ಚಿತ್ರದುರ್ಗ|ಹಿಂದೂ ಎಕನಾಮಿಕ್ ಫೋರಂನಿಂದ ‘ಬ್ರಾಂಡ್ ಚಿತ್ರದುರ್ಗ’ ಸಮಾವೇಶ: ಉದ್ಯಮಿಗಳು, ಹೂಡಿಕೆದಾರರಿಗೆ ಹೊಸ ಅವಕಾಶ.

ಚಿತ್ರದುರ್ಗ ಮೇ. 26

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹಿಂದೂ ಉದ್ಯಮಿಗಳು ಮತ್ತು ಆರ್ಥಿಕ ನಾಯಕತ್ವವನ್ನು ಒಗ್ಗೂಡಿಸಲು ಕಾರ್ಯನಿರ್ವಹಿಸುತ್ತಿರುವ ಹಿಂದೂ ಎಕನಾಮಿಕ್ ಫೋರಂ, ಪ್ರತಿ ಜಿಲ್ಲೆಯಲ್ಲೂ ಹಿಂದೂಗಳಿಗೆ ಅನುಕೂಲಕರ ಆರ್ಥಿಕ ವಾತಾವರಣ ನಿರ್ಮಿಸುವ ಉದ್ದೇಶದಿಂದ `ಬ್ರಾಂಡ್'' ಸಮಾವೇಶಗಳ ಸರಣಿಯನ್ನು ಆಯೋಜಿಸುತ್ತಿದೆ. ಈ ಸರಣಿಯ ರಾಜ್ಯದ ಮೊದಲ ಸಮಾವೇಶ ಬ್ರಾಂಡ್ ಚಿತ್ರದುರ್ಗದಿಂದ ಪ್ರಾರಂಭವಾಗುತ್ತಿದೆ ಎಂದು ಹಿಂದೂ ಎಕನಾಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್‍ನ ಸಂಯೋಜನಕರು, ಭಾರತ ಎಚ್.ಇ.ಎಫ್ ನ , ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಶಿವ ಪ್ರಸಾದ್ ಟಿ. ಆರ್.ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಬ್ರಾಂಡ್ ಚಿತ್ರದುರ್ಗ ಕಾರ್ಯಕ್ರಮದ ಉದ್ದೇಶಗಳೆಂದರೆ ಚಿತ್ರದುರ್ಗ ಜಿಲ್ಲೆಯ ಆರ್ಥಿಕ ಶಕ್ತಿಯನ್ನು ಗುರುತಿಸುವುದು ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಕೈಮಗ್ಗ, ಒSಒಇ ಮತ್ತು ಸ್ಥಳೀಯ ಉತ್ಪನ್ನಗಳ ಸಾಮಥ್ರ್ಯವನ್ನು ಗುರುತಿಸು ವುದು. ಚಿತ್ರದುರ್ಗವನ್ನು ಬಲಿಷ್ಠ ಬ್ರಾಂಡ್ ಆಗಿ ನಿರ್ಮಿಸುವುದು ಜಿಲ್ಲೆಯ ಉತ್ಪನ್ನಗಳು, ಉದ್ಯಮಗಳು ಮತ್ತು ಅವಕಾಶಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವುದು.ಸ್ಥಳೀಯ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು,ವ್ಯಾಪಾರ ವಿಸ್ತರಣೆ, ಮಾರುಕಟ್ಟೆ ಸಂಪರ್ಕ, ಹೂಡಿಕೆ, ರಫ್ತು ಮತ್ತು ನೆಟ್ ವರ್ಕಿಂಗ್ ಅವಕಾಶಗಳನ್ನು ಒದಗಿಸುವುದು.ಚಿತ್ರದುರ್ಗದ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ ಮೊಳಕಾಲ್ಮೂರು ಸೀರೆಗಳು, ಕೃಷಿ ಉತ್ಪನ್ನಗಳು, ಆಹಾರ ಉತ್ಪನ್ನಗಳು, ಕೈಗಾರಿಕಾ ಉತ್ಪನ್ನಗಳು ಮತ್ತು ರಫ್ತು ಸಾಮಥ್ರ್ಯ ಇರುವ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ಕಂಡುಹಿಡಿಯುವುದು. ಉದ್ಯಮಿಗಳು, ಸಂಸ್ಥೆಗಳು ಮತ್ತು ಸಮಾಜದ ಶಕ್ತಿಯನ್ನು ಒಂದೇ ವೇದಿಕೆಗೆ ತರುವುದು ಆಗಿದೆ ಎಂದರು.

ಈ ಸಮಾವೇಶದಲ್ಲಿ ಚಿತ್ರದುರ್ಗವನ್ನು ಲಾಜಿಸ್ಟಿಕ್ಸ್ ಹಬ್ ಆಗಿ ಅಭಿವೃದ್ಧಿಪಡಿಸುವುದು ಚಿತ್ರದುರ್ಗದ ಪ್ರವಾಸೋದ್ಯಮ ಅಭಿವೃದ್ಧಿ ಮೊಳಕಾಲ್ಮೂರು ಸೀರೆಗಳು ಮತ್ತು ಕೈಮಗ್ಗ ಉದ್ಯಮದ ಬೆಳವಣಿಗೆ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮಗಳ ಅಭಿವೃದ್ಧಿ ಚಿತ್ರದುರ್ಗದ ರಫ್ತು ಸಾಮಥ್ರ್ಯ ಹೊಂದಿರುವ ಉತ್ಪನ್ನಗಳ ಡಿಆರ್‍ಡಿಓ / ಐಐಎಸ್‍ಸಿ / ಇಸ್ರೋ ಸಂಬಂಧಿತ ಅವಕಾಶಗಳು ಚಿತ್ರದುರ್ಗವನ್ನು ಕೈಗಾರಿಕಾ ಹಬ್ ಆಗಿ ರೂಪಿಸುವುದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮಹಿಳಾ ಉದ್ಯಮಿಗಳ ಬೆಳವಣಿಗೆ ವಿಷನ್ 2047 ಚಿತ್ರದುರ್ಗದ ಮುಂದಿನ 20 ವರ್ಷಗಳ ಆರ್ಥಿಕ ಅಭಿವೃದ್ಧಿ ಮಾರ್ಗಸೂಚಿಯ ಬಗ್ಗೆ ಚರ್ಚೆಯಾಗಲಿದೆ ಇದರೊಂದಿಗೆ ಜಿಲ್ಲೆಯ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿರುವ 10 ಹಿರಿಯ ಉದ್ಯಮಿಗಳಿಗೆ ಹಾಗೂ ಯುವ ಜನತೆಗೆ ಉದ್ಯೋಗ ಸೃಷ್ಟಿಯಲ್ಲಿ ಸ್ಫೂರ್ತಿಯಾಗಿರುವ 10 ಯುವ ಉದ್ಯಮಿಗಳಿಗೂ ಗೌರವ ಸಮರ್ಪಣೆ ಮಾಡಲಾಗುವುದು.

ರಾಘವೇಂಧ್ರ ಮಾತನಾಡಿ, ಹಿಂದೂ ಎಕನಾಮಿಕ್ ಫೋರಂ ಒಂದು ಜಾಗತಿಕ ಆರ್ಥಿಕ ವೇದಿಕೆಯಾಗಿದ್ದು, ಹಿಂದೂ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್‍ಗಳು, ಹೂಡಿಕೆದಾರರು, ವೃತ್ತಿಪರರು, ಅಕಾಡೆಮಿಷಿಯನ್‍ಗಳು ಮತ್ತು ಚಿಂತಕರನ್ನು ಒಂದೇ ವೇದಿಕೆಗೆ ತರುತ್ತದೆ.ಸುಮಾರು 2,000 ವರ್ಷಗಳ ಹಿಂದೆ ಹಿಂದುಗಳು ಜಾಗತಿಕ ಆರ್ಥಿಕತೆಯಲ್ಲಿ ಸುಮಾರು 33% ಪಾಲು ಹೊಂದಿದ್ದರು. ಇದು ವೇದಿಕ ಆದರ್ಶವಾದ `ಶತ ಹಸ್ತ ಸಮಾಹರ, ಸಹಸ್ರ ಹಸ್ತ ಸಂಕೀರ? ಒಟ್ಟಾಗಿ ಸಂಪತ್ತು ಸೃಷ್ಟಿಸಿ, ವ್ಯಾಪಕವಾಗಿ ಹಂಚುವ ತತ್ವದಿಂದ ಸಾಧ್ಯವಾಗಿತ್ತು. ಇಂದು ಆ ಪಾಲು ಸುಮಾರು 5%ಕ್ಕೆ ಕುಸಿದಿದ್ದು, ನಂಬಿಕೆ, ಏಕತೆ, ಸಹಕಾರ ಮತ್ತು ಸಂಘಟಿತ ಆರ್ಥಿಕ ವ್ಯವಸ್ಥೆಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.ಊಇಈ ತನ್ನ ಚಾಪ್ಟರ್‍ಗಳ ಮೂಲಕ ಹಿಂದೂ ಉದ್ಯಮಿಗಳ ನಡುವೆ ಸಹಕಾರ, ಮಾರ್ಗದರ್ಶನ, ಜ್ಞಾನ ಹಂಚಿಕೆ, ಮಾರುಕಟ್ಟೆ ಸಂಪರ್ಕ, ಬ್ಯಾಂಕಿಂಗ್ ಸಹಾಯ ಮತ್ತು ಸಮೂಹ ಸಮೃದ್ಧಿಯನ್ನು ಉತ್ತೇಜಿಸುತ್ತದೆ. ಹಿಂದೂ ಸಮಾಜವನ್ನು ಆರ್ಥಿಕವಾಗಿ ಒಗ್ಗೂಡಿಸಿ, ಬಂಡವಾಳ, ಮಾರುಕಟ್ಟೆ ಪ್ರವೇಶ, ಮಾರ್ಗದರ್ಶನ ಮತ್ತು ಸಂಯುಕ್ತ ಹೂಡಿಕೆಗಳ ಮೂಲಕ ಹಿಂದೂ ಉದ್ಯಮಿಗಳ ಬೆಳವಣಿಗೆಗೆ ಊಇಈ ಶ್ರಮಿಸುತ್ತಿದೆ ಎಂದರು.

ಊಇಈ, ವಿ. ಡಿ. ಸಾವರ್ಕರ್ ಸೊಸೈಟಿ, ಬನಶಂಕರಿ ವಾಣಿಜ್ಯ ಸಹಕಾರ ಸಂಘ, ಉದ್ಯಮಿಗಳು, ವೃತ್ತಿಪರರು ಮತ್ತು ಸ್ವಯಂಸೇವಕರನ್ನು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಜಿಲ್ಲೆಯ ಭೌಗೋಳಿಕ ಸ್ಥಾನ, ರಸ್ತೆ ಸಂಪರ್ಕ ಮತ್ತು ಭವಿಷ್ಯದ ಕೈಗಾರಿಕಾ ಅವಕಾಶಗಳನ್ನು ಆಧರಿಸಿ ಅಭಿವೃದ್ಧಿಗೆ ಸ್ಪಷ್ಟ ಮಾರ್ಗ ರೂಪಿಸುವುದು. ಪರಸ್ಪರ ಸಂಪರ್ಕ, ಸಹಕಾರ, ವ್ಯವಹಾರ ಬೆಳವಣಿಗೆ ಮತ್ತು ಸಮುದಾಯದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವುದು.ಮಹಿಳಾ ಮತ್ತು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಉದ್ಯಮಶೀಲತೆ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ಮತ್ತು ನಾಯಕತ್ವವನ್ನು ಬೆಳೆಸುವುದು. ಸ್ವಾತಂತ್ರ್ಯದ 100 ವರ್ಷಗಳ ದೃಷ್ಟಿಯಿಂದ, ಮುಂದಿನ 20 ವರ್ಷಗಳಲ್ಲಿ ಚಿತ್ರದುರ್ಗವನ್ನು ಆರ್ಥಿಕವಾಗಿ ಬಲಿಷ್ಠ ಜಿಲ್ಲೆಯನ್ನಾಗಿ ರೂಪಿಸುವ ಕಾರ್ಯಯೋಜನೆ. ಕೇವಲ ಭಾಷಣ ಅಥವಾ ಸಭೆಗೆ ಸೀಮಿತವಾಗದೆ, ತಂಡಗಳ ರಚನೆ, ಜವಾಬ್ದಾರಿ ಹಂಚಿಕೆ ಮತ್ತು ಮುಂದಿನ ಕಾರ್ಯಯೋಜನೆಯ ಮೂಲಕ ನೈಜ ಫಲಿತಾಂಶಗಳನ್ನು ಸಾಧಿಸುವುದು ಆಗಿದೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಹಿಂದೂ ಎಕನಾಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್‍ನ ಉಪಾಧ್ಯಕ್ಷರು, ವಿ. ಡಿ. ಸಾವರ್ಕರ್ ಸೊಸೈಟಿಯ ಅಧ್ಯಕ್ಷರಾದ ನಾಗೇಂದ್ರ ವೈ. ಆರ್, ಹಿಂದೂ ಎಕನಾಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್‍ನ ಕಾಯದರ್ಶಿ ಹಾಗೂ ವಿ. ಡಿ. ಸಾವರ್ಕರ್ ಸೊಸೈಟಿಯ ನಿರ್ದೇಶಕರಾದ ದೋಣಸ್ವಾಮಿ ಡಿ. ಕೆ. ಹಿಂದೂ ಎಕನಾಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್‍ನ ಜಂಟಿ ಕಾರ್ಯದರ್ಶಿ ಶ್ರೀಮತಿ ಟಿ. ಸಿ. ಪಿ. ಗೀತಾ, ಹಿಂದೂ ಎಕನಾಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್‍ನ ಸಂಯೋಜಕರು ಹಾಗೂ ವಿ. ಡಿ. ಸಾವರ್ಕರ್ ಸೊಸೈಟಿಯ ನಿರ್ದೇಶಕರಾದ ಅಶೋಕ್ ಟಿ. ಎಲ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *