ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 18
ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸುವಮೂಲಕ ದೇಶವಾಸಿಗಳ ಮುಂದೆ ತನ್ನ ನಿಜವಾದ ಮುಖವಾಡವನ್ನು ಕಳಚಿಕೊಂಡಂತೆ ವರ್ತಿಸಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಟೀಕಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಳೆದ 79 ವರ್ಷದಲ್ಲಿ ಆರು ದಶಕಗಳ ಕಾಂಗ್ರೆಸ್ ದೇಶವನ್ನು, ದೇಶದ ಬಹುಪಾಲು ರಾಜ್ಯಗಳನ್ನು ಆಳಿದೆ. ತನ್ನ ಅಧಿಕಾರಾವದಿಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಕಿಂಚಿತ್ತೂ ಕಳಕಳಿ ತೋರದ ಕಾಂಗ್ರೆಸ್ ಇದೀಗ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಸೂದೆ ವಿರುದ್ಧ ಮತ ಚಲಾಯಿಸುವ ಮೂಲಕ ಮಹಿಳಾ ವಿರೋಧಿ ನಡೆಯನ್ನು ಅನುಸರಿಸಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಮಹಿಳೆಯರಿಗೆ ರಾಜ್ಯ ಶಾಸನಸಭೆ, ಲೋಕಸಭೆಗಳಲ್ಲಿ ಶೇ.33 ಮೀಸಲಾತಿ ಕೊಡುವ ಸದುದ್ದೇಶದಿಂದ ಲೋಕಸಭೆಯಲ್ಲಿ ಮಸೂದೆ ಮಂಡಿಸಿತ್ತು. ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ಮಿತ್ರ ಪಕ್ಷಗಳು ಮಸೂದೆಗೆ ಬೆಂಬಲಿಸದೇ, ಅವುಗಳು ತಮ್ಮ ಮಹಿಳಾ ವಿರೋಧಿ ನೀತಿಯನ್ನು ಬಯಲು ಮಾಡಿಕೊಂಡಿವೆ. ಮಹಿಳೆಯರ ಬಗ್ಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿಗೆ ಮಹಿಳೆಯರು ಕೇವಲ ಓಟು ಬ್ಯಾಂಕ್ ಅಷ್ಟೇ ಎಂಬುದನ್ನು ಮಸೂದೆಗೆ ವಿರುದ್ಧ ಮತ ಚಲಾಯಿಸಿ ಸಾಬೀತುಪಡಿಸಿವೆ ಎಂದು ದೂರಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ 60 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ತನ್ನಅಧಿಕಾರ ಅವಧಿಯಲ್ಲಿ ಒಬಿಸಿ ಮೀಸಲಾತಿಯನ್ನು ಏಕೆ ನೀಡಲಿಲ್ಲವೆಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮಿಳುನಾಡಿನ ದೇವಸ್ಥಾನವೊಂದರ ವಿಷಯದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರ ವಿರುದ್ಧವೇ ಸಹಿ ಹಾಕಿದ್ದ ಕಾಂಗ್ರೆಸ್ಸಿಗರು ಈಗಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಸೂದೆ ವಿರುದ್ದ ಮತ ಚಲಾಯಿಸುವ ಮೂಲಕ ಮಹಿಳೆಯರ ಕೆಂಗಣ್ಣಿಗೂ ಗುರಿ ಆಗಿರುವುದು ಸ್ಪಷ್ಟ ಎಂದು ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ತಿಳಿಸಿದ್ದಾರೆ.