧವನ್ನು ಮುತ್ತಿಗೆ ಹಾಕುವುದರ ಮೂಲಕ ನಮ್ಮ ಪಾಲಿನ ಹಕ್ಕನ್ನು ಪಡೆಯಬೇಕಾಗುತ್ತದೆ ಎಂದರು.
ಸಭೆಯಲ್ಲಿ ಮುನ್ನಾ, ಆಜೀಬ್, ಆಫಿಜ್, ಶಮಾ, ಇರ್ಫಾನ್ವುಲ್ಲಾ, ರಿಜ್ವಾನ್, ರಫೀಕ್, ಮುಕಾಂದರ್ ಸೇರಿದಂತೆ ಇತರರು ಭಾಗವಹಿಸಿದ್ದರು.