ಚಿತ್ರದುರ್ಗ| ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತಿ ಆಚರಣೆ: ಆಯುಷ್ ಯೋಗ ಕೇಂದ್ರದಲ್ಲಿ ಭಕ್ತಿ ಭಾವದ ಕಾರ್ಯಕ್ರಮ.

ಚಿತ್ರದುರ್ಗ ಏ. 01:

ನಗರದ ಆಯುಷ್ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಘ (ರಿ) ವತಿಯಿಂದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಶಿವಕುಮಾರ ಸ್ವಾಮಿ ಅವರ 119ನೇ ಜಯಂತೋತ್ಸವವನ್ನು ಆಯುಷ್ ಯೋಗ ಕೇಂದ್ರದ ಕಚೇರಿಯಲ್ಲಿ ಭಕ್ತಿ ಹಾಗೂ ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ವಹಿಸಿ ಮಾತನಾಡಿ, ಶ್ರೀಗಳ ಜೀವನ ಸಾಧನೆ, ದಾಸೋಹ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸಿದರು. ನಿಜವಾದ ದೇವರನ್ನು ಕಂಡ ಪುಣ್ಯ ನಮ್ಮ ಪೀಳಿಗೆಗೆ ಸಿಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಆರ್. ಮಂಜುನಾಥ್ ಅವರು ಶ್ರೀಗಳ ಮಹತ್ವವನ್ನು ವಿವರಿಸಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಳವಾಯಿ ಸಾರ್ ಅವರು ಶ್ರೀಗಳ ಸೇವಾ ಮನೋಭಾವವನ್ನು ಕೊಂಡಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಲ್.ಎಸ್. ಬಸವರಾಜ್ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕರಾದ ಲೋಕೇಶ್ ವಂದನಾರ್ಪಣೆ ಸಲ್ಲಿಸಿದರು. ಸಂಘದ ಸದಸ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತೋತ್ಸವವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *