ಸಂತ ಶ್ರೀ ಸೇವಾಲಾಲ್ ಮಹಾರಾಜ್ ಜಯಂತಿ ಫೆ.26ರಂದು: ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಸಿದ್ಧತೆ.

ಚಿತ್ರದುರ್ಗ ಫೆ. 23

ಬಂಜಾರ(ಲಂಬಾಣಿ) ಸಮಾಜ (ರಿ) ಇವರ ವತಿಯಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ರವರ 287 ನೇ ಜಯಂತೋತ್ಸವ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. 85%ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಪೆ. 26 ರ ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ(ಲಂಬಾಣಿ) ಸಮಾಜ ಅಧ್ಯಕ್ಷರಾದ ಎಮ್ ಸತೀಶ್ ಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ಬಂಜಾರ್ ಭವನದವರೆಗೆ ಮೆರವಣಿಗೆ ನಡೆಯಲಿದ್ದು ಇದನ್ನುಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು.ಪಿ ಉದ್ಘಾಟಿಸಲಿರುವರು.

ವೇದಿಕೆ ಕಾರ್ಯಕ್ರಮವೂ ಬಿ.ಡಿ.ರಸ್ತೆಯಲ್ಲಿನ ಬಂಜಾರ ಭವನದಲ್ಲಿ ನಡೆಯಲಿದ್ದು, ಮಾಜಿ ಉಪ ಮುಖ್ಯ ಮಂತ್ರಿಗಳು ಸಂಸದರಾದ ಗೋವಿಂದ ಎಂ. ಕಾರಜೋಳ ಹಾಗೂ ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ರವರು “ಸಂತ ಶ್ರೀ ಸೇವಾಲಾಲ್ ಮಹಾರಾಜ್ ರವರ ಪೋಟೋಗೆ ಪುಷ್ಪಾಚನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ದಿವ್ಯ ಸಾನಿದ್ಯವನ್ನು ಬಾಯಾಗಡ್‍ನ ಧರ್ಮದರ್ಶಿಗಳಾದ ಶ್ರೀ ಸಂಗನಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ (ನಿ)ದ ಅಧ್ಯಕ್ಷರಾದ ಎನ್.ಜಯದೇವನಾಯ್ಕ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹಾಗೂ ನಗರ ಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜು,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲ್ಲಿಕಾರ್ಜುನ್, ಲೋಕಾಯುಕ್ತ ಡಿವೈಎಸ್‍ಪಿ ಎನ್ ಮೃತ್ಯುಂಜಯ ಪೋಲೀಸ್ ಇನ್ಸ್‍ಪೆಕ್ಟರ್ ಹಾಗೂ ರಾಷ್ಟ್ರಪತಿಯಿಂದ ಶ್ಲಾಘನೀಯ ಸೇವಾಪದಕ ಪುರಸ್ಕೃತ ರಾದ ಬಾಲಚಂದ್ರ ನಾಯ್ಕ್, ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಹರೀಶ್ ನಾಯ್ಕಎಸ್‍ಆರ್‍ಎಸ್ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ರವಿ ಎಸ್ ನ್ಯಾಯವಾದಿಗಳಾದ ಬಿ ಕೆ ರಹಮತ್ ವುಲ್ಲಾ, ನಟರಾಜ್ ಹೊಳಲ್ಕೆರೆಯ ಬಾಲಾ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಧರ್ಮಾದಿಕಾರಿ ವೇದ ಬ್ರಹ್ಮ ಪುರೋಹಿತರು ಪುನಿತ್ ಶಾಸ್ತ್ರೀಜಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಗಿರೀಶ್ ಚಂದನಾಯ್ಡ್ ಕಾಂಗ್ರೆಸ್ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರು ಬಯಲು ಸೀಮೆ ಚಳ್ಳಕೆರೆಯ ಮಾಜಿ ನಿರ್ದೇಶಕರಾದ ಶ್ರೀಮತಿ ಟಿ ಗೀತಾಬಾಯಿ, ಹಿರಿಯೂರಿನ ನಗರಸಭೆ ಮಾಜಿ ಸದಸ್ಯರಾದ ಶ್ರೀಮತಿ ಅಂಬಿಕ ಪಿ ಪಿಆರ್‍ಡಿಯ ಮಧುಕರ್ ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಜುನಾಥ್ ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕರಾದ ಮಾರುತಿನಾಯ್ಕ, ತಾಂಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಗದೀಶ್‍ನಾಯ್ಕ ರಾಜ್ಯ ಉಪಾಧ್ಯಕ್ಷರು ಐಎನ್‍ಟಿಯುಸಿಯ ರಾಜ್ಯ ಉಪಾಧ್ಯಕ್ಷ ರಾದ ಜಾಕೀರ್ ಹುಸೇನ್ ಭಾಗವಹಿಸಲಿದ್ದಾರೆ. ಗೋಷ್ಟಿಯಲ್ಲಿ ರಮೇಶ್ ನಾಯ್ಕ್, ಸಾಗರ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *