PM Surya Ghar Yojana 2026: ಮನೆಗೆ ಸೋಲಾರ್ ಪ್ಯಾನೆಲ್,ಸಬ್ಸಿಡಿ ಹಾಗೂ 300 ಯೂನಿಟ್ ಫ್ರೀ ಕರೆಂಟ್! ಇಲ್ಲಿದೆ ಸಂಪೂರ್ಣ ಮಾಹಿತಿ.

ಕೇಂದ್ರ ಸರ್ಕಾರವು ಸಾಮಾನ್ಯ ವರ್ಗದ ಜನರಿಗೆ ವಿದ್ಯುತ್ ಬಿಲ್ ಹೊರೆಯಿಂದ ಮುಕ್ತಿ ನೀಡಲು ಮತ್ತು ಹಸಿರು ಇಂಧನವನ್ನು ಪ್ರೋತ್ಸಾಹಿಸಲು ‘ಪಿಎಂ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆ‘ (PM Surya Ghar: Muft Bijli Yojana) ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಛಾವಣಿಯ ಮೇಲೆ ಸೌರ ಫಲಕಗಳನ್ನು (Rooftop Solar Panels) ಅಳವಡಿಸಲು ಭಾರಿ ಸಬ್ಸಿಡಿ ನೀಡಲಾಗುತ್ತಿದ್ದು, ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶ ಮತ್ತು ಲಾಭಗಳು:

  • ಉಚಿತ ವಿದ್ಯುತ್: ಮನೆ ಬಳಕೆಗಾಗಿ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ವಿದ್ಯುತ್ ಸಂಪೂರ್ಣ ಉಚಿತ.
  • ಹಣ ಉಳಿತಾಯ: ವಿದ್ಯುತ್ ಬಿಲ್ ಉಳಿತಾಯದಿಂದ ಕುಟುಂಬಗಳಿಗೆ ವಾರ್ಷಿಕವಾಗಿ 15,000 ರಿಂದ 18,000 ರೂಪಾಯಿಗಳವರೆಗೆ ಆರ್ಥಿಕ ಲಾಭವಾಗಲಿದೆ.
  • ಹೆಚ್ಚುವರಿ ಆದಾಯ: ನಿಮ್ಮ ಬಳಕೆಗೆ ಹೋಗಿ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಇಲಾಖೆಗೆ (DISCOM) ಮಾರಾಟ ಮಾಡಿ ನೀವು ಹೆಚ್ಚುವರಿ ಆದಾಯವನ್ನೂ ಗಳಿಸಬಹುದು.
  • ನೇರ ಸಬ್ಸಿಡಿ: ಸೌರ ಫಲಕ ಅಳವಡಿಸಲು ತಗಲುವ ವೆಚ್ಚದಲ್ಲಿ ದೊಡ್ಡ ಮೊತ್ತವನ್ನು ಕೇಂದ್ರ ಸರ್ಕಾರವೇ ಸಬ್ಸಿಡಿ ರೂಪದಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ಜೊತೆಗೆ, ಉಳಿದ ಮೊತ್ತಕ್ಕೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲದ ಸೌಲಭ್ಯವೂ ಇದೆ.

ಸಬ್ಸಿಡಿ ವಿವರ (ಯಾವ ಸಾಮರ್ಥ್ಯದ ಪ್ಯಾನೆಲ್‌ಗೆ ಎಷ್ಟು ಸಬ್ಸಿಡಿ?):

  • 1 ಕಿಲೋವ್ಯಾಟ್ (kW) ಸೋಲಾರ್ ಪ್ಯಾನೆಲ್: ರೂ. 30,000 ಸಬ್ಸಿಡಿ ಲಭ್ಯ.
  • 2 ಕಿಲೋವ್ಯಾಟ್ (kW) ಸೋಲಾರ್ ಪ್ಯಾನೆಲ್: ರೂ. 60,000 ಸಬ್ಸಿಡಿ ಲಭ್ಯ.
  • 3 ಕಿಲೋವ್ಯಾಟ್ (kW) ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ: ಗರಿಷ್ಠ ರೂ. 78,000 ದವರೆಗೆ ಸಬ್ಸಿಡಿ ಲಭ್ಯ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:

  • ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
  • ಸೋಲಾರ್ ಪ್ಯಾನೆಲ್ ಅಳವಡಿಸಲು ಸ್ವಂತ ಮನೆ ಹಾಗೂ ಸೂರ್ಯನ ಬೆಳಕು ಬೀಳುವಂತಹ ಸೂಕ್ತವಾದ ಛಾವಣಿ ಇರಬೇಕು.
  • ಮನೆಯ ಹೆಸರಿನಲ್ಲಿ ಅಧಿಕೃತ ಮತ್ತು ಚಾಲ್ತಿಯಲ್ಲಿರುವ ವಿದ್ಯುತ್ ಸಂಪರ್ಕ (Electricity Connection) ಇರಬೇಕು.
  • ಈ ಹಿಂದೆ ಸೌರಶಕ್ತಿ ಯೋಜನೆಗಳ ಅಡಿ ಯಾವುದೇ ಸಬ್ಸಿಡಿಯನ್ನು ಪಡೆದಿರಬಾರದು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ:

  1. ಪೋರ್ಟಲ್‌ನಲ್ಲಿ ನೋಂದಣಿ: ಮೊದಲು ಅಧಿಕೃತ ವೆಬ್‌ಸೈಟ್pmsuryaghar.gov.inಗೆ ಭೇಟಿ ನೀಡಿ. ಅಲ್ಲಿ ನಿಮ್ಮ ರಾಜ್ಯ, ನಿಮ್ಮ ಭಾಗದ ವಿದ್ಯುತ್ ವಿತರಣಾ ಕಂಪನಿ (ಉದಾಹರಣೆಗೆ ಬೆಸ್ಕಾಂ, ಚೆಸ್ಕಾಂ ಇತ್ಯಾದಿ), ವಿದ್ಯುತ್ ಬಿಲ್‌ನ ಕನ್ಸೂಮರ್ ನಂಬರ್ (Account Number), ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ ನೋಂದಾಯಿಸಿಕೊಳ್ಳಿ (Register).
  2. ಅರ್ಜಿ ಸಲ್ಲಿಕೆ: ಲಾಗಿನ್ ಆದ ಬಳಿಕ ರೂಫ್‌ಟಾಪ್ ಸೋಲಾರ್‌ಗಾಗಿ ಇರುವ ಅರ್ಜಿಯನ್ನು ಭರ್ತಿ ಮಾಡಿ.
  3. ಅನುಮೋದನೆ ಮತ್ತು ಅಳವಡಿಕೆ: ನಿಮ್ಮ ವಿದ್ಯುತ್ ಕಂಪನಿಯಿಂದ ಕಾರ್ಯಸಾಧ್ಯತೆಯ (Feasibility) ಅನುಮೋದನೆ ಸಿಕ್ಕ ನಂತರ, ಪೋರ್ಟಲ್‌ನಲ್ಲಿರುವ ನೊಂದಾಯಿತ ಮಾರಾಟಗಾರರಿಂದ (Registered Vendors) ಮಾತ್ರ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಿ.
  4. ನೆಟ್ ಮೀಟರ್ (Net Meter) ಅಳವಡಿಕೆ: ಪ್ಯಾನೆಲ್ ಅಳವಡಿಕೆಯ ನಂತರ, ಆ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ, ನೆಟ್ ಮೀಟರ್‌ಗಾಗಿ ಅರ್ಜಿ ಸಲ್ಲಿಸಿ.
  5. ಸಬ್ಸಿಡಿ ಜಮೆ: ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ‘ಕಮಿಷನಿಂಗ್ ಪ್ರಮಾಣಪತ್ರ’ (Commissioning Certificate) ನೀಡುತ್ತಾರೆ. ಆ ನಂತರ ನಿಮ್ಮ ಬ್ಯಾಂಕ್ ಖಾತೆ ವಿವರಗಳು ಮತ್ತು ರದ್ದಾದ ಚೆಕ್ (Cancelled cheque) ಅನ್ನು ಪೋರ್ಟಲ್‌ನಲ್ಲಿ ಸಲ್ಲಿಸಿದರೆ, 30 ದಿನಗಳೊಳಗೆ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ.

Leave a Reply

Your email address will not be published. Required fields are marked *