ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 17
ಚಿತ್ರದುರ್ಗ ನಗರದ ಹೂರ ವಲಯದ ಕಾವಾಡಿಗರ ಹಟ್ಟಿಯಲ್ಲಿನ ಮಂಗಳವಾರ ಬಿಎಸ್.ಎಸ್. ಮ್ಯಕ್ರೋ ಫೈನಾಸ್ಸ್ ಲಿಮಿಟೆಡ್ ಮತ್ತು ಅಪೋಲೋ ಟೆಲಿಮೆಡಿಸನ್ ನಟ್ ವರ್ಕಿಂಗ್ಫೌಂಡೇಷನ್ ವತಿಯಿಂದ ವಿಶೇಷ ಆರೋಗ್ಯ ಶಿಬಿರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಥೋಪಿಡಿಕ್ ಡಾ. ಶ್ರೀಧರ್ ಇಂದಿನ ದಿನಮಾನದಲ್ಲಿ ಹಣ, ಐಶ್ವರ್ಯ ಅಂತಸ್ತು, ಕಾರು ಬಂಗ್ಲಲೆ ಇದ್ದವರು ಶ್ರೀಮಂತರಲ್ಲ ಆರೋಗ್ಯವನ್ನು ಚನ್ನಾಗಿ ಇಟ್ಟುಕೊಂಡವರು ಶ್ರೀಮಂತರು, ಇಂದಿನ ದಿನಮಾನದಲ್ಲಿ ಹಣಕ್ಕಿಂತ ಆರೋಗ್ಯ ಮುಖ್ಯವಾಗಿದೆ ಹಣವನ್ನು ಹೇಗೆ ಬೇಕಾದರೂ ಸಂಪಾದನೆ ಮಾಡಬಹುದು ಆದರೆ ಆರೋಗ್ಯವನ್ನು ಸಂಪಾದನೆ ಮಾಡಲು ಸಾದ್ಯವಿಲ್ಲ ಇದಕ್ಕೆ ಉತ್ತಮವಾದ ಆಹಾರ, ವ್ಯಾಯಾಮ, ಯೋಗ, ಧ್ಯಾನ್ಯವನ್ನು ಮಾಡುವುದರ ಜೊತೆಗೆ ಕಾಲ ಕಾಲಕ್ಕೆ ಆರೋಗ್ಯವನ್ನು ತಪಾಸಣೆಯನ್ನು ಮಾಡುವುದರ ಮೂಲಕ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪೋಲ್ ಡಾ.ಚಂದ್ರಶೇಖರ್ ಮಾತನಾಡಿ, ಇಂದಿನ ದಿನದಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಈ ರೀತಿಯಾದ ಆರೋಗ್ಯ ಶಿಬಿರಗಳನ್ನು ನಡೆಸುವುದರ ಮೂಲಕ ಜನರ ಆರೋಗ್ಯವನ್ನು ತಪಾಸಣೆಯನ್ನು ನಡೆಸುವುದರÀ ಮೂಲಕ ಜನರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡುವುದಕ್ಕೆ ಸಹಾಯವನ್ನು ಮಾಡುತ್ತಿವೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ, ಈ ರೀತಿ ಯಾದ ಶಿಬಿರವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಕೊಳ್ಳಬೇಕಿದೆ ಎಂದು ಕರೆ ನೀಡಿದರು.
ವಿಶೇಷ ಆರೋಗ್ಯ ಶಿಬಿರವನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಯಿತು. ಇದರಲ್ಲಿ ಸುಮಾರು ಕವಾಡಿಗರ ಹಟ್ಟಿಯಲ್ಲಿನ 150 ಜನ ತಮ್ಮ ಆರೋಗ್ಯವನ್ನು ತಪಾಸಣೆಯನ್ನು ನಡೆಸಿಕೊಂಡರು.
