ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 5:
ಪಕ್ಷದಲ್ಲಿ ಸಕ್ರಿಯವಾಗಿ ಬೆಳೆದು ಪಕ್ಷವನ್ನು ಬಲಿಷ್ಠ ಮಾಡಲು ಈ ರೀತಿಯಾದ ಪ್ರಶಿಕ್ಷಣ ವರ್ಗ ಅಗತ್ಯವಾಗಿದೆ ಇಲ್ಲಿ ಸಿಗುವಂತ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದರೆ ಮುಂದೆ ಪಕ್ಷ ಶಕ್ತಿಶಾಲಿಯಾಗುವುದಲ್ಲದೆ ನೀವುಗಳ ಸಹಾ ಪ್ರಭಾವಿ ವ್ಯಕ್ತಿಗಳಾಗಲು ನೆರವಾಗಲಿದೆ ಎಂದು ಶಾಸಕರಾದ ಡಾ. ಎಂ. ಚಂದ್ರಪ್ಪ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಚಿತ್ರದುರ್ಗ ನಗರದ ಜಗಲೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಗುರುವಾರ ಬಿಜೆಪಿ ಚಿತ್ರದುರ್ಗ ಜಿಲ್ಲಾವತಿಯಿಂದ ಹಮ್ಮಿಕೊಂಡಿದ್ದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ-2026ರ ಜಿಲ್ಲಾ ಮಟ್ಟದ ಯೋಜನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದ ತತ್ವ, ಸಂಘಟನೆ ಶಕ್ತಿ ಹಾಗೂ ಕಾರ್ಯಪದ್ದತಿಯ ಬಗ್ಗೆ ಸಮಗ್ರ ತರಬೇತಿ ನೀಡುವ ಮಹತ್ವದ ಅಭಿಯಾನ ವಾಗಿದ್ದು, ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯಕರ್ತರ ಸಾಮಥ್ರ್ಯ ವೃದ್ಧಿಗೆ ದಿಕ್ಕು ತೋರಿಸುವ ವೇದಿಕೆ ಆಗಿದೆ. ಭಾರತೀಯ ಜನತಾ ಪಕ್ಷ ಇಂಧು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ನಮ್ಮಲ್ಲಿ ಲಕ್ಷಾಂತರ ಸಮರ್ಪಿತ ಕಾರ್ಯಕರ್ತರ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಟ್ಯಾಂತರ ಮತದಾರರೊಂದಿಗೆ ನಮ್ಮ ಸಂಪರ್ಕವು ಬಲಿಷ್ಠವಾಗಿದೆ. ಮತ್ತು ಕ್ರಿಯಾತ್ಮಕವಾಗಿದೆ ಎಂದರು.
ಸಮಾಜದಲ್ಲಿ ಸಂಘಟನೆ ಮುಖ್ಯವಾಗಿದೆ. ಪಕ್ಷದ ಸಂಘಟನೆ, ದೇಶದ ಸಂಘಟನೆಯಾಗಬೇಕಿದೆ. ಇದರಲ್ಲಿ ಇರಿವ ಹಲವಾರು ಮಹನೀಯರು ಈಗ ದೊಡ್ಡ ವ್ಯಕ್ತಿಗಳಾಗಿ ಬೆಳೆದಿದ್ದಾರೆ. ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಬೇಕಿದೆ. ಪ್ರಶಿಕ್ಷಣದಲ್ಲಿ ರಾಷ್ಟ್ರ, ಪಕ್ಷದ ಬಗ್ಗೆ ತಿಳಿಸಿಕೊಡುವುದರ ಮೂಲಕ ದೇಶಾಭೀ ಮಾನಿಗಳನ್ನಾಗಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿನ ವಿವಿಧ ಮಂಡಲದ ಮುಖಂಡರನ್ನು ಕರೆಯಿಸಿ ಇದರ ಬಗ್ಗೆ ತಿಳಿಸಲಾಗುತ್ತದೆ. ನಮ್ಮಲ್ಲಿ ಕಾರ್ಯಕರ್ತನು ಸಹಾ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಬಹುದಾಗಿದೆ. ಬೇರೆ ಪಕ್ಷದವರಂತೆ ಒಂದೇ ಕುಟುಂಬದವರು ಅಧ್ಯಕ್ಷರಾಗಲು ನಮ್ಮಲ್ಲಿ ಅವಕಾಶ ಇಲ್ಲ, ಇಲ್ಲಿ ಎಲ್ಲರಿಗೂ ಸಹಾ ಸಮಾನವಾದ ಅವಕಾಶ ಇದೆ. ಇಂದಿನ ಪ್ರಧಾನ ಮಂತ್ರಿಗಳು ಸಹಾ ತಳ ಮಟ್ಟದಿಂದ ಬಂದವರಾಗಿದ್ದಾರೆ ರೈಲ್ವೆ ನಿಲ್ದಾಣಗಳಲ್ಲಿ ಚಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು ದೇಶದ ಪ್ರಧಾನ ಮಂತ್ರಿಯಾಗಿರುವುದು ನಮ್ಮ ಪಕ್ಷದಲ್ಲಿ ಮಾತ್ರ ಎಂದು ಚಂದ್ರಪ್ಪ ತಿಳಿಸಿದರು.
ಪಕ್ಷ ನಿಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಕಾಲಕ್ಕೆ ನಿಮ್ಮಗೆ ಉತ್ತಮವಾದ ಜವಾಬ್ದಾರಿಗಳು ತಾನಾಗಿಯೇ ಬರುತ್ತವೆ ಅಧಿಕಾರ ಪಡೆಯುವದಕ್ಕಾಗಿ ಪಕ್ಷಕ್ಕೆ ಬರಬೇಡಿ ಸೇವೆಯನ್ನು ಮಾಡುವುದಕ್ಕೆ ಬನ್ನು ನಿಮಗೆ ತಾನಾಗಿಯೇ ಹುದ್ದೆ ಬರುತ್ತದೆ. ನಮ್ಮ ಮುಖಂಡರು ಸೇವೆ ಮಾಡಿದವರನ್ನು ಹುಡುಕಿ ಹುದ್ದೆಯನ್ನು ನೀಡುತ್ತಾರೆ. ಹಿಂದಿನ ಕಾಲದಲ್ಲಿಯೇ ಈ ರೀತಿಯಾದ ಪ್ರಶಿಕ್ಷಣ ವರ್ಗವನ್ನು ಮಾಡುವುದರ ಮೂಲಕ ಜನತೆಯನ್ನು ಸರಿದಾರಿಗೆ ತರುವಂತ ಕಾರ್ಯವನ್ನು ನಮ್ಮ ಹಿಂದಿನವರು ಮಾಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಮಾತನಾಡಿ, ಪಕ್ಷದ ಕಾರ್ಯಕರ್ತರ ವ್ಯಕ್ತಿತ್ವನ್ನು ನಿರ್ಮಾಣ ಮಾಡುವ ಪ್ರಶಿಕ್ಷಣ ಮಹಾ ಅಭಿಯಾನ ಇದಾಗಿದೆ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಇಲ್ಲಿ ಹೇಳುವುದನ್ನು ತಿಳಿದುಕೊಂಡು ಮುಂದೆ ನಿಮ್ಮ ಬೂತ್ ಮಟ್ಟದಲ್ಲಿನ ಮತದಾರರಿಗೆ ತಿಳಿಸುವಂತ ಕಾರ್ಯವನ್ನು ಮಾಡಿ, ಪಕ್ಷದ ಸಂಘಟನೆಯನ್ನು ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಅಗ ದೇಶ ತಾನಾಗಿಯೇ ಪ್ರಗತಿಯನ್ನು ಹೊಂದುತ್ತದೆ. ಈ ರೀತಿಯ ಪ್ರಶಿಕ್ಷಣ ವರ್ಗ ರಾಷ್ಟ್ರ, ರಾಜ್ಯ ಜಿಲ್ಲಾ ತಾಲ್ಲೂಕು, ಮಂಡಳಗಳಲ್ಲಿ ನಡೆಯುವುದರ ಮೂಲಕ ಅಲ್ಲಿನ ನಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲಾಗುವುದು ಇದರಲ್ಲಿ 7 ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಜಿಲ್ಲಾ ಮಟ್ಟದ ಯೋಜನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣಕ್ಕೆ ಈ ಶಿಬಿರ ಸಹಾಯವಾಗಲಿದೆ. ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ, ಮುಂದಿನ ದಿನದಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ನಡೆಯಬೇಕಿದೆ. ನಮ್ಮ ಪಕ್ಷದ ತತ್ವ ಸಿದ್ದಾಂತಗಳಿಂದ ಪಕ್ಷದ ಕಾರ್ಯ ಉತ್ತಮ ವ್ಯಕ್ತಿಯಾಗಲು ಸಾಧ್ಯವಿದೆ. ಈ ರೀತಿಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ 18 ಪ್ರಶಿಕ್ಷಣ ವರ್ಗಗಳನ್ನು ಮಾಡಬೇಕಿದೆ. ಇದರಲ್ಲಿ ಭಾಗವಹಿಸುವುದರ ಮೂಲಕ ಉತ್ತಮವಾಧ ಕೆಡರ್ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಾಳೆಕಾಯಿ ರಾಮದಾಸ್, ಮಾಧುರೀ ಗೀರಿಶ್, ಮಂಜುನಾಥ್, ರೇಖಾ, ಪಂಪ, ಶೈಲೇಶ್ ಭಾಗವಹಿಸಿದ್ದರು.