ಗ್ರಾಮಾಂತರದಲ್ಲಿ NCD ಆರೋಗ್ಯ ಅಭಿಯಾನ: ಯೋಗ ತರಬೇತಿ ಸಹಿತ ಉಚಿತ ತಪಾಸಣೆ.

ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್

ಚಿತ್ರದುರ್ಗ: ಏಪ್ರಿಲ್ 23.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾಂಕ್ರಾಮಿಕವಲ್ಲದ (NCD)ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಮುಖ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಆರೋಗ್ಯ ಕಾರ್ಯಕರ್ತರು ನಿಮ್ಮ ಗ್ರಾಮಗಳಿಗೆ ಬಂದಾಗ ತಪ್ಪದೆ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ ಹಾಗು ಮುಂದೆ ಬರಬಹುದಾದ ಹೆಚ್ಚಿನ ಅಪಾಯದಿಂದ ಪಾರಾಗಿ ಎಂದು ಚಿತ್ರದುರ್ಗ ತಾಲ್ಲೂಕು ಡಿ ಮದಕರಿಪುರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಪುನೀತ್ ಮನವಿ ಮಾಡಿದ್ದಾರೆ.

ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಿರೆಗೆರೆಯ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡುತ್ತಾ ಈ ಕಾರ್ಯಕ್ರಮಗಳ ಮುಖ್ಯ ಗುರಿ ಕ್ಯಾನ್ಸರ್, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದಾಗಿದೆ ರೋಗಿಗಳು ಇರುವ ಸ್ಥಳದಲ್ಲೇ ತಪಾಸಣೆ ನಡೆಸಿ ಔಷಧೋಪಚಾರ ಮಾಡಲಾಗುತ್ತದೆ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಗೆ ಉಲ್ಲೇಖಿಸಲಾಗುತ್ತದೆ ಹಾಗೆಯೇ NCD ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಇಲಾಖೆವತಿಯಿಂದ ಆಯೋಜಿಸುವ ಉಚಿತ ಯೋಗಭ್ಯಾಸ ತರಬೇತಿ ಶಿಬಿರಗಳಲ್ಲಿ ಯೋಗ ಪ್ರಾಣಾಯಾಮಗಳನ್ನು ಕಲಿತು ಔಷಧ ಮುಕ್ತ ಜೀವನ ನಡೆಸಬೇಕು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಯೋಗ ಚಿಕಿತ್ಸಕ ರವಿ ಕೆ.ಅಂಬೇಕರ್ ಗ್ರಾಮಸ್ಥರಿಗೆ ಪ್ರತಿನಿತ್ಯ ಅಭ್ಯಾಸ ಮಾಡುವ ಸರಳ ಯೋಗಭ್ಯಾಸ ಕ್ರಿಯೆಗಳ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ದೊಡ್ಡಿಗನಾಳ್ ಹೊಸಹಟ್ಟಿಯ ಆಯುಷ್ ವೈದ್ಯಾಧಿಕಾರಿ ಡಾ.ಜಗದೀಶ್ ಆಶಾ ಕಾರ್ಯಕರ್ತೆ ಕರಿಬಸಮ್ಮ ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *