ಗ್ರಾಮೀಣ ಆರೋಗ್ಯಕ್ಕೆ ಆಯುಷ್ ಒತ್ತು: 54 ಫಲಾನುಭವಿಗಳಿಗೆ ಉಚಿತ ತಪಾಸಣೆ ಮತ್ತು ಔಷಧ ವಿತರಣೆ.


ಚಿತ್ರದುರ್ಗ:ಫೆ.24
ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಆರೋಗ್ಯ ಮತ್ತು ಕ್ಷೇಮ ಮಂದಿರ ಜೆ ಎನ್ ಕೋಟೆ ಇವರುಗಳ ಸಹಕಾರದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಜೆ ಎನ್ ಕೋಟೆ ಇವರು ಆಯುಷ್ ಗ್ರಾಮ ಯೋಜನೆಯಡಿಯಲ್ಲಿ ತಾಲ್ಲೂಕಿನ ಪಲ್ಲವಗೆರೆ ಗ್ರಾಮದ ಗ್ರಾಮಸ್ಥರಿಗಾಗಿ ಉಚಿತ ಮಧುಮೇಹ ನಿಯಂತ್ರಣ ಚಿಕಿತ್ಸಾ ಶಿಬಿರ ಆಯೋಜಿಸಿದ್ದರು ಶಿಬಿರದಲ್ಲಿ ಮಧುಮೇಹದ ನಿಯಂತ್ರಣದ ಕೆಲವು ಪಥ್ಯ ಜೀವನಶೈಲಿ ಆಹಾರವಿಹಾರ, ವ್ಯಾಯಾಮ, ಯೋಗದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡಲಾಯಿತು ಹಾಗೂ ವಿವಿಧ ರೀತಿಯ ಆಯುರ್ವೇದದ ಕಷಾಯ ಹಾಗೂ ದೇಹಗಳನ್ನು ತಯಾರಿಸುವ ವಿಧಾನ ಹಾಗೂ ತೆಗೆದುಕೊಳ್ಳುವ ಸಮಯ ಇತ್ಯಾದಿ ವಿವರಿಸಲಾಯಿತು.

ವಿವಿಧ ರಾಗಿ ಜೋಳದ ಸಜ್ಜೆ ನವಣೆ ರೆಡ್ರೈಸ್ ತರಕಾರಿ ಹಣ್ಣುಗಳು ಬಳಸಿ ಮಾಡಬಹುದಾದ ಗಂಜಿ ಕಿಚಡಿ ಪಲ್ಯ ಮುಂತಾದವುಗಳ ಬಗ್ಗೆ ಅರಿವು ಮೂಡಿಸಲಾಯಿತು.


ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಮಾತನಾಡಿದ ಜೆ ಎನ್ ಕೋಟೆ ಸಮುದಾಯ ಆರೋಗ್ಯಾಧಿಕಾರಿ ರಮೇಶ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಆರೋಗ್ಯವು ದೇಶದ ಒಟ್ಟಾರೆ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾಗಿದೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಬಳಸುವ ಮೂಲಕ ಗ್ರಾಮದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕಿದೆ ಗ್ರಾಮೀಣ ಜನರು ಉಚಿತ ಆರೋಗ್ಯ ಶಿಬಿರಗಳ ಲಾಭ ಪಡೆಯುವುದು ಅತ್ಯಂತ ಅಗತ್ಯ. ಇಂತಹ ಶಿಬಿರಗಳ ಆರೋಗ್ಯ ಸೇವೆಗಳು ಆಸ್ಪತ್ರೆಗಳಿಂದ ದೂರವಾಗಿರುವ ಪ್ರದೇಶಗಳಿಗೆ ವರದಾನವಾಗಿದೆ ಎಂದು ತಿಳಿಸಿದರು.


ಇದೇ ಸಂಧರ್ಭದಲ್ಲಿ ಯೋಗ ಚಿಕಿತ್ಸಕ ರವಿ ಕೆ.ಅಂಬೇಕರ್ ಗ್ರಾಮಸ್ಥರಿಗೆ ಮಧುಮೇಹ ನಿಯಂತ್ರಿಸಬಲ್ಲ ಹಲವಾರು ಯೋಗಭ್ಯಾಸಗಳ ತರಬೇತಿ ನೀಡಿದರು.


ಶಿಬಿರದಲ್ಲಿ ಒಟ್ಟು 54 ಫಲಾನುಭವಿಗಳಿಗೆ ಚಿಕಿತ್ಸೆ ನೀಡಿ ಉಚಿತ ಔಷಧ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *