ಚಿತ್ರದುರ್ಗ ಮೇ. 03
ವರದಿ ಮತ್ತು ಪೋಟೋ ಕೃಪೆ, ಸುರೇಶ್ ಪಟ್ಟಣ್
ಅಧಿಕಾರ ಇದ್ದಾಗ ಅಭಿಮಾನೋತ್ಸವ, ಸಂಭ್ರಮೋತ್ಸವ ಆಚರಣೆ ಮಾಡುವುದು ಸಾಮಾನ್ಯ ಆದರೆ ಯಾವುದೇ ಅಧಿಕಾರ ಇಲ್ಲದೆ ಬರೀ ಜನರೇ ತಮಗೆ ಸ್ಪಂದನೆಯನ್ನು ನೀಡಿದ ಮತ್ತು ತಮ್ಮ ಕಷ್ಟಗಳಿಗೆ ನೆರವನ್ನು ನೀಡಿದ ವ್ಯಕ್ತಿಗೆ ಅಭಿಮಾನವನ್ನು ತೋರಿಸುವುದರ ಮೂಲಕ ಮೇ 9 ರಂದು ಕಾರ್ಯಕ್ರಮವನ್ನು ಆಯೋಜಿಸಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 50 ವರ್ಷದ ರಾಜಕೀಯ ಜೀವನದ ಹಿನ್ನಲೆಯಲ್ಲಿ ಮೇ. 9 ರಂದು ಚಿತ್ರದುರ್ಗ ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ, ಗ್ರಾಮಾಂತರ ಪ್ರದೇಶದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದು ಸಹಾ ಹೋರಾಟವನ್ನು ಮಾಡಲಿಲ್ಲ, ಬಡವರ ಕಣ್ಣಿರನ್ನು ಒರೆಸುವ ಸಲುವಾಗಿ ಕೆಲಸವನ್ನು ಮಾಡಿದ್ದಾರೆ 50 ವರ್ಷ ಬಡವರ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಜನರ ಪ್ರೀತಿ ವಿಶ್ವಾಸದ ಮೂಲಕ ಅಧಿಕಾರವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದ್ದಾರೆ ಎಂದರು.
ಯಡಿಯೂರಪ್ಪರವರು ಕಡಿಮೆ ಅಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರೂ ಸಹಾ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಇದರಿಂದ ಲಕ್ಷಾಂತರ ಜನತೆ ಉಪಯೋಗವಾಗಿದೆ, ಇದನ್ನು ಸ್ಮರಣೆ ಮಾಡುವ ಕಾರ್ಯಕ್ರಮ ಇದಾಗಿದೆ, ಬಡವರ ಕಣ್ಣೀರನ್ನು ಒರೆಸುವ ಪ್ರಮಾಣಿಕ ಕಾರ್ಯವನ್ನು ಯಡಿಯೂರಪ್ಪರವರ ಅಧಿಕಾರ ಇದ್ದಾಗ ಮಾಡಿದ್ದಾರೆ. ಯಡಿಯೂರಪ್ಪರವರ ಅಭಿಮಾನಿಗಳು ಬರೀ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಸಹಾ ಇದ್ದಾರೆ, ದುಬೈಯಿಂದ ದೂರವಾಣಿಯ ಮೂಲಕ ಕರೆ ಮಾಡಿ ನಾವು ಸಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಜನತೆ ಯಡಿಯೂರಪ್ಪರವರಿಗೆ ಅವರ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಯಡಿಯೂರಪ್ಪರವರೆಂದರೆ ರಾಜ್ಯದಲ್ಲಿ ಹೋರಾಟವನ್ನು ನಡೆಸುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಿಎಸ್.ವೈ ಎಂದರೆ ಹೋರಾಟ ಎಂಬ ಮನೋಭಾವ ಎಲ್ಲರಲ್ಲೂ ಸಹಾ ಮೂಡಿದೆ. ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ ನಾಡಿಗೆ ಯಡಿಯೂರಪ್ಪ ನೀಡಿದ ಕೊಡುಗೆಗೆ ಎಲ್ಲ ವರ್ಗದವರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದಕ್ಕಾಗಿ ಅರ್ಥಪೂರ್ಣ. ಭವ್ಯ ಕಾರ್ಯಕ್ರಮ ನಡೆಸುತ್ತಿದ್ದೇವೆ ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಜನರು ಬರಲಿದ್ದಾರೆ. ಒಂದು ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ ಎಂದು ವಿವರಿಸಿದರು.


ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮೇ. 9ರಂದು ನಡೆಯಲಿರುವ ಅಭೀಮಾನೋತ್ಸವ ಕಾರ್ಯಕ್ರಮ ನಮ್ಮ ಚಿತ್ರದುರ್ಗದ ಮಾರ್ಯದೆಯ ಪ್ರಶ್ನೆಯಾಗಿದೆ ಇಲ್ಲಿಗೆ ಬರುವ ರಾಜ್ಯದ ವಿವಿಧ ಯಡೆಯೂರಪ್ಪರವರ ಅಭೀಮಾನಿಗಳಿಗೆ ಯಾವ ತೊಂದರೆಯಾಗದಂತೆ ಎಚ್ಚರವಹಿಸಿ ಆತಿಥ್ಯವನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಗಳಿಂದ ಸುಮಾರು 10 ಲಕ್ಷ ಜನ ಸೇರುವ ನೀರೀಕ್ಷೆ ಇದೆ ಈ ಹಿನ್ನಲೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವನ್ನು ವಹಿಸಬೇಕಿದೆ. ಯಡಿಯೂರಪ್ಪ ಅಭಿಮಾನೋತ್ಸವ ಯಾವುದೇ ರಾಜಕಾರಣದ ಉದ್ದೇಶದಿಂದ ನಡೆಯುತ್ತಿರುವುದಲ್ಲ, ಅವರ ಮೇಲಿನ ಅಭಿಮಾನಕ್ಕಾಗಿ ನಡೆಯುತ್ತಿರುವುದು. ಕರ್ನಾಟಕದಲ್ಲಿ ಕಳೆದ 50 ವರ್ಷಗಳಿಂದ ಬಡವರ, ಶೋಷಿತ ವರ್ಗದವರ, ರೈತರ ಪರವಾದ ಧ್ವನಿಯಾಗಿ, ನಿರಂತರವಾಗಿ, ದಣಿವರಿಯದೆ, ರಾಜ್ಯದ ಮೂಲೆಮೂಲೆಗಳಿಗೆ ಪ್ರವಾಸ ಮಾಡಿ, ರೈತರು ಎಲ್ಲಿಯೇ ಹೋರಾಟ ಮಾಡ್ತಾ ಇದ್ದರೆ ಅಲ್ಲಿ ಬಿಎಸ್ ಯಡಿಯೂರಪ್ಪ ಅವರು ಇರ್ತಾ ಇದ್ದರು. ಅಂಥೊಬ್ಬ ಹೋರಾಟಗಾರ, ಜನನಾಯಕನನ್ನು ಗೌರವಿಸಬೇಕು ಎಂಬ ಕಾರಣಕ್ಕೆ ಅಭಿಮಾನೋತ್ಸವವನ್ನು ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದು ಸಹಾ ಹೋರಾಟವನ್ನು ಮಾಡಲಿಲ್ಲ, ಸೈಕಲ್ ಮೇಲೆ ರಾಜ್ಯ ಪ್ರವಾಸ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಹೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದ್ದು ಜನರ ಪ್ರೀತಿ ವಿಶ್ವಾಸದ ಮೂಲಕ ಅಧಿಕಾರವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಕೆ.ಟಿ.ಕುಮಾರಸ್ವಾಮಿ, ಖನಿಜ ನಿಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಪ್ರೀತಂ ಗೌಡ್ರು, ಅಂಬಿಕಾ ಹುಲಿರಾಯ್ಕರ್, ಹನುಮಂತೇ ಗೌಡ, ವಿಭಾಗ ಸಹಾ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ವೆಂಕಟೇಶ್ ಯಾದವ್, ಮೋಹನ್ಕುಮಾರ್, ಉಪಾಧ್ಯಕ್ಷ ಡಾ,ಸಿದ್ಧಾರ್ಥ, ವೀರಶೈವ ಬ್ಯಾಂಕ್ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ನಂದಿ ನಾಗರಾಜ್, ರಾಜ್ಯ ರೈತ ಮೋರ್ಚಾದ ಮಲ್ಲಿಕಾರ್ಜನ್ ಕೂಡಾ ಮಾಜಿ ಅದ್ಯಕ್ಷರಾದ ಸುರೇಶ್ ಸಿದ್ದಾಪುರ, ದಗ್ಗೆ ಶಿವಪ್ರಕಾಶ್, ಭಾರ್ಗವಿ ದ್ರಾವಿಡ್,ಶ್ಯಾಮಲಾ ಶಿವಪ್ರಕಾಶ್, ಶ್ರೀಮತಿ ರೇಖಾ, ಸಹ ವಕ್ತಾರ ಚಾಲುಕ್ಯ ನವೀನ್, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್ ಸೇರಿದಂತೆ ಇತರರು ಭಾಗವಹಿಸಿದ್ದರು.

